ರಾಷ್ಟ್ರಭಕ್ತಿ ಅರಳುತಿಹುದು ಸ್ವಾಭಿಮಾನ ಕೆರಳುತಿಹುದು

ರಾಷ್ಟ್ರಭಕ್ತಿ ಅರಳುತಿಹುದು ಸ್ವಾಭಿಮಾನ ಕೆರಳುತಿಹುದು
ಶತ್ರುಗಳೇ ಮೇರೆ ಮೀರಿ ಬಂದರೆಚ್ಚರ !
ನೀಡುವೆವು ಶತಕಗಳ ದಾಳಿಗುತ್ತರ || ಪ ||

ಒಡೆವ ನೀತಿ ಬಡಿವ ಭೀತಿಗೆಂದೂ ತಲೆಯ ಬಾಗೆವು
ತಡೆದು ಅರಿಯ ಪಡೆಯ ಹಡೆಯ ಮೆಟ್ಟಿ ಮುಂದೆ ಸಾಗ್ವೆವು
ನಡೆಯು ನಮದು ನೇರ, ನುಡಿಯು ಗಂಭೀರ || 1 ||

ನಮ್ಮ ಗಡಿಯ ಕಡಲ ತಡಿಯ ಗುಡಿಯ ನುಡಿಯ ರಕ್ಷಣೆ
ಅದುವೆ ನಮ್ಮ ಬಾಳಗುರಿಯು ಇಲ್ಲ ಪರಾಕರ್ಷಣೆ
ಹಿಂದು ಪರಮ ವೀರ ಅವನ ಬಲ ಅಪಾರ || 2 ||

ಶುದ್ಧಹೃದಯ ಸ್ನೇಹವೆಮದು ಮುಗ್ಧನಾದ ಗೆಳೆಯಗೆ
ಸಿದ್ಧರಿಹೆವು ಯುದ್ಧಗಳಿಗೆ ಬದ್ಧರಯ್ಯ ಗೆಲುವಿಗೆ
ಕಾದಿ ರಣದಿ ಘೋರ, ಹರಿಸಿ ರಕ್ತಧಾರಾ || 3 ||

ಪಂಚನದಿಯ ಪುಣ್ಯತಟದಿ ಹೂಡಿ ಕುಟಿಲ ಸಂಚನು
ಒಡೆದು ನಾಡಿನೈಕಮತ್ಯ ಹಾಕುತಿಹರು ಹೊಂಚನು
ಖೂಳರಿಪು ಸಂಹಾರ, ಗೈಯಲಿಂದು ಬಾರ || 4 ||

3 thoughts on “ರಾಷ್ಟ್ರಭಕ್ತಿ ಅರಳುತಿಹುದು ಸ್ವಾಭಿಮಾನ ಕೆರಳುತಿಹುದು

  1. ಈ website ನನಗೆ ಬಹಳ ಉಪಯೋಗ ಆಗುತ್ತಿದೆ.. ಧನ್ಯವಾದ ತುಂಬ ಒಳ್ಳೆ ಕೆಲಸ..
    ಹಾಗೆಯೇ..
    ಸಾಹಿತ್ಯದಲ್ಲಿ ದಾಳಿಗುತ್ತರ ಎಂದಿದೆ ಆದರೆ ಹಾಡುವಾಗ ಸೋಲಿಗುತ್ತರ ಎಂದು ಹಾಡಿದ್ದಾರೆ.. ದಯವಿಟ್ಟು ಸರಿಪಡಿಸಿ..

    1. ದಾಳಿಗುತ್ತರ ಸರಿಯಾದ ಬಳಕೆ. ಹಾಡಿನಲ್ಲಿ ಬದಲಿಸಲಾಗುವುದು. ನಿಮ್ಮ ಸಲಹೆಗೆ ಧನ್ಯವಾದಗಳು.

      1. ದಾಳಿಗುತ್ತರ ಸರಿಯಾದ ಬಳಕೆ. ಹಾಡಿನಲ್ಲಿ ಇಂದು ದಿನಾಂಕ 17:09:2023 ವರೆಗೂ ಬದಲಾವಣೆ ಆಗಿರುವುದಿಲ್ಲ.

Leave a Reply to ganamala Cancel reply

Your email address will not be published. Required fields are marked *