ರಾಷ್ಟ್ರಭಕ್ತಿ ಅರಳುತಿಹುದು ಸ್ವಾಭಿಮಾನ ಕೆರಳುತಿಹುದು
ಶತ್ರುಗಳೇ ಮೇರೆ ಮೀರಿ ಬಂದರೆಚ್ಚರ !
ನೀಡುವೆವು ಶತಕಗಳ ದಾಳಿಗುತ್ತರ || ಪ ||
ಒಡೆವ ನೀತಿ ಬಡಿವ ಭೀತಿಗೆಂದೂ ತಲೆಯ ಬಾಗೆವು
ತಡೆದು ಅರಿಯ ಪಡೆಯ ಹಡೆಯ ಮೆಟ್ಟಿ ಮುಂದೆ ಸಾಗ್ವೆವು
ನಡೆಯು ನಮದು ನೇರ, ನುಡಿಯು ಗಂಭೀರ || 1 ||
ನಮ್ಮ ಗಡಿಯ ಕಡಲ ತಡಿಯ ಗುಡಿಯ ನುಡಿಯ ರಕ್ಷಣೆ
ಅದುವೆ ನಮ್ಮ ಬಾಳಗುರಿಯು ಇಲ್ಲ ಪರಾಕರ್ಷಣೆ
ಹಿಂದು ಪರಮ ವೀರ ಅವನ ಬಲ ಅಪಾರ || 2 ||
ಶುದ್ಧಹೃದಯ ಸ್ನೇಹವೆಮದು ಮುಗ್ಧನಾದ ಗೆಳೆಯಗೆ
ಸಿದ್ಧರಿಹೆವು ಯುದ್ಧಗಳಿಗೆ ಬದ್ಧರಯ್ಯ ಗೆಲುವಿಗೆ
ಕಾದಿ ರಣದಿ ಘೋರ, ಹರಿಸಿ ರಕ್ತಧಾರಾ || 3 ||
ಪಂಚನದಿಯ ಪುಣ್ಯತಟದಿ ಹೂಡಿ ಕುಟಿಲ ಸಂಚನು
ಒಡೆದು ನಾಡಿನೈಕಮತ್ಯ ಹಾಕುತಿಹರು ಹೊಂಚನು
ಖೂಳರಿಪು ಸಂಹಾರ, ಗೈಯಲಿಂದು ಬಾರ || 4 ||
ಈ website ನನಗೆ ಬಹಳ ಉಪಯೋಗ ಆಗುತ್ತಿದೆ.. ಧನ್ಯವಾದ ತುಂಬ ಒಳ್ಳೆ ಕೆಲಸ..
ಹಾಗೆಯೇ..
ಸಾಹಿತ್ಯದಲ್ಲಿ ದಾಳಿಗುತ್ತರ ಎಂದಿದೆ ಆದರೆ ಹಾಡುವಾಗ ಸೋಲಿಗುತ್ತರ ಎಂದು ಹಾಡಿದ್ದಾರೆ.. ದಯವಿಟ್ಟು ಸರಿಪಡಿಸಿ..
ದಾಳಿಗುತ್ತರ ಸರಿಯಾದ ಬಳಕೆ. ಹಾಡಿನಲ್ಲಿ ಬದಲಿಸಲಾಗುವುದು. ನಿಮ್ಮ ಸಲಹೆಗೆ ಧನ್ಯವಾದಗಳು.