ಭಾರತಿ ನನ್ನಯ ಭಾವಕೆ ಸಿಲುಕಿದ ಪದಗಳ ನೀಪರಿ ಪೋಣಿಸಿಹೆ ರಾಗಕೆ ಬರುವುದೋ ತಾಳಕೆ ಸಿಗುವುದೋ ಭಾವಕೆ ಅರ್ಥವ ನಾನರಿಯೆ || ಪ || ನಿನ್ನಯ ಸಿರಿಮುಡಿಗೆರಗುವ ಅರ್ಹತೆ ನನ್ನೀ ಹಾರಕೆ ಇಲ್ಲ ನಿಜ ನಿನ್ನೆಯ ಮೊಗ್ಗಿದು ನಾಳೆಗು ಅರಳದೆ ನಿನ್ನಯ ಪಾದದ ಪ್ರಭೆಯಿಂದ || 1 || ನಾನಿದ ಹಾಡೆನು ಹಾಡಿಸಲಾರೆನು ಹಾಡುಗಾರನ ಹಂಗು ನನಗೇಕೆ ಕಾಡಿನ ಗಿಡದೊಳಗರಳುವ ಕುಸುಮಕೆ ಒಡೆಯನ ಗೊಡವೆಯು ಏತಕೆ ? || 2 || ಹೂವಲಿ ಚೆಲುವಿರೆ ಸವಿಮಧು ತುಂಬಿರೆ ದುಂಬಿಯು […]
ಉತ್ತರದುನ್ನತ ಹಿಮವತ್ಪರ್ವತ ದೆತ್ತರ ಬೆಳೆದಿಹ ಹೇ ಸಂತ ಸಂತಮಹಂತರ ಏಕತೆ ಸಾಧಿಸಿ ವಿಷಮತೆ ನೀಗಿದ ಧೀಮಂತ || ಪ || ಸಂತತ ಚಿಂತನ ಮಂಥನದಿಂದ ಉದಿಸಿತು ವಿಚಾರ ನವನೀತ ಸಂಘದ ಗಂಗೆಯ ಸುಂದರ ತಟದಲಿ ಸಮರಸತೆಯ ಸುರ ಸಂಗೀತ || 1 || ಬ್ರಹ್ಮಬಲದ ಜೊತೆ ಕ್ಷಾತ್ರ ಕಠೋರತೆ ಅನುದಿನ ಶಕ್ತಿಯ ಸಂಚಯನ ನಿರ್ಮೋಹತ್ವವು ನಿರಹಂಕಾರವು ಅಗಣಿತ ಗುಣಗಳ ಸಮ್ಮಿಲನ || 2 || ರಾಘವನಂದದಿ ಮಾರ್ಗವ ತೋರಿದೆ ಮೌಲ್ಯಾದರ್ಶಗಳಾಚರಿಸಿ ಮಾಧವ ತವ ಪದ ವಿರಚಿತ ಪಥದಲಿ […]
ಕೇಶವ ಸಾರಿದ ಸೂತ್ರವಿದೊಂದಕೆ ಮಾಧವ ಬರೆದನು ಭಾಷ್ಯವನು ಜ್ಞಾನ ಮಧುವ ಸವಿಸುಧೆಯನು ಉಣಿಸುತ ಕಳೆದನು ಜನಮನ ಕ್ಲೈಬ್ಯವನು || ಪ || ನಿರ್ಮಮ ಮನದಲಿ ಕರ್ಮವಗೈಯುವ ಧರ್ಮದ ಮರ್ಮವ ಬೋಧಿಸಿದ ಗುರುತರ ಹೊಣೆಯನು ಹೊರುತಲಿ ಗುರುವರ ಭಾರತದೇಕತೆ ಸಾಧಿಸಿದ || 1 || ಭಾಷೆ ಪ್ರದೇಶದ ಜಾತಿಯ ದ್ವೇಷದ ವಿಷಮ ವಿಷವು ಇದೋ ನಶಿಸುತಿದೆ ಸಮರಸ ಭಾವವು ವಿಕಸನ ಗೊಳುತಿದೆ ಗೀತ ಸಂದೇಶವು ನೆನಪಲಿದೆ || 2 || ಅಗಣಿತ ಮತ ಪಥದೊಳಗಿಹ ಸಂತರ ಮನಸಿನ ಅಂತರ […]
