ನಿನ್ನನು ಪೂಜಿಸಲೆಂದೆ ದೂರದಿಂದ ಬಂದೆ ಸಲಕರಣೆಯ ಬೇಕಾದುದು ಎಲ್ಲವ ತಂದೆ || ಪ || ಶಿರವಿದ ತಂದಿರುವೆ ನಮಿಸಲು ನಿನ್ನಡಿಗೆ ಕಣ್ಗಳ ನಿನ್ನಯ ಶುಭದರ್ಶನಕೆ ಕಿವಿಗಳು ಎರಡನು ಹದಗೊಳಿಸಿಟ್ಟಿರುವೆ ಗುಣಸಂಕೀರ್ತನೆಯನು ಕೇಳಲಿಕೆ ನಾಲಗೆಯನು ನಾ ಮೀಸಲು ಮಾಡಿರುವೆ ನಾಮಾಮೃತಸ್ರೋತವ ಸವಿಯಲಿಕೆ ಹೃದಯದ ಸಿಂಹಾಸನವನು ಅಣಿಗೊಳಿಸಿ ಮನವನೆ ಹಾಸಿಗೆಯೊಲು ಬಿಡಿಬಿಡಿಸಿ ಕಟ್ಟಿರುವೆನು ಭಾವನೆಗಳ ಉಯ್ಯಾಲೆ ತೂಗಲಿದೋ ಕಲ್ಪನೆಗಳ ಮಾಲೆ || 1 || ಅಭಿಷೇಕಕೆ ಬಾಷ್ಪಾಂಜಲಿ ತಂದಿರುವೆ ಶ್ವಾಸೋಚ್ಛ್ವಾಸವೆ ಮೃದುಚಾಮರವು ನಿನ್ನಯ ಪಾದವನೊತ್ತಲು ಹೇ ದೇವ ಎರಡೂ ಕೈಗಳನಿದೊ […]
ನಾಡನೊಡೆದು ಗಾದಿಪಡೆದು ಸ್ವತ್ವ ಮರೆತು ಸ್ವಾರ್ಥ ಕಲಿತು ಸ್ವಜನ, ಬಂಧು ಭಗಿನಿಯರನು ವೈರಿ ಸೆರೆಗೆ ದೂಡಿದೆ ; ಹೃದಯ ಹರಿದು ಮನವ ಮುರಿದು ರಾಷ್ಟ್ರದೊಡಲ ಕೊರೆದು ಕೊರೆದು ಮಾತೃಕ್ಷೀರ ಮೂಲೆಗಿರಿಸಿ ಘೋರವಿಷವನೂಡಿದೆ ! || ಪ || ಶೀಲ ಸತ್ಯ ನಲಿದ ನೆಲದಿ, ರಾಮರಾಜ್ಯ ಮೆರೆದ ಸ್ಥಳದಿ ಭ್ರಷ್ಟಗುಣವ ಬೆಳೆದು ಸತ್ಯದೆಲ್ಲ ಹತ್ಯೆಮಾಡಿದೆ ; ವೇದಗಾನ ಭಕ್ತಿಪಾನ, ಶೌರ್ಯ ವಿಭವ ಸ್ವಾಭಿಮಾನ ತೊರೆದು ನಿಂತು ಕರವ ನೀಡಿ ಜಗದಿ ಭಿಕ್ಷೆ ಬೇಡಿದೆ ! || 1 || […]
ನಡೆಸು ಮುನ್ನಡೆಸು ಹೇ ಭಗವತಿ ಬೆಳಗು ನಮ್ಮೊಳು ಧ್ಯೇಯಜ್ಯೋತಿ || ಪ || ಪ್ರೇರಣೆಯ ಸಸಿ ಮೊಳೆಸಿ ಬೆಳೆಸಲು ಹರಿಸುತಿರು ವಾತ್ಸಲ್ಯಧಾರೆ ಕಷ್ಟನಷ್ಟದ ರಾಶಿ ಎದುರಿಸೆ ನಿನ್ನ ನೆನಪೇ ಖಡ್ಗಧಾರೆ ಸತತವೂ ಪಥದಲೇ ನಡೆಸುತ ಗೊಳಿಸು ಸಾರ್ಥಕ ಜೀವನಗತಿ || 1 || ವ್ಯಾಘ್ರವಾಹನೆ ಸುಸ್ಮಿತಾನನೆ ಮೆಟ್ಟಿ ಬಾ ನಮ್ಮೆದೆಯ ಸ್ವಾರ್ಥ ಮುಟ್ಟು ಬಾ ಮನದಾಳದಾಳವ ತಟ್ಟಿ ತೆರೆ ಚೈತನ್ಯಸ್ರೋತ ಸುಪ್ತ ಶಕ್ತಿಯ ಎತ್ತಿ ಅರಳಿಸು ವಿಸ್ತರಿಸುವೊಲು ಕಾರ್ಯವ್ಯಾಪ್ತಿ || 2 || ಹಿಂದುಭಗಿನಿಯರಿಂದು ಹಾಡುವ ಐಕ್ಯಗಾನದ […]
ನಡೆ ಪಥಿಕನೆ ಅಡಿ ಮುಂದಿರಿಸಿ ಗುರಿಯೆಡೆಗೇ ಗಮನವನಿರಿಸಿ ಸಂಕಟಗಳ ಹಾದಿಯ ಗುಡಿಸಿ ಸಂಗಡಿಗರ ಪಡೆ ಸಂಘಟಿಸಿ || ಪ || ನೆಲೆಗೊಳ್ಳಲಿ ಭರವಸೆ ಬಲಿತು ಭೀತಿ ನಿರಾಶೆಯ ಬಿಡು ಮರೆತು ನಿಶಿದಿನ ಚಿಂತಿಸು ಹಂಬಲಿಸು ಕರ್ತವ್ಯವನೊಂದನೆ ಕುರಿತು ತ್ವರೆಗೊಳ್ಳುತ ಧಾವಿಸು ಮುಂದೆ ಸ್ವಾರ್ಥತೆ ಕ್ಷುದ್ರತೆ ಬದಿಗಿರಿಸಿ || 1 || ನವಚೇತನ ತುಂಬಲಿ ಭರದಿ ಹಿಂದುಸ್ಥಾನದ ಜೀವನದಿ ಒಗ್ಗೂಡುತ ನುಗ್ಗುವ ನಮ್ಮೀ ಹಿಂದುತ್ವದ ಜೀವನದ ನದಿ ನಿಶ್ಚಿತವಿದು ಪಥ ಓ ಪಾಂಥ ನಡೆ ನಡೆ ಬಾಳನು ಮುಡುಪಿರಿಸಿ […]
ತುಂಬಿದೆ ದೇಶವ ಒಡೆಯುವ ಭ್ರಷ್ಟತೆ ಕೆಟ್ಟಿತೆ ಶಾಸಕರದು ದೃಷ್ಟಿ ? ಮೈತಾಳಿತು ನಾಗಾದೇಶವಿದೋ – ನಾಯಕ ಮುಖ್ಯನ ನವಸೃಷ್ಟಿ ! || ಪ || ಹುಟ್ಟಿದ ದಿವಸಕೆ ಹೆಣಗಳ ಕಾಣಿಕೆ ದಿನಬೆಳಗಾದರೆ ಅಪಮಾನ ! ದಿನದಿನವೂ ಕಿರಿದಾಗುತಲಿದೆ ನೆಲ ಒಳನುಗ್ಗುತಲಿದೆ ನವಚೀನ ! || 1 || ಕಾರಣ ಸರಕಾರದ ಸಂಧಾನಕೆ ನಾಡಿನ ಗಡಿಗಳೊಳಜ್ಞಾನ ಸ್ವಾರ್ಥದ ಜನರೊಂದೆಡೆ, ಮತ್ತೊಂದೆಡೆ ಮಣ್ಗೂಡಿದೆ ರಾಷ್ಟ್ರದ ಮಾನ ! || 2 || ಕಿಂದರಿ ಗೀತೆಯು ಕೋಣನಿಗೇತಕೆ ಸಾಕಾಯಿತು ಕೇಳೀ ಕೇಳಿ […]
