ರಾಷ್ಟ್ರಭಕ್ತಿ ಅರಳುತಿಹುದು ಸ್ವಾಭಿಮಾನ ಕೆರಳುತಿಹುದು

ರಾಷ್ಟ್ರಭಕ್ತಿ ಅರಳುತಿಹುದು ಸ್ವಾಭಿಮಾನ ಕೆರಳುತಿಹುದು ಶತ್ರುಗಳೇ ಮೇರೆ ಮೀರಿ ಬಂದರೆಚ್ಚರ ! ನೀಡುವೆವು ಶತಕಗಳ ದಾಳಿಗುತ್ತರ || ಪ || ಒಡೆವ ನೀತಿ ಬಡಿವ ಭೀತಿಗೆಂದೂ ತಲೆಯ ಬಾಗೆವು ತಡೆದು ಅರಿಯ ಪಡೆಯ ಹಡೆಯ ಮೆಟ್ಟಿ ಮುಂದೆ ಸಾಗ್ವೆವು ನಡೆಯು ನಮದು ನೇರ, ನುಡಿಯು ಗಂಭೀರ || 1 || ನಮ್ಮ ಗಡಿಯ ಕಡಲ ತಡಿಯ ಗುಡಿಯ ನುಡಿಯ ರಕ್ಷಣೆ ಅದುವೆ ನಮ್ಮ ಬಾಳಗುರಿಯು ಇಲ್ಲ ಪರಾಕರ್ಷಣೆ ಹಿಂದು ಪರಮ ವೀರ ಅವನ ಬಲ ಅಪಾರ || […]

Read More

ರಕ್ಷೆಯ ಕಟ್ಟುವೆವು ನಾವು

ರಕ್ಷೆಯ ಕಟ್ಟುವೆವು ನಾವು ರಕ್ಷೆಯ ಕಟ್ಟುವೆವು ನಿಶ್ಚಯ ಮಾಡಿಹೆವು ಬಲಾಢ್ಯ ರಾಷ್ಟ್ರವ ಕಟ್ಟುವೆವು || ಪ || ಹಿಂದೂ ಸಾಗರದಲೆಗಳಸಂಖ್ಯ ಬ್ರಹ್ಮದೇವನಿಗು ಎಣಿಸಲಸಾಧ್ಯ ಕಟ್ಟಿಹ ರಕ್ಷೆಗಳಗಣಿತವಣ್ಣ ಹೊಳೆ ಹೊಳೆಯುತಲಿದೆ ಕೇಸರಿಬಣ್ಣ || 1 || ಒಂದೇ ತಾಯಿಯ ಮಕ್ಕಳು ನಾವು ಒಂದೇ ಮಣ್ಣಿನ ಕಣಗಳು ನಾವು ಮೇಲುಕೀಳುಗಳ ಭೇದವನಳಿಸಿ ಸ್ನೇಹದ ಪ್ರೇಮದ ಭಾವನೆ ಬೆಳೆಸಿ || 2 || ಎಮ್ಮೊಳಹೊರಗಿನ ಶತ್ರುಗಳನ್ನು ಸುಟ್ಟುರಿಸುತ ದುರ್ಮಾರ್ಗಿಗಳನ್ನು ದೃಢಸಂಕಲ್ಪದ ಸತ್ಪಥದಲ್ಲಿ ಮುನ್ನುಗ್ಗುತ ಜನಮನವನು ಗೆಲ್ಲಿ || 3 || ಮೈಮರೆವಿನ […]