ಸಮಾಜ ವೀಣೆಯ ಮೀಟಿದ ಮಾಧವ ಮೊಳಗಿತು ಸುಮಧುರ ಝೇಂಕಾರ ಪ್ರತಿಧ್ವನಿಸಿ ಅನುರಣಿಸಿತು ಎಲ್ಲೆಡೆ ಸಮಸರತೆಯ ಸ್ವರ ಸಂಚಾರ || ಪ || ಜಾತಿಯ ದ್ವೇಷವು ಭೀತಿಯ ಅಳಿದಿದೆ ಪ್ರೀತಿಯ ಪ್ರೇಮದ ಸಂಚಲನ ಕಳೆಯನು ಕಳೆದು ಬೆಳೆಯನು ಬೆಳೆದು ಸ್ನೆಹದ ಧರ್ಮದ ಸಂಕಲನ || 1 || ವಿರಸವು ಅಳಿಯಿತು ಸರಸವು ಬೆಳೆಯಿತು ಸಮರಸ ಜೀವನ ರಸಪಾಕ ಸುಮಧುರ ಗಾನದ ಪಂಚಾಮೃತದಲಿ ಮಾತೆಯ ಮಾರುತಿಗಭಿಷೇಕ || 2 || ಜಾತಿಪ್ರದೇಶದ ಭಾಷೆಯ ಸ್ವರಗಳು ರಾಷ್ಟ್ರದ ಶ್ರುತಿಗೆ ಸಮೀಕರಣ ನಾಡಿನ […]
ನಾನೇರಿದೆತ್ತರಕ್ಕೆ ನೀನೇರ ಬಲ್ಲೆಯಾ? ಕೇಳಿತೆ ಉತ್ತರದ ಮೇರು ನನ್ನೊಡಲ ಗಾಂಭೀರ್ಯ ನಿನ್ನೊಳಗೆ ಇಹುದೇನು ಕೇಳಿತೆ ಕಡಲ ನೀರು ಮೇರುವಿನ ಸ್ಥೈರ್ಯ ಶರಧಿ ಗಾಂಭೀರ್ಯ ಗಳಿಸಿರುವ ಪರಿ ಎನಗೆ ಹೇಳು || ಮಾಧವನೆ || ಆ ತಾಯ ಮಮತೆ ಈ ಸ್ನೇಹ ಕವಿತೆ ಕಲಿಸಿದಳೆ ತಾಯಿ ತುಂಗೆ ಜೊತೆಗೊಯ್ವ ಪ್ರೀತಿ ವಾಗ್ಝರಿಯ ರೀತಿ ನೀಡಿದಳೆ ಸ್ಫೂರ್ತಿ ಗಂಗೆ ಗಂಗೆಯ ಸ್ನಾನ ತುಂಗೆಯ ಪಾನ ಸರಿಸಮವು ನೀನಿರಲು ನಮಗೆ || ಮಾಧವನೆ || ಆ ಬಾನು ಅವನು ಬೆಳಗುವನು ಬಾನು […]
ಹದಿಹರೆಯದ ಕುದಿ ಹೃದಯದ ಯುವಜನ ಪರಿವರ್ತನೆಯನು ಬಯಸುತಿದೆ ಅವರ ಎದೆಬಡಿತದ ಗತಿ ಮನ ಮಿಡಿತದ ಶ್ರುತಿ ರಾಷ್ಟ್ರದ ಜತೆ ಮೇಳೈಸುತಿದೆ ಕಸವನು ಕಳೆಯುತ ಮೇಲ್ಕೀಳರಿಮೆಯ ಕಸವನು ಕಳೆಯುತ ಹಿಂದುತ್ವದ ಹೊಸ ಸಂಕ್ರಮಣ ಹಳೆಹೊನ್ನಿಗೆ ಮರು ಮೆರುಗನು ನೀಡುತ ವಸುಮತಿಯೊಡತಿಗೆ ಆಭರಣ ಸಂಘದ ತರುವಿನ ಸಾಸಿರ ಶಾಖೆಗೆ ಸಮರಸ ಸುಮಲತೆ ತಬ್ಬಿಹುದು ವಿಕಸಿತ ಸುಮಗಳು ಚೆಲ್ಲಿಹ ಪರಿಮಳ ದೇಶವಿದೆಶಕು ಹಬ್ಬಿಹುದು ಕವನವೊ ಕಥನವೊ ಕಣದಲಿ ಕದನವೋ ರಾಷ್ಟ್ರೋನ್ನತಿಯದೆ ಉದ್ದೇಶ ಧರ್ಮದ ಕರೆಯಿದೆ ಕ್ಷಾತ್ರದ ನೆರವಿದೆ ಮೊಳಗಿದೆ ಭಾರತ ಜಯಘೋಷ
ಮರೆವಿನ ಅರಿವೆಯ ಪರದೆಯ ಸರಿಸುತ ಅರಿವಿನ ಪ್ರಣತಿಯ ಉರಿಸೋಣ ಹಿರಿಯರ ಚರಣದ ಗುರುತಿನ ನೆರವಲಿ ಕ್ರಮಿಸುತ ಗುರಿಯನು ಸೇರೋಣ || ಪ || ಭರತ ಭಗೀರಥರಾಳಿದ ಭಾರತ ಪರಶುಧರನ ಧುರ ಸ್ಮರಿಸೋಣ ಶಸ್ತ್ರದಿ ಶಾಸ್ತ್ರದಿ ಪ್ರೌಢಿಮೆ ಮೆರೆಯುತ ವೀರ ಧರಿತ್ರಿಯ ಉಳಿಸೋಣ || 1 || ರಾಮಾಯಣ, ಗುರು ವ್ಯಾಸರ ಭಾರತ ಸಾರಿದ ಸೂತ್ರವ ಅರಿಯೋಣ ಧರ್ಮದ ನೆಲೆಯಲಿ ಜೀವನ ನಡೆಸುತ ಜನ್ಮವ ಸಾರ್ಥಕಗೊಳಿಸೋಣ || 2 || ನರಳುತ ನೆರಳನು ಅರಸುತಲಿರುವರ ಗುರುತಿಸಿ ನೆರವನು ಈಯೋಣ […]