ಜನ್ಮವ ತಳೆದಿದೆ ಜನರೊಳು ಬೆಳೆದಿದೆ ಸಾಕಾರದಿ ಸಮಗ್ರ ಕ್ರಾಂತಿ ಮೋsಡದೊಡಲಿನ ಕ್ರಾಂsತಿಸೂರ್ಯನ ಬಿಡುಗಡೆಯೇ ನಿಜಸಂಕ್ರಾಂತಿ || ಪ || ಜನತಂತ್ರವ ಉಸಿರಾಡುವ ಮನೆಗಳ ದೀಪವನಾರಿಸುವ ಪ್ರಯತ್ನ ನಡೆಸಿದೆ ದುಶ್ಯಾಸನ ಮನೆಯೊಲೆಗಳ ಬೆಂಕಿಯ ಅಳಿಸುವ ಶತಯತ್ನ || 1 || ಸ್ವಾತಂತ್ರ್ಯದ ಬೆಂಕಿಯು ಮೃತ್ಯುಂಜಯ ಎಂದೆಂದಿಗು ತಾ ಅವಿನಾಶಿ ಮನೆಯೊಳು ಆರಿದವೊಲು ತೋರಿದರೂ ಮನದೊಳು ಉರಿದಿದೆ ಧಗಧಗಿಸಿ || 2 || ನಂದದ ಚ್ಯುತಿ ಹೊಂದದ ವಡಬಾನಲ ಹಿಂಸೆಯ ಕಡೆಗೋಲಿಗೆ ಸಿಲುಕಿ ಎದೆ ಕೆಚ್ಚಾಗುತ ಕಾಳ್ಗಿಚ್ಚಾಗುತ ಕಿಡಿಗೆದರಿದೆ ದಾಸ್ಯವ […]
ಜನಸ್ವಾತಂತ್ರ್ಯದ ಸೂರ್ಯೋದಯದಲಿ ಸುಸ್ವಾಗತ ಜನಮನ ದೊರೆಗೆ ಸುವಿಚಾರದ ಮಧುವೆರೆಯುತ ಬಂದಿಹ ಶ್ರೀ ಮಧುಕರ ದೇವರಸರಿಗೆ || ಪ || ಸೆರೆಮನೆಯಿಂದಲೆ ಸೂತ್ರವ ಆಡಿಸಿ ಎರೆದಿರಿ ಸ್ಫೂರ್ತಿಯ ಯುವಜನಕೆ ದಾಸ್ಯದ ದುಃಖವ ತೊಲಗಿಸಿದಾತನೆ ಸ್ವಾಗತವಿದೊ ಕರ್ನಾಟಕಕೆ || 1 || ತೆಂಕಣ ಅಡವಿಯ ಘೀಳಿಡುವಾನೆಯ ಸೊಂಡಿಲ ಕಹಳೆಯ ಮೊಳಗಿನಲಿ ಸಂತರ ಶರಣರ ದಾಸವರೇಣ್ಯರ ಬೋಧನೆ ಕೀರ್ತನೆ ವಚನದಲಿ || 2 || ತುಂಗಾಭದ್ರೆಯ ಕೃಷ್ಣಾ ಕಪಿಲೆಯ ಕಾವೇರಿಯ ಕಲರವದೊಳಗೆ ಕನ್ನಡ ಜನದಾತ್ಮೀಯತೆ ಸೂಸುವ ಶ್ರೀಗಂಧದ ಸೌರಭದೊಳಗೆ || 3 […]
ಗೌರೀಶಂಕರದೆತ್ತರಕೇರಲಿ ಜೀವನದಾಕಾಂಕ್ಷೆಯ ಪರ್ವತವು ಗಗನದ ವರವಿಸ್ತಾರವ ತಳೆಯಲಿ ಹೃದಯದ ಮಹದಾಸೆಯ ಸಾಗರವು || ಪ || ಧರ್ಮದ ಭೂಮಿಯ ದಿವ್ಯಾಕಾಶದ ನಾಡಿನ ಒಡೆತನ ವಹಿಸುವರಾರು ? ಇಲ್ಲೆಮಗಾಗಿಯೆ ಕಾಯುತ ಕರೆಯುತ ಭಾಗ್ಯವೆ ಕುಳಿತಿದೆ ಬರುವವರಾರು ? || 1 || ಸಿಂಧೂಸಾಗರ ಹಿಂದೂ ಸಾಗರ ಗಂಗಾಸಾಗರಗಳ ಪರಿವಾರ ಸುಂದರ ವನಗಳು ಪ್ರೀತಿಯ ಜನಗಳು ತೆರೆತೆರೆ ಗಿರಿಶಿಖರದ ಸಂಸಾರ ! || 2 || ನಮ್ಮಯ ನಾಡನು ಬಣ್ಣಿಪ ಹಾಡನು ಹೇಳಲು ಕೇಳಲು ಕನಿಕರಿಸುವೆಯಾ ? ಜನಗಳ ಪಾದದ […]
ಗೊತ್ತಿಲ್ಲ ಗುರಿಯಿಲ್ಲ ಎತ್ತೆಂದರತ್ತತ್ತ ಅವರಿವರ ಕಾಲ್ಚೆಂಡಿನಂತಾಗಿ ಒದ್ದೆಡೆಗೆ ಓಟ ಎದ್ದವರ ಕೆಳಗೆಳೆದು ನಾವೆ ನಮ್ಮನು ತುಳಿದು ಸೂರ್ಯ ಸಾಯುವ ಕಡೆಗೆ ದಾರಿಯರಸುವ ವಿಕಟ ನೋಟ || ಪ || ನೋಡಿದೆವು ಓಡಿದೆವು ಹೀಗೆ ಪರದಾಡಿದೆವು ನಾಲ್ಕಾರು ಶತಮಾನ ಮಾರುಕಟ್ಟೆಗೆ ಬಂತು ಮಾನ ಆಗೊಂದು ವಿಜಯದಶಮಿಯ ದಿನದಿ, ಹುದುಗಿದ್ದ ಹೃದಯದಾಸೆಯ ಹೊರಗೆಳೆದೆ ಹೊರಡಿಸಿದೆ ಬಯಲಗಾನ || 1 || ಸೈತಾನನನುಚರರ ಸ್ವೈರ ತುಳಿತಕೆ ಸಿಕ್ಕಿ ನೂರ್ಕಾಲ ನಂಜೇರಿ ನವೆದು ನಲುಗಿದ ನಾಡಿನೆದುರು ಹಾಲುಬಟ್ಟಲನಿಟ್ಟೆ ಹೆಸರ ಹಿಗ್ಗನು ಕೊಟ್ಟೆ ನೂರೆಂಟು […]
ಕೇಳಿರಿದೋ! ಹರಿಯಿತು ಪರದಾಸ್ಯದ ಬಂಧನವು ದುಮದುಮಿಸುತಲಿಹುದೋ ರಾಯಗಡ ಸ್ಪಂದನವು || ಪ || ದುರ್ಗಕೆ ಶೋಭೆಯಾಗಿದೆ ಹಬ್ಬದ ವಾತಾವರಣ ನಾಲ್ದೆಸೆಗೂ ರಂಗೋಲೆ ಶುಭ ತೋರಣದಾಭರಣ ಎಲ್ಲೆಡೆಗೂ ಹರಡಿತು ಆನಂದವೆ ಆನಂದ || 1 || ಅಂಬರದೊಳು ಭಗವಾ ಹಾರಾಡಿದೆ ಡೌಲಿನಲಿ ಧ್ವಜರಕ್ಷಣೆಗಾಗಿ ಸೈನ್ಯವಿದೆ ಠೀವಿಯಲಿ ತೋಪಿನ ಗರ್ಜನೆಯು ಪ್ರತಿದನಿಸಿದೆ ಕ್ಷಿತಿಜದಲಿ || 2 || ಕಿಲ್ಲೆಯ ದರವಾಜ ಹೊರಳಿದೆ ದಿಲ್ಲಿಯ ಕಡೆಗೆ ಶಿವರಾಯನ ಮನದ ಬಯಕೆಯ ಗ್ರಹಿಸಿದ ಹಾಗೆ ಉಳಿದಿಲ್ಲವು ದೂರ ಈಗ ಸಿಂಧ ಕಾಶ್ಮೀರ || […]