ಐಕ್ಯತೆಯು ಮಣ್ಗೂಡಿ ಭಾರತಿಯು ಬಳಲಿರಲು

ಐಕ್ಯತೆಯು ಮಣ್ಗೂಡಿ ಭಾರತಿಯು ಬಳಲಿರಲು ನಿನಗೊಬ್ಬನಿಗೆ ಮಾತ್ರ ಬರಲಿಲ್ಲ ನಿದ್ದೆ ಗಾಳಿಯನು ಸೀಳಿ ಬಹ ಸುಯ್ಯೆಲರ ಶಬ್ದಕ್ಕೆ ಸುಖದ ಸುಪ್ಪತ್ತಿಗೆಯನೊದ್ದೆ ಮೇಲೆದ್ದೆ || ಪ || ಮೈಮರೆತ ಸೋದರರ ನಾಯಪಾಡನು ನೋಡಿ ಬೆಂಕಿ ಹೊತ್ತಿದ ಹೃದಯ ತಳಮಳಿಸಿತೇನು? ತಾಯ್ನೆಲದ ಕಡುಮಮತೆ ತಿದಿಯನೊತ್ತಿದ ಹಾಗೆ ಒಡಲೊಳಗೆ ಕರುಳ ಕುಡಿ ಮಿಡುಕಾಡಿತೇನು || 1 || ಜಗವೆಲ್ಲ ಜಡವಾಗಿ ಮಲಗಿ ನಿದ್ರಿಸಿದಂದು ನಟ್ಟಿರುಳಿನೊಳಗೊಬ್ಬನೇ ನಡೆದೆ ಮುಂದೆ ಒಬ್ಬೊಬ್ಬ ಬಂಧುವನೆ ಮೇಲಕೆಬ್ಬಿಸಿ ತಂದು ಸಂಘ ಸಂಜೀವಿನಿಯ ಸ್ವೀಕರಿಸಿರೆಂದೆ || 2 || […]

Read More

ಎಲ್ಲಾ ಭೇದ ಮರೆತು

ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ          || ಪ || ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ           || 1 || ಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು ಮನ […]

Read More

ಎನ್ನೆದೆಯ ಬಿಸಿರಕ್ತ

ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ ನಾ ಬರೆಯಬಲ್ಲೆನೇ ನಾನು ಕವಿಯು ವಿಶ್ವ ಜನನಿಯ ಗರ್ಭ ಮಾತೃಭೂಮಿಯ ಬಸಿರು ತಾನ್ ತಪಿಸುತಿರೆ ಹೇಳಲಾವ ಪರಿಯು            || ಪ || ದುರ್ಬಲರ ಮರ್ದಿಸುತ ಪಶುಬಲದಿ ವರ್ಧಿಸುತ ರಾಷ್ಟ್ರರಾಷ್ಟ್ರಗಳ ಸ್ವಾತಂತ್ರ್ಯ ಸೆಳೆಯುತ್ತ ಸುಲಿಗೆ ಸಂಸ್ಕೃತಿಯೆಂದು ತಿಳಿದಿರುವ ಪಾಪಿಗಳ ಮುರಿವ ಲೇಖನಿ ಬೇಕು ರಕ್ತವದಕೆ ಮಸಿ           || 1 || ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಮೂರಕ್ಷರದೊಳೇನು ಮಾಟವಿಹುದೋ ಸ್ವಾತಂತ್ರ್ಯ […]

Read More

ಎದ್ದು ನಿಲ್ಲು ವೀರ

ಎದ್ದು ನಿಲ್ಲು ವೀರ, ದೇಶ ಕರೆದಿದೆ ಪಡೆಯ ಕಟ್ಟು ಧೀರ, ಸಮರ ಕಾದಿದೆ ರಣ ಕಹಳೆಯ ಹೂಂಕಾರದ ಸದ್ದು ಮೊರೆದಿದೆ ರಕ್ತಸಿಕ್ತ ಬಲಿಪೀಠದ ದೃಶ್ಯ ಮೆರೆದಿದೆ                             || ಪ || ಗಡಚಿಕ್ಕುವ ಆಕ್ರಂದನ ನರಳಾಟ ಚೀರಾಟ ಕಿವಿಗೊಡದಿರು ಎದೆಗೆಡದಿರು ನುಗ್ಗುತಲಿ ಮುಂದಕೆ ದೇಹ ಬಿದ್ದು ಹೆಣಗಳುರುಳಿ ರಕ್ತದಾಟದೋಕುಳಿ ಹೋರುವ ಛಲ ಕುಗ್ಗದಿರಲಿ ಧೈರ್ಯ ಮೇರು ಪರ್ವತ || 1 […]

