ಕೇಶವ ಸಾರಿದ ಸೂತ್ರವಿದೊಂದಕೆ

ಕೇಶವ ಸಾರಿದ ಸೂತ್ರವಿದೊಂದಕೆ
ಮಾಧವ ಬರೆದನು ಭಾಷ್ಯವನು
ಜ್ಞಾನ ಮಧುವ ಸವಿಸುಧೆಯನು ಉಣಿಸುತ
ಕಳೆದನು ಜನಮನ ಕ್ಲೈಬ್ಯವನು || ಪ ||

ನಿರ್ಮಮ ಮನದಲಿ ಕರ್ಮವಗೈಯುವ
ಧರ್ಮದ ಮರ್ಮವ ಬೋಧಿಸಿದ
ಗುರುತರ ಹೊಣೆಯನು ಹೊರುತಲಿ ಗುರುವರ
ಭಾರತದೇಕತೆ ಸಾಧಿಸಿದ || 1 ||

ಭಾಷೆ ಪ್ರದೇಶದ ಜಾತಿಯ ದ್ವೇಷದ
ವಿಷಮ ವಿಷವು ಇದೋ ನಶಿಸುತಿದೆ
ಸಮರಸ ಭಾವವು ವಿಕಸನ ಗೊಳುತಿದೆ
ಗೀತ ಸಂದೇಶವು ನೆನಪಲಿದೆ || 2 ||

ಅಗಣಿತ ಮತ ಪಥದೊಳಗಿಹ ಸಂತರ
ಮನಸಿನ ಅಂತರ ನೀಗಿಸುತ
ವಂಚಿತ ಸಂಕುಲ ಪಡುತಿರೆ ಸಂತಸ
ಧನ್ಯತೆಯನುಭವ ಪುಳಕಿಸುತ || 3 ||

Leave a Reply

Your email address will not be published. Required fields are marked *

*

code