ನೋಡಿದೆಯಾ ಭರತಸುತ ಭಾರತದ ಬಾನಿನಲಿ ಭಾಗ್ಯರವಿ ತಾನುದಿಸಿ ಬರುತಲಿಹುದ ವರುಷ ಸಾಸಿರದಿಂದ ಬಂದಿರುವ ಭಿನ್ನತೆಯ ಕಲುಷಗಳ ಕಾರ್ಮುಗಿಲ ಕಳೆದು ಬೆಳಗುತಲಿ || ಪ || ಹೃದಯದಲಿ ಕುದಿರಕ್ತ ಮನಕೇಕೆ ಮುದಿತನವು ಹದಗೊಳಿಸು ಮೈಮನವ ಕದನದಂಕಣಕೆ ನಾಯಕನು ನೀನಾಗು ಸಾಯಕಂಗಳ ಧರಿಸು ಕಾಯವನು ಕಾಯಕಕೆ ಅಣಿಗೊಳಿಸು ಎನುತ || 1 || ಸ್ಫುರಣಗೊಳ್ಳಲಿ ಧೈರ್ಯ ಸ್ಥೈರ್ಯ ಬಲತೇಜಗಳು ಮರಣ ಮುಖನಂತಿರುವ ತರುಣ ನಿನ್ನೊಳಗೆ ಹರನಗೆಲಿದಿಹ ನರನ ವಾರಸಿಕೆ ನಿನಗಿಹುದು ಸ್ಮರಣೆಗೊಳ್ಳುತ ಕುವರ ಎದ್ದು ನಿಲ್ಲೆನುತ || 2 || […]
ಭಾರತದ ಯುವಜನತೆ ಸಿಡಿದೆದ್ದು ನಿಂತಿಹುದು ದೇವದುರ್ಲಭವೆನಿಪ ಸಂಘಶಕ್ತಿ || ಪ || ಧ್ಯೇಯ ಜಲಸಿಂಚನಕೆ ಕನಸೊಡೆದು ಮೇಲೆದ್ದು ಮೈ ಮರೆವಿನ ಪದರ ಕಿತ್ತುಬಿಸುಟು ಮುದುರಿರುವ ಗರಿಬಿಚ್ಚಿ ಗಗನಾಂಗಣಕೆ ಜಗದಗಲ ಸಂಚರಿಪ ಗರುಡನಂದದಲಿ || 1 || ತರತಮದ ಭೇದಗಳು ಅಳಿಸುತಲಿ ಜಸನದಲಿ ಬೆಸಯುತಲಿ ಮನಮನಕೆ ಭಾವಸಂಪರ್ಕ ಭಿನ್ನತೆಯ ಭಾರದಲಿ ಬಸವಳಿದ ಭಾರತಿಗೆ ಏಕರಸ ಧಾರೆಯಲಿ ಕಾಯಕಲ್ಪ || 2 || ಅಕ್ಷಯದ ಬತ್ತಳಿಕೆ ಶಿಶು ಬಾಲ ತರುಣ ಗಣ ಹೆದೆಯೇರ್ದ ಗಾಂಢಿವ ಪ್ರಾಢಗಢಣ ಗೋವು ಗ್ರಾಮದ ರಕ್ಷೆ […]
ತವಪದಕೆ ಕೋಟಿ ನಮನ ಉದಿಸಿ ಬಾರೋ ಮಾಧವ || ಪ || ಶುದ್ಧ ಹೃದಯ ಮುಗ್ಧ ಮನದ ಓ ಪ್ರಭುದ್ಧ ಮಾನವ ಭರತಸುತರ ಜಡತೆ ನೀಗಲುದಿಸಿ ಬಂದ ಮಾಧವ ದುಗ್ಧ ಧವಳ ಹಿಮದಗಿರಿಯ ಉನ್ನತಿಯನು ಮೆರೆದವ ದಗ್ಧ ಮನಕೆ ತಂಪನೆರಚಿ ಧ್ಯೇಯ ಧಾರೆ ಎರೆದವ || 1 || ಮೇರುಗಿರಿಯ ಮಾರ್ಗವೆಂದು ಕಂಟಕಮಯ ದುರ್ಗಮ ಅವನು ತೋರ್ದ ಪಥದಿ ನಡೆಯೆ ಸಾಧ್ಯವಿಹುದು ವಿಕ್ರಮ ಧ್ಯೇಯನಿಷ್ಠೆ ವೀರವ್ರತಕೆ ಜ್ಞಾನಗಂಗೆ ಸಂಗಮ ಶಕ್ತಿಶೀಲ ಜತೆಗೆ ಸೇರೆ ಮೂಡಿಬಂತು ಸಂಭ್ರಮ || […]