Read More

ಎಚ್ಚರವು ಎಚ್ಚರವು

ಎಚ್ಚರವು ಎಚ್ಚರವು ವೀರಪುತ್ರರೆ ಬೇಗ ಜಾಡ್ಯ ದುಃಸ್ವಪ್ನಗಳ ಕಾಲವು ಕಳೆದಿದೆ ಎಚ್ಚೆತ್ತು ಕಣ್ಣಾಲಿ ಬಿಚ್ಚುತ್ತ ನೋಡೀಗ ಎಲ್ಲೆಲ್ಲು ಜಾಗೃತಿಯು ಜಗಜಗಿಸಿದೆ         || ಪ || ಜಾಜ್ವಲ್ಯ ಮಾನವದೋ ನವಸೃಷ್ಟಿಯಾಗುತಿದೆ ದುರ್ನಿಯಮ ದುರ್ದಿನದ ಸುಳವು ಸಲ್ಲ ನವ್ಯ ಶಕ್ತಿಯು ರಕ್ತ ಕಣದಿ ಖಣಖಣಿಸುತಿದೆ ಸ್ವಾತಂತ್ರ ಸೂರ್ಯನಾ ಬೆಳಕಿದೆಲ್ಲಾ ಘೋರ ಗರ್ಜನೆಯಿರಲಿ ದಾನವಾರ್ಭಟವಿರಲಿ ಮಾರಿ ಮೃತ್ಯುವೆ ಮುಂದು ಗುಡುಗುಡಿಸಿ ಬರಲಿ ಮಂಗಲೋತ್ಸವದಂದು ಸಂಗೀತ ಸ್ವರವೆಂದು ಅದನಾಲಿಸುತ ನುಗ್ಗು ನುಗ್ಗುವೆವು ಮುಂದು || 1 || ಶಾಂತಿಯೈ […]

Read More

ಎಚ್ಚರಗೊಳ್ಳಿ ಎಚ್ಚರಗೊಳ್ಳಿ

ಎಚ್ಚರಗೊಳ್ಳಿ ಎಚ್ಚರಗೊಳ್ಳಿ ಕೆಚ್ಚೆದೆಯ ಸಿಂಹಗಳೇ | ಎಚ್ಚರಗೊಳ್ಳಿ ಎಚ್ಚರಗೊಳ್ಳಿ ದಿಗ್ವಿಜಯದ ವ್ರತಧಾರಿಗಳೇ          || ಪ || ಮುಚ್ಚಿದೆಯೈ ಶತಮಾನಗಳಿಂದ ಗರ್ಜನೆಗೈಯುವ ವದನ ಹೆಚ್ಚಿದೆ ಕೇಸರಿಗಳ ಸಾಮ್ರಾಜ್ಯದಿ ಅರಿಗಳ ನರಿಗಳ ಚಲನ ಕಿಚ್ಚಿಕ್ಕಲು ಕಾನನ ಸಂಪತ್ತಿಗೆ ಕಾದಿದೆ ಶತ್ರು ಸಮೂಹ ಅಚ್ಚರಿ ಇದು ವನರಾಜನಿಗೀಪರಿ ಮೈಮರೆವಿನ ವ್ಯಾಮೋಹ     || 1 || ಕವಿದಿರೆ ಗವಿಯೊಳು ಭೀಕರ ಕತ್ತಲು ಬೆಳಕಿಗದೆಲ್ಲಿದೆ ಸ್ಥಾನ? ರವಿಕಿರಣದ ನಿರ್ಗಮನವು ಸಾರಿದೆ ಭಾಸ್ಕರಗೆ ಅಪಮಾನ ಆವರಿಸಿತೆ ಆರ್ಭಟದಾಸ್ಥಾನದಿ ಭಯ […]

Read More

ಉನ್ನತೋಜ್ವಲ ಗುರುಸ್ವರೂಪಿಯೆ

ಉನ್ನತೋಜ್ವಲ ಗುರುಸ್ವರೂಪಿಯೆ ಧ್ವಜ ನಮೋ ಚಿರಸ್ಪೂರ್ತಿದಾತಾ                             || ಪ || ಹೃದಯ ಸಾಗರದರುಣ ಜಲದಲಿ ಭಾವಕಮಲದ ಅಗ್ನಿಕಾಂತಿ ಧ್ಯೇಯ ಭಾಸ್ಕರನುದಯ ಕಾಲದಿ ಅರಳಿ ದಲದಲ ತಾನೆ ಪ್ರಣತಿ ಭಕ್ತಿಯಲಿ ಶುಚಿ ತಳೆದು ನಿಂತ, ದೀಕ್ಷೆಯಲಿ ಅಚಲತೆಯನಾಂತ ಬಾಳಸೌಧದ ಭವ್ಯ ಶಿಖರದ ತ್ಯಾಗಸ್ತಂಭದ ತುದಿಗೆ ಸ್ವಾಗತ         || 1 || ತಾಯ್ಧರೆಯ ಪ್ರೀತಿಯಲಿ ಯುವಜನ ಒಂದುಗೂಡುತ […]

