ಒಂದಾಗಿ ಹೇಳುವೆವು ನಾವೆಲ್ಲ ಹಿಂದು

ಒಂದಾಗಿ ಹೇಳುವೆವು ನಾವೆಲ್ಲ ಹಿಂದು
ನಮ್ದೇಶ ಹಿಂದು, ನಾವೆಲ್ಲ ಹಿಂದು
ಹಿಂದೂ ಇಂದೂ ಮುಂದೂ, ನಾವೆಲ್ಲ ಹಿಂದು || ಪ ||

ಹಿಂದುಗಳು ನಾವೆಂದು ಹೇಳೋಕೆ ಭಯವೇ
ಹಿಂದುಗಳೆ ನಾವಿರಲು ಹೇಳಿದರೆ ನೋವೇ
ಯಾರಣ್ಣ ಹೇಳೋರು ಹೇಳದಿರೆ ನಾವೇ
ಮತ್ತೇನು ಬೇಕಣ್ಣ ಹೇಳದೆಯೆ ಸಾವೆ || 1 ||

ದಕ್ಷಿಣದ ಸಾಗರದ ಘೋಷಣೆಯು ಹಿಂದು
ಹೈಮಾದ್ರಿ ಮಾರ್ದನಿಯ ನೀಡುತಿದೆ ಹಿಂದು
ಬಂಗಾಳ ಹುಚ್ಚೆದ್ದು ಸಾರುತಿದೆ ಹಿಂದು
ನವ ಜೀವ ಮಂತ್ರವಿದು ನಾವೆಲ್ಲ ಹಿಂದು || 2 ||

ಹಿಂದುತ್ವದಡಿಗಲ್ಲನಲುಗಿಸಲು ಸಲ್ಲ
ಅನ್ಯಮತಜರೇ ಇಲ್ಲಿ ಭೇದವಿದು ಸಲ್ಲ
ಭಾವಿಸಲು ನೀವನ್ಯಮತಜರೇ ಅಲ್ಲ
ಪಾಪಿಗಳ ಕರ್ಮದಲಿ ನೀವಾದಿರೆಲ್ಲ || 3 ||

ಮಲಗಿರುವ ಹಿಂದುಗಳೆ ಎದ್ದೇಳಿ ಏಳಿ
ಅನ್ಯರಾಮಿಷಗಳಿಗೆ ಬಲಿಯಾಗದೇಳಿ
ಹಿಂದುಗಳು ನಾವೆಂದು ನಿರ್ಭಯದಿ ಹೇಳಿ
ಕೆಡಿಸಿ ಕೆಣಕುವರೆಲ್ಲ ಆಗುವರು ಧೂಳಿ || 4 ||

Leave a Reply

Your email address will not be published. Required fields are marked *

*

code