ಎಚ್ಚರವು ಎಚ್ಚರವು ವೀರಪುತ್ರರೆ ಬೇಗ
ಜಾಡ್ಯ ದುಃಸ್ವಪ್ನಗಳ ಕಾಲವು ಕಳೆದಿದೆ
ಎಚ್ಚೆತ್ತು ಕಣ್ಣಾಲಿ ಬಿಚ್ಚುತ್ತ ನೋಡೀಗ
ಎಲ್ಲೆಲ್ಲು ಜಾಗೃತಿಯು ಜಗಜಗಿಸಿದೆ || ಪ ||
ಜಾಜ್ವಲ್ಯ ಮಾನವದೋ ನವಸೃಷ್ಟಿಯಾಗುತಿದೆ
ದುರ್ನಿಯಮ ದುರ್ದಿನದ ಸುಳವು ಸಲ್ಲ
ನವ್ಯ ಶಕ್ತಿಯು ರಕ್ತ ಕಣದಿ ಖಣಖಣಿಸುತಿದೆ
ಸ್ವಾತಂತ್ರ ಸೂರ್ಯನಾ ಬೆಳಕಿದೆಲ್ಲಾ
ಘೋರ ಗರ್ಜನೆಯಿರಲಿ ದಾನವಾರ್ಭಟವಿರಲಿ
ಮಾರಿ ಮೃತ್ಯುವೆ ಮುಂದು ಗುಡುಗುಡಿಸಿ ಬರಲಿ
ಮಂಗಲೋತ್ಸವದಂದು ಸಂಗೀತ ಸ್ವರವೆಂದು
ಅದನಾಲಿಸುತ ನುಗ್ಗು ನುಗ್ಗುವೆವು ಮುಂದು || 1 ||
ಶಾಂತಿಯೈ ಸಮರದಲಿ ಕ್ರಾಂತಿ ಕಿಡಿಮಿಂಚಿರಲಿ
ಬಿಸಿರಕುತ ರೋಮರಂಧ್ರದಿ ಚಿಮ್ಮಲಿ
ಭವ್ಯ ಭಾರತಮಾತೆ ಎಚ್ಚೆತ್ತ ಮಕ್ಕಳಲಿ
ವರದ ಹಸ್ತವನಿರಿಸಿ ಹರಸಿನಿಂದಿರಲಿ
ನಿನ್ನ ಸೇವೆಯೊಳದುವೆ ತನುವು ತೃಣವಾಗಿರಲಿ
ಯಜ್ಞಕುಂಡದೊಳಾಹುತಿಗೆ ಸಲ್ಲಲಿ
ಧಗಧಗಿಸಲಿ ದೇಹ ಸತ್ಯ ಸಂತೋಷದಲಿ
ಅರ್ಪಿಸುವೆವಿದೋ ಪುಣ್ಯಪಾದ ಪದ್ಮದಲಿ || 2 ||