Read More

ಉಜ್ವಲ ಸಂಸ್ಕೃತಿ ಮೈಮರೆತಿಹುದು

ಉಜ್ವಲ ಸಂಸ್ಕೃತಿ ಮೈಮರೆತಿಹುದು ಮಲಗಿದೆ ಹಿಂದುಸ್ಥಾನ್ ಎಚ್ಚರವಾಗಿ ಮೆರೆಯುವುದೆಂದು? ಜ್ವಲಂತ ರಾಷ್ಟ್ರಮಹಾನ್ ನನ್ನೀ ದೇಶ ಮಹಾನ್                                      || ಪ || ಸಿಂಧೂ ನದಿಯ ನಾಗರಿಕತೆಯು, ಪವಿತ್ರ ವೇದದ ಕಾವ್ಯದ ಕಥೆಯು ಬುದ್ಧ ಶಂಕರರ ಸಿದ್ಧಾಂತಗಳು, ಸಾಧು ಸಂತರ ಆಚಾರಗಳು ಕರಗಿದೆ ಕಾಲದಲಿ, ತೇಲಿದೆ ಬಾನಿನಲಿ            […]

Read More

ಉಜ್ವಲ ಇತಿಹಾಸ ಎಮ್ಮದು

ಉಜ್ವಲ ಇತಿಹಾಸ ಎಮ್ಮದು ಭಾರತ ನಾಡಿನ ಸ್ಫೂರ್ತಿಯದು        || ಪ || ಪವಿತ್ರ ಧರ್ಮದ ಗೌರವಕಾಗಿ ಮೃತ್ಯುವನಪ್ಪಿದ ಹಕಿಕತನೂ ಗುರುಗೋವಿಂದನ ವೀರ ಸುಪುತ್ರರು ತೆತ್ತರು ಅಸುವನು ಹರುಷದಲಿ ಧೈರ್ಯದಿ ಗೋಡೆಯ ಮಧ್ಯದಲಿ                             || 1 || ನಾಡಿನ ಗೌರವರಕ್ಷಣೆಗಾಗಿ ಸಹಿಸಿದ ರಾಣನು ಕಷ್ಟವನು ರಜಪೂತರ ನಿಜ ತೇಜವ ತೋರುತ ದೇಶದೊಳಲೆದನು ಕಂಗೆಟ್ಟು ಮಾಡಿದ ಜನತೆಯ […]

Read More

ಉಘೇ ವೀರಭೂಮಿಗೆ

ಉಘೇ ವೀರಭೂಮಿಗೆ, ಉಘೇ ಉಘೇ ಉಘೇ ಉಘೇ ಉಘೇ ವೀರಭೂಮಿಗೆ ಕಹಳೆ ಶ್ರುತಿಗೆ ರುದ್ರ ಕೃತಿಗೆ, ಸಮರರಂಗದಮರ ಸ್ಮೃತಿಗೆ || ಪ || ಎತ್ತರೆತ್ತರೆತ್ತರಕ್ಕೆ ಏರಲೆಮ್ಮ ಬಾವುಟ ಉತ್ತರುತ್ತರುತ್ತರಕ್ಕೆ ಬೆಳೆಯಲೆಮ್ಮ ಭೂಪಟ ಯೋಧವಸ್ತ್ರ ಹೆಗಲಶಸ್ತ್ರ ಧರಿಸಿ ಜನ್ಮ ಭೂಮಿಗೆ || 1 || ಅಗ್ನಿವರ್ಷ ಶೌರ್ಯಸ್ಪರ್ಶ ತೈಲಶಕಟ ಸಾವಿರ ಸಾಲು ಸಾಲು ಬೂಟುಕಾಲು ನಡೆವ ಸೈನ್ಯ ಸಾಗರ ಬಾಳಿನೆಲ್ಲ ರುಧಿರವೆಲ್ಲ ಕುದಿವ ದೃಶ್ಯ ಸೇಡಿಗೆ || 2 || ಹೊರಟಿತಿದೋ ಅಜಿಂಕ್ಯಸೇನೆ ರಾಷ್ಟ್ರಕಿದುವೆ ರಕ್ಷಣೆ ರಣಪ್ರಯಾಣ ವಿಜಯಗಾನ […]

Read More