Read More

ಭಾರ್ಗವನ ಬಾಹುಬಲ ಭುಜಕೋಟಿಗಳ

ಭಾರ್ಗವನ ಬಾಹುಬಲ ಭುಜಕೋಟಿಗಳ ತುಂಬಿ ಭೋರ್ಗರೆಯುತಿಹುದಿಲ್ಲಿ ನೋಡ ಬನ್ನಿ ಸ್ವರ್ಗಸದೃಶ ಭವ್ಯ ಭಾರತವ ನಿರ್ಮಿಸುವ ಮಾರ್ಗದಲಿ ಯುವಜನರೆ ಸಾಗಿ ಬನ್ನಿ ಸಾಹಸದ ಇತಿಹಾಸ ರಚಿಸ ಬನ್ನಿ || ಪ || ಹಿಂದು ದೇಶದ ಹಿರಿಮೆ ಜಗಕೆಲ್ಲ ಸಾರುತಲಿ ಬಂಧುಭಾವದಿ ಬಾಳ ಧನ್ಯತೆಯ ಕಾಣುತಲಿ ಸಿಂಧು ಜಲಧಿಯಸಂಖ್ಯ ಬಿಂದುಬಿಂದುಗಳಂತೆ ಒಂದುಗೂಡುತ ಬಲವ ಹೊಂದ ಬನ್ನಿ || 1 || ದುಷ್ಟತೆಯ ಹೆಡೆಮೆಟ್ಟಿ ಭ್ರಷ್ಟತೆಯ ಬಡಿದಟ್ಟಿ ಕಷ್ಟಕಾರ್ಪಣ್ಯಗಳ ಕೋಟೆಯನು ಪುಡಿಗಟ್ಟಿ ಶ್ರೇಷ್ಠತಮ ಸಂಸ್ಕೃತಿಯ ಶ್ರೇಷ್ಠತೆಯ ಮೆರೆಯಿಸುತ ಅಷ್ಟ ದಿಕ್ಕುಗಳನ್ನು ಜಯಿಸ […]

Read More

ಭಾರತೀಯರು ನಾವು ಹಿಂದು ವೀರರು

ಭಾರತೀಯರು ನಾವು ಹಿಂದು ವೀರರು ಸಾಹಸದ ಸೈನಿಕರು ಭಾರತಾಂಬೆಯಾ ಸುತರು || ಪ || ದಿಕ್ಕು ತೋಚದ ಕಡೆಗೆ ನಡೆವವರು ನಾವಲ್ಲ ದಿಕ್ಕನ್ನೆ ಬದಲಿಸುವ ಕೆಚ್ಚೆದೆಯ ಸಿಂಹಗಳು ಸಾಗರದ ಅಲೆ ಅಲೆಯ ಹಿಮ್ಮೆಟ್ಟಿಸುವ ಛಲದ ಕಂಟಕದ ಮೇರುವನೆ ಕಿತ್ತು ಬಿಸುಡುವ ಬಲದ || 1 || ಅಡಿಗಡಿಗೆ ಎದುರಾದ ವಿಘ್ನಗಳಿಗೆದೆಯೊಡ್ಡಿ ದೃಢತೆಯಿಂ ನಿರ್ಮೂಲಗೈದ ಕಲಿಗಳು ನಾವು ಶೂನ್ಯದೊಳು ಸಾಹಸದ ಇತಿಹಾಸ ಸೃಜಿಸುತಿಹ ಮಸಣದಲೂ ನಂದನದ ನವಸೃಷ್ಟಿ ರಚಿಸುವೆವು || 2 || ಭಾರತದ ಅಡಿಗಲ್ಲ ನಡುಗಿಸಿರೆ ಛಿದ್ರತೆಯು […]

Read More

ಬೆಳಕನು ಬೀರುವ ಜ್ಯೋತಿಗಳಂತೆ

ಬೆಳಕನು ಬೀರುವ ಜ್ಯೋತಿಗಳಂತೆ ಕಂಪನು ಸೂಸುವ ಪುಷ್ಪಗಳಂತೆ ಸಾರ್ಥಕ ಜೀವನ ಬಾಳೋಣ ನಾಡಿನ ಸೇವೆಯ ಮಾಡೋಣ || ಪ || ಹುಟ್ಟು – ಸಾವು ದಡಗಳ ನಡುವೆ ಹರಿಯುವ ಪಾವನ ಜೀವನದಿ ನೀರುಣಿಸುತ ಬಾಯಾರಿದ ಧರೆಗೆ ಸೇರಲಿ ಧ್ಯೇಯದ ಸಾಗರದಿ || 1 || ಕಂಬನಿಯೊರೆಸುವ ಕಾಯಕವೆಮದು ಬೆಂಬಲಕಿದೆ ದೃಢ ಸಂಕಲ್ಪ ಆದರ್ಶದ ಅಡಿಗಲ್ಲಿನ ಮೇಲೆ ಅರಳಲಿ ನವಭಾರತ ಶಿಲ್ಪ || 2 || ಅಕ್ಷಯ ಸ್ಫೂರ್ತಿಯ ಅಮಿತೋತ್ಸಾಹದ ಕರ್ಮಯೋಗಿ ಅಜಿತರ ತೆರದಿ ಪೂರ್ಣ ಸಮರ್ಪಿತ ಭಾವನೆಯಿಂದ […]

