ಬೆಳಕನು ಬೀರುವ ಜ್ಯೋತಿಗಳಂತೆ ಕಂಪನು ಸೂಸುವ ಪುಷ್ಪಗಳಂತೆ ಸಾರ್ಥಕ ಜೀವನ ಬಾಳೋಣ ನಾಡಿನ ಸೇವೆಯ ಮಾಡೋಣ || ಪ || ಹುಟ್ಟು – ಸಾವು ದಡಗಳ ನಡುವೆ ಹರಿಯುವ ಪಾವನ ಜೀವನದಿ ನೀರುಣಿಸುತ ಬಾಯಾರಿದ ಧರೆಗೆ ಸೇರಲಿ ಧ್ಯೇಯದ ಸಾಗರದಿ || 1 || ಕಂಬನಿಯೊರೆಸುವ ಕಾಯಕವೆಮದು ಬೆಂಬಲಕಿದೆ ದೃಢ ಸಂಕಲ್ಪ ಆದರ್ಶದ ಅಡಿಗಲ್ಲಿನ ಮೇಲೆ ಅರಳಲಿ ನವಭಾರತ ಶಿಲ್ಪ || 2 || ಅಕ್ಷಯ ಸ್ಫೂರ್ತಿಯ ಅಮಿತೋತ್ಸಾಹದ ಕರ್ಮಯೋಗಿ ಅಜಿತರ ತೆರದಿ ಪೂರ್ಣ ಸಮರ್ಪಿತ ಭಾವನೆಯಿಂದ […]
ಪಡುವಣ ತೆಂಕಣ ಮೂಡಣದಂಚಿನ ದಿವ್ಯಾಂಬುಧಿ ಸಂಗಮವು ಶಕ್ತ ಸಾಗರವು ಭಕ್ತಿಯಾಗರವು ಉಕ್ಕೇರುತಲಿದೆ ಜನಮನವು || ಪ || ಆ ಪ್ರಲಯಂಕರ ರುದ್ರಭಯಂಕರ ಹರಮಂದಿರ ಹೈಮಾದ್ರಿ ಜೀವನದಿಯುಗಮ ಭಾವನಿಧಿ ಪರಮ | ಮಹಿಮಾನ್ವಿತ ವರಗಂಗೋತ್ರಿ || 1 || ಗಿರಿಝರಿ ಕಂದರ ವನಸಿರಿ ಸುಂದರ ಗುಡಿಗೋಪುರದುದ್ಯಾನ ಗಂಗೆ ತುಂಗೆಯರ ಸಿಂಧು ಯಮುನೆಯರ | ಮಂಜುಳ ಮಂಗಳ ಅಭಿಯಾನ || 2 || ಗುರುಗೋವಿಂದರ ಪಂಚನದೀ ತಟ ವಿದ್ರೋಹದ ಸೆಲೆಯಾಯ್ತೇ ಭದ್ರಭಾರತವು ಛಿದ್ರಗೊಳ್ಳುತಲಿ | ಧರ್ಮ ಭಂಜಕರ ನೆಲೆಯಾಯ್ತೆ || […]
ನುಗ್ಗು ಮುಂದಕೆ ನೀ ನುಗ್ಗು ಮುಂದಕೆ ಹಿಗ್ಗಿನಿಂದ ಬಗ್ಗು ಬಡಿದು ಸೊಕ್ಕಿಮೆರೆವ ಅರಿಗಳ ಲಗ್ಗೆ ಹಾಕಿ ಸಗ್ಗಸಿರಿಗೆ ನುಗ್ಗು ಗೆಲುವಿನಂಗಳಕ್ಕೆ || ಪ || ತಡೆವರಾರು ನಿನ್ನನು, ಧೈರ್ಯ ನಿನ್ನೊಳಿದ್ದರೆ ಬಡಿವರಾರು ನಿನ್ನನು ಬಲವು ನಿನ್ನೊಳಿದ್ದರೆ ಹೇಡಿಯಲ್ಲ ಭಾರತ ಶಕ್ತಿವಂತವೀಧರೆ ಎಂದು ಜಗಕೆ ಸಾರುವ ಸಮಯವಿಂದು ಬಂದಿದೆ || 1 || ಬೆಟ್ಟ ಗುಡ್ಡ ಪರ್ವತ ಅಡ್ಡಿಯಾಗದೆಂದಿಗೂ ಕಲ್ಲುಮುಳ್ಳು ಕಾನನ ತಡೆಯನೊಡ್ಡದೆಂದಿಗೂ ಹೆಜ್ಜೆ ಹೆಜ್ಜೆ ತುಳಿತಕೆ ಭೂಮಿಯೆಲ್ಲ ನಡುಗಲಿ ನಿನ್ನ ವೀರ ಘೋಷಕೆ ಅರಿಯ ಸದ್ದು ಅಡಗಲಿ […]
ದೇಹವೆ ದೇಗುಲ ಆತ್ಮನೆ ದೇವರು ಆಸನವೇ ಆರಾಧನೆಯು ಈ ಅನುಬಂಧದ ಆಧಾರದಲಿ ಅರಳಲಿ ನಿನ್ನಯ ಸಾಧನೆಯು ಅಳಿಯಲಿ ಅಸುರೀ ಭಾವನೆಯು || ಪ || ಅಮೃತಪುತ್ರನು ಸುಮನಸಮಿತ್ರನು ಪರಮಪವಿತ್ರನು ನೀನಯ್ಯಾ ಮೇಲೇಳೈ ಕೀಳರಿಮೆಯ ತ್ಯಜಿಸಿ ಕಾದಿದೆ ಉಜ್ವಲ ಭವಿತವ್ಯ || 1 || ದುಡಿದರು ದಣಿಯದ ತಡೆದರು ತಣಿಯದ ಮಡಿದರು ಮಣಿಯದ ಭೀಮಬಲ ಅಡಗಿದೆ ನಿನ್ನೊಡಲಿನ ಕಣಕಣದಲಿ ನೀ ಮೃತ್ಯುಂಜಯ ಆತ್ಮನೆಲಾ || 2 || ಕಾಯವ ನೋಯಿಸಿ ಬೆವರನು ಹಾಯಿಸಿ ಬಾಳಿನ ಸಸಿಯನು ಬೆಳೆಸಯ್ಯಾ ಜಡತೆಯ […]
ದುಃಖಿತ ಜನತೆಯ ಕಂಬನಿಯೊರೆಸಿ ಮುಚ್ಚಿದಹಂಕಾರದ ಕದ ಸರಿಸಿ ಸಾಗುವ ಬಾ ವರ ವೈಭವದೆಡೆಗೆ, ಸಾಧನೆಯಾ ಉತ್ತುಂಗದ ಕಡೆಗೆ ಉನ್ನತಿಯಾ ಗುರಿ ಸೇರುವವರೆಗೆ || ಪ || ಎತ್ತರ ನಿಂತಿಹ ಧವಳ ಹಿಮಾಚಲ ಧೈರ್ಯವ ತುಂಬಿಸಲಿ ಉನ್ನತ ಭಗವೆಯ ಮಂಗಳಲಾಸ್ಯವ ಜಲಧಿಯು ಬಿಂಬಿಸಲಿ ಜೀವಜಲಂಗಳ ಮಂಜುಳಧಾರೆಯು ಸ್ಫೂರ್ತಿಯ ಉಕ್ಕಿಸಲಿ ಉಜ್ವಲ ಚರಿತೆಯ ಪ್ರಜ್ವಲ ದೀಪವು ದಾರಿಯ ತೋರಿಸಲಿ || 1 || ದೈನ್ಯ ನಿರಾಶೆಯ ಕಾಲವು ಕಳೆಯಿತು ಇದು ಗೆಲುವಿನ ಯುಗವು ಶೌರ್ಯ ಪರಾಕ್ರಮ ಹೊಮ್ಮಲಿ ಇಂದು ತಲೆಬಾಗಲಿ […]