Read More

ಪಡುವಣ ತೆಂಕಣ ಮೂಡಣದಂಚಿನ

ಪಡುವಣ ತೆಂಕಣ ಮೂಡಣದಂಚಿನ ದಿವ್ಯಾಂಬುಧಿ ಸಂಗಮವು ಶಕ್ತ ಸಾಗರವು ಭಕ್ತಿಯಾಗರವು ಉಕ್ಕೇರುತಲಿದೆ ಜನಮನವು || ಪ || ಆ ಪ್ರಲಯಂಕರ ರುದ್ರಭಯಂಕರ ಹರಮಂದಿರ ಹೈಮಾದ್ರಿ ಜೀವನದಿಯುಗಮ ಭಾವನಿಧಿ ಪರಮ | ಮಹಿಮಾನ್ವಿತ ವರಗಂಗೋತ್ರಿ || 1 || ಗಿರಿಝರಿ ಕಂದರ ವನಸಿರಿ ಸುಂದರ ಗುಡಿಗೋಪುರದುದ್ಯಾನ ಗಂಗೆ ತುಂಗೆಯರ ಸಿಂಧು ಯಮುನೆಯರ | ಮಂಜುಳ ಮಂಗಳ ಅಭಿಯಾನ || 2 || ಗುರುಗೋವಿಂದರ ಪಂಚನದೀ ತಟ ವಿದ್ರೋಹದ ಸೆಲೆಯಾಯ್ತೇ ಭದ್ರಭಾರತವು ಛಿದ್ರಗೊಳ್ಳುತಲಿ | ಧರ್ಮ ಭಂಜಕರ ನೆಲೆಯಾಯ್ತೆ || […]

Read More

ನುಗ್ಗು ಮುಂದಕೆ ನೀ ನುಗ್ಗು ಮುಂದಕೆ

ನುಗ್ಗು ಮುಂದಕೆ ನೀ ನುಗ್ಗು ಮುಂದಕೆ ಹಿಗ್ಗಿನಿಂದ ಬಗ್ಗು ಬಡಿದು ಸೊಕ್ಕಿಮೆರೆವ ಅರಿಗಳ ಲಗ್ಗೆ ಹಾಕಿ ಸಗ್ಗಸಿರಿಗೆ ನುಗ್ಗು ಗೆಲುವಿನಂಗಳಕ್ಕೆ || ಪ || ತಡೆವರಾರು ನಿನ್ನನು, ಧೈರ್ಯ ನಿನ್ನೊಳಿದ್ದರೆ ಬಡಿವರಾರು ನಿನ್ನನು ಬಲವು ನಿನ್ನೊಳಿದ್ದರೆ ಹೇಡಿಯಲ್ಲ ಭಾರತ ಶಕ್ತಿವಂತವೀಧರೆ ಎಂದು ಜಗಕೆ ಸಾರುವ ಸಮಯವಿಂದು ಬಂದಿದೆ || 1 || ಬೆಟ್ಟ ಗುಡ್ಡ ಪರ್ವತ ಅಡ್ಡಿಯಾಗದೆಂದಿಗೂ ಕಲ್ಲುಮುಳ್ಳು ಕಾನನ ತಡೆಯನೊಡ್ಡದೆಂದಿಗೂ ಹೆಜ್ಜೆ ಹೆಜ್ಜೆ ತುಳಿತಕೆ ಭೂಮಿಯೆಲ್ಲ ನಡುಗಲಿ ನಿನ್ನ ವೀರ ಘೋಷಕೆ ಅರಿಯ ಸದ್ದು ಅಡಗಲಿ […]

Read More

ದೇಹವೆ ದೇಗುಲ ಆತ್ಮನೇ ದೇವರು

ದೇಹವೆ ದೇಗುಲ ಆತ್ಮನೆ ದೇವರು ಆಸನವೇ ಆರಾಧನೆಯು ಈ ಅನುಬಂಧದ ಆಧಾರದಲಿ ಅರಳಲಿ ನಿನ್ನಯ ಸಾಧನೆಯು ಅಳಿಯಲಿ ಅಸುರೀ ಭಾವನೆಯು || ಪ || ಅಮೃತಪುತ್ರನು ಸುಮನಸಮಿತ್ರನು ಪರಮಪವಿತ್ರನು ನೀನಯ್ಯಾ ಮೇಲೇಳೈ ಕೀಳರಿಮೆಯ ತ್ಯಜಿಸಿ ಕಾದಿದೆ ಉಜ್ವಲ ಭವಿತವ್ಯ || 1 || ದುಡಿದರು ದಣಿಯದ ತಡೆದರು ತಣಿಯದ ಮಡಿದರು ಮಣಿಯದ ಭೀಮಬಲ ಅಡಗಿದೆ ನಿನ್ನೊಡಲಿನ ಕಣಕಣದಲಿ ನೀ ಮೃತ್ಯುಂಜಯ ಆತ್ಮನೆಲಾ || 2 || ಕಾಯವ ನೋಯಿಸಿ ಬೆವರನು ಹಾಯಿಸಿ ಬಾಳಿನ ಸಸಿಯನು ಬೆಳೆಸಯ್ಯಾ ಜಡತೆಯ […]

Read More

ದುಃಖಿತ ಜನತೆಯ ಕಂಬನಿಯೊರೆಸಿ

ದುಃಖಿತ ಜನತೆಯ ಕಂಬನಿಯೊರೆಸಿ ಮುಚ್ಚಿದಹಂಕಾರದ ಕದ ಸರಿಸಿ ಸಾಗುವ ಬಾ ವರ ವೈಭವದೆಡೆಗೆ, ಸಾಧನೆಯಾ ಉತ್ತುಂಗದ ಕಡೆಗೆ ಉನ್ನತಿಯಾ ಗುರಿ ಸೇರುವವರೆಗೆ || ಪ || ಎತ್ತರ ನಿಂತಿಹ ಧವಳ ಹಿಮಾಚಲ ಧೈರ್ಯವ ತುಂಬಿಸಲಿ ಉನ್ನತ ಭಗವೆಯ ಮಂಗಳಲಾಸ್ಯವ ಜಲಧಿಯು ಬಿಂಬಿಸಲಿ ಜೀವಜಲಂಗಳ ಮಂಜುಳಧಾರೆಯು ಸ್ಫೂರ್ತಿಯ ಉಕ್ಕಿಸಲಿ ಉಜ್ವಲ ಚರಿತೆಯ ಪ್ರಜ್ವಲ ದೀಪವು ದಾರಿಯ ತೋರಿಸಲಿ || 1 || ದೈನ್ಯ ನಿರಾಶೆಯ ಕಾಲವು ಕಳೆಯಿತು ಇದು ಗೆಲುವಿನ ಯುಗವು ಶೌರ್ಯ ಪರಾಕ್ರಮ ಹೊಮ್ಮಲಿ ಇಂದು ತಲೆಬಾಗಲಿ […]

Read More

ದಶದಿಶೆಗಳಿಗೂ ವ್ಯಾಪಿಸುತಿಹುದು

ದಶದಿಶೆಗಳಿಗೂ ವ್ಯಾಪಿಸುತಿಹುದು ಹಿಂದೂ ಸೂರ್ಯನ ಹೊಂಗಿರಣ ಹೊಸ ದಾಖಲೆಯನು ಸ್ಥಾಪಿಸಲಿಹುದು ಹಿಂದೂ ವೀರರ ಸಂಚಲನ ಹೊಸದಿಗಂತದೆಡೆಗೀ ಪಯಣ || ಪ || ನಮ್ಮ ಪುರಾತನ ತತ್ವಬುನಾದಿಯು ಮನುಜತ್ವದ ಮೂಲಾಧಾರ ಮೃತ್ಯುಂಜಯವೀ ಪಾವನ ಸಂಸ್ಕೃತಿ ಚಿರಚೈತನ್ಯದ ಭಂಡಾರ ಹಿಂದೂ ವೀರರ ಸಂಚಲನ … ಹೊಸದಿಗಂತದೆಡೆಗೀ ಪಯಣ || 1 || ಭಾರತಮಾತೆಯ ಗೌರವಘನತೆಯ ಭಾವೈಕ್ಯದ ಸಂರಕ್ಷಣೆಗೆ ಪೂರ್ಣ ಸಮರ್ಪಿತವೆಮ್ಮಯ ಜೀವನ ನಾಡಿನ ಬಲ ಸಂವರ್ಧನೆಗೆ ಹಿಂದೂ ವೀರರ ಸಂಚಲನ … ಹೊಸದಿಗಂತದೆಡೆಗೀ ಪಯಣ || 2 || ಹಿಮಗಿರಿ […]

Read More