ದಶದಿಶೆಗಳಿಗೂ ವ್ಯಾಪಿಸುತಿಹುದು ಹಿಂದೂ ಸೂರ್ಯನ ಹೊಂಗಿರಣ ಹೊಸ ದಾಖಲೆಯನು ಸ್ಥಾಪಿಸಲಿಹುದು ಹಿಂದೂ ವೀರರ ಸಂಚಲನ ಹೊಸದಿಗಂತದೆಡೆಗೀ ಪಯಣ || ಪ || ನಮ್ಮ ಪುರಾತನ ತತ್ವಬುನಾದಿಯು ಮನುಜತ್ವದ ಮೂಲಾಧಾರ ಮೃತ್ಯುಂಜಯವೀ ಪಾವನ ಸಂಸ್ಕೃತಿ ಚಿರಚೈತನ್ಯದ ಭಂಡಾರ ಹಿಂದೂ ವೀರರ ಸಂಚಲನ … ಹೊಸದಿಗಂತದೆಡೆಗೀ ಪಯಣ || 1 || ಭಾರತಮಾತೆಯ ಗೌರವಘನತೆಯ ಭಾವೈಕ್ಯದ ಸಂರಕ್ಷಣೆಗೆ ಪೂರ್ಣ ಸಮರ್ಪಿತವೆಮ್ಮಯ ಜೀವನ ನಾಡಿನ ಬಲ ಸಂವರ್ಧನೆಗೆ ಹಿಂದೂ ವೀರರ ಸಂಚಲನ … ಹೊಸದಿಗಂತದೆಡೆಗೀ ಪಯಣ || 2 || ಹಿಮಗಿರಿ […]
ತುಂಗ ಹಿಮಾಲಯ ಶೃಂಗವಿಲಾಸಿನಿ ಮಂಜುಳವಾಹಿನಿ ಗಂಗಾ ಪುಂಗವಪೂಜಿತ ಮಂಗಲದಾಯಿನಿ ನಿನ್ನಯ ಕೀರ್ತಿ ಅಭಂಗ | ಬಾ ನಲಿದಾಡುತ ಬಾ || || ಪ || ಪರಮೇಶ್ವರ ಹರನರಗಿಣಿ ನೀನು ಕಲಕಲನಾದ ತರಂಗಿಣಿ ನೀನು ಭಾರತ ಹೃದಯ ವಿಹಾರಿಣಿ ನೀನು ಅಗಣಿತ ಭಾಗ್ಯಪ್ರದಾಯಿನಿ ನೀನು ಬಾ ನಲಿದಾಡುತ ಬಾ || 1 || ಸಾಧಕರಿಗೆ ಭವತಾರಿಣಿಯಾಗಿ ಪೂಜಕರಿಗೆ ಅಘನಾಶಿನಿಯಾಗಿ ನಾಡಿನ ತಾಪ ನಿವಾರಿಣಿಯಾಗಿ ಕಶ್ಮಲ ಕಲಿ ಸಂಹಾರಿಣಿಯಾಗಿ ಬಾ ನಲಿದಾಡುತ ಬಾ || 2 || ಹಿಂದು ಸಮಾಜದ […]
ತಾಯಿ ಭಾರತಿಯ ಪಾದಪದ್ಮಗಳ ಪೂಜಿಸೋಣ ಬನ್ನಿ | ಹಿಂದು ಸಾಗರದ ಬಿಂದುಬಿಂದುಗಳೆ ಒಂದುಗೂಡಿ ಬನ್ನಿ || || ಪ || ಧ್ಯೇಯಭಾಸ್ಕರನ ದಿವ್ಯಕಿರಣಗಳ ನವ್ಯರಮ್ಯಲಾಸ್ಯ ತರುಣರಂಗದೊಳು ಅರುಣಗೈಯುತಿಹ ನವೋದಯದ ನಾಟ್ಯ ಬಾಹುಬಾಹುಗಳ ಸ್ಫುರಣಗೊಳಿಸುತಲಿ ನಲಿಯುತೀಗ ಬನ್ನಿ || || 1 || ಶಕ್ತಿಯಿಂದ ಅಭಿವ್ಯಕ್ತಗೊಳಿಸಿರೈ ದೇಶಭಕ್ತಿಯನ್ನು ತಪ್ತಮನಗಳಲಿ ಸುಪ್ತವಾಗಿರುವ ಧ್ಯೇಯದೀಪ್ತಿಯನ್ನು ತ್ಯಾಗ ಸಾಹಸದ ಪುಷ್ಪಮಾಲೆಯನು ತಾಯ್‍ಗೆ ತೊಡಿಸಬನ್ನಿ || || 2 || ಮಾತೃಭುವಿಯ ವಿಚ್ಛಿದ್ರಗೊಳಿಸುತಿರೆ ಕ್ಷುದ್ರ ಅರಿಯ ಸಂಚು ಪ್ರಲಯರುದ್ರನುರಿಗಣ್ಣ ತೆರೆಸಿರೈ ಹರಿಸಿ ಪ್ರಖರ ಮಿಂಚು […]
ತರುಣ ಬಲದ ಜಲಧಿ ಭರದಿ ಭೋರ್ಗರೆದಿದೆ ಭರತ ಭುವಿಯ ಭಾಗ್ಯದ್ವಾರವಿಂದು ತೆರೆದಿದೆ ಬಿಂದು ಬಿಂದು ಸಿಂಧುವಾಗಿ ಉಕ್ಕಿ ಮೊರೆದಿದೆ ಹಿಂದು ಹಿಂದು ಎಂಬ ಘೋಷ ಮುಗಿಲಮುಟ್ಟಿದೆ ಜೈ ಭಾರತಿ ಜೈ ಭಾರತಿ ಜೈ ಭಾರತಿ ಅಮರ ನಿನ್ನ ಕೀರುತಿ || ಪ || ಕಷ್ಟನಷ್ಟವೇನೆ ಬರಲಿ ನಿಷ್ಠೆ ಎಮದು ರಾಷ್ಟ್ರಕೆ ಭ್ರಷ್ಟರನ್ನು ಬಡಿದು ಅಟ್ಟಿ ದುಷ್ಟರನ್ನು ದೂರಕೆ ಧೂರ್ತ ಶತ್ರುಗಳನು ಮೆಟ್ಟಿ ಚೆಂಡಾಡುತ ರುಂಡವ ಗೈವೆವಿಂದು ಸಮರ ಭೂಮಿಯಲ್ಲಿ ರುದ್ರತಾಂಡವ ಜೈ ಭಾರತಿ ಜೈ ಭಾರತಿ ಜೈ […]
ಜ್ಞಾನದಾತನೆ ಚಿರಪುನೀತನೆ ಧ್ಯೇಯ ದೇವನೆ ವಂದನೆ ಜೀವನಕೆ ಸಾರ್ಥಕತೆ ಕರುಣಿಸು ಗುರಿಯ ಸೇರಲಿ ಸಾಧನೆ || ಪ || ಕಾಯದಾ ಗುಡಿಯಲ್ಲಿ ನಿನ್ನಯ ದಿವ್ಯಮೂರ್ತಿಯನಿರಿಸಿದೆ ತಾಯಿ ಭೂಮಿಯ ಸೇವೆಗೈಯುವ ಶಪಥವನು ಸ್ವೀಕರಿಸಿದೆ ಮಾಯಗೊಳಿಸಿದೆ ಮನದ ಭ್ರಾಂತಿಯ ಭ್ರಮೆಯ ಕಂಗಳ ತೆರೆಸಿದೆ || 1 || ಕದನಕಂಜದ ದಮನಕಳುಕದ ಭರತಭೂಮಿಯ ಪೌರುಷ ಹೃದಯಸದನದಿ ತುಂಬಿ ಬೆಳೆಸಿದೆ ಶೌರ್ಯಛಲಬಲ ಸಾಹಸ ಉದಯಭಾಸ್ಕರನಂತೆ ಬೆಳಗಿದೆ ತಿಮಿರಮಯ ಮನದಾಗಸ || 2 || ಕೀರ್ತಿಪಥದಲಿ ಮುಂದೆ ನಡೆಯುವ ಸ್ಫೂರ್ತಿಯನು ನೀ ನೀಡಿದೆ ಧೂರ್ತ […]