ಉತ್ತರ ದಕ್ಷಿಣ ದೇಸಿಗರೋ ಬಡವರೊ, ಬಲು ಸಿರಿ ಸಂಪದರೋ ಅಂತ್ಯಜ ಅಗ್ರಜ ಭೇದಗಳಿಲ್ಲದೆ ಒಂದೇ ನಾವಿಂದು ಹೇಳಿರಿ ಬಂಧು ಎಲ್ಲರು ಹಿಂದು ಒಂದೇ ನಾವಿಂದು || ಪ || ಸಿಂಧೂ ಗಂಗೆ ತುಂಗೆಯದು ಗೋದಾವರಿ ಕಾವೇರಿಯದು ಹರಿಯುವ ಸಾವಿರ ನದಿಗಳದು ಒಂದೇ ನೀರೆಂದು || 1 || ಸಿಂಧೂ ಬಯಲಿನ ಗತ ಇತಿಹಾಸ ಎಲ್ಲೋರದ ಗುಡಿ ಗಿರಿ ಕೈಲಾಸ ಮಲಗಿದ ಹಂಪೆಯ ಅಂದಿನ ಹಾಸ ನೆನೆಯುವ ಎಂದೆಂದೂ || 2 || ಕಲಿಗಳ ವೀರಾವೇಶದ ಗಾಥೆ ಕವಿಗಳ […]
ಮಾತೃಭಕ್ತಿ ಮೂಡಲಿ ದೇಶ ಶಕ್ತವಾಗಲಿ || ಪ || ಹೇ ಸುಧೀರ ಮೇಲಕೇಳು ಶತ್ರುಬಲವ ಸೀಳು ಹೂಳು ಭಯವು ವೈರಿಗಾಗಲಿ ಜಯವು ಧರ್ಮಕಾಗಲಿ || 1 || ಚಿತಾಭಸ್ಮ ತವ ಪ್ರತಾಪ ಪೃಥ್ವಿ ಪಡೆದ ರಕ್ತಲೇಪ ಪುನರ್ಜನ್ಮ ತಾಳಲಿ, ಶಸ್ತ್ರನಾದವೇಳಲಿ || 2 || ವೀರರೆದ್ದು ಸುಖವನೊದ್ದು ಲೋಹ ಧರಿಸಿ ವಿಜಯವರಸಿ ವೀರ ಘೋಷಗೈಯಲಿ ಖಡ್ಗ ಹಿಡಿದು ಕೈಯಲಿ || 3 || ಭರತಭುವಿಯ ಭಾಗ್ಯರವಿಯ ಉದಯಕರಳಿ ಹೃದಯ ಹೃದಯ ಧನ್ಯತೆಯನು ಪಡೆಯಲಿ, ನಾಡಪೂಜೆ ನಡೆಯಲಿ || […]
ಭರತಮಾತೆ ಪುತ್ರರೇ ಒಂದುಗೂಡುವ ದೇಶಕಾಗಿ ಸ್ವಾರ್ಥಬಿಟ್ಟು ಸೇವೆಗೈಯುವಾ || ಪ || ಹಿಂದು ಹಿಂದು ಕೂಡಿ ನಾವು ರಾಮಲಕ್ಷ್ಮಣರಾಗುವಾ ವಾಯುಪುತ್ರ ಭೀಮನಂತೆ ಧ್ಯೇಯಕಾಗಿ ನಿಲ್ಲುವಾ ಶಕ್ತಿಗಾಗಿ ಯುಕ್ತಿಗಾಗಿ ಶಕ್ತಿಗಾಗಿ ಯುಕ್ತಿಗಾಗಿ ಒಂದು ಗೂಡುವಾ || 1 || ಧ್ಯೇಯ ಧರ್ಮವನ್ನು ನಾವು ಅರಿತುಕೊಳ್ಳುವಾ ದ್ವೇಷ ಬಿಟ್ಟು ಅರಿತು ನಾವು ಬೆರೆತು ಬಾಳುವಾ ತ್ಯಾಗಕಾಗಿ ಕಾರ್ಯಕಾಗಿ ತ್ಯಾಗಕಾಗಿ ಕಾರ್ಯಕಾಗಿ ದೀಕ್ಷೆಗೈಯುವಾ || 2 || ಭಗವೆಯಡಿಯಲಿಂದು ನಾವು ಸ್ಫೂರ್ತಿ ಪಡೆಯುವಾ ರಾಷ್ಟ್ರದೇಳ್ಗೆಗಾಗಿ ಕೂಡಿ ಸತತ ದುಡಿಯುವಾ ದೇಶಕಾಗಿ ಧರ್ಮಕಾಗಿ […]
ಏಕಾತ್ಮ ಭಾರತದ ಶತಕೋಟಿ ಕಾಯಗಳ ಧಮನಿಯೊಳು ಉಕ್ಕುತಿಹ ನೆತ್ತರೊಂದೇ | ಹೃದಯದೊಳು ಸ್ಪಂದಿಸುವ ಭಾವ ಒಂದೇ || ಹಿಂದುತ್ವವೀ ನೆಲದ ಮೂಲಮಂತ್ರ .. ಈ ಪುಣ್ಯಭೂಮಿಗದೇ ಜೀವಯಂತ್ರ || ಪ || ನಮ್ಮ ಪ್ರಾಚೀನತೆಯ ಶ್ರೇಷ್ಠತಮ ಸಂಸ್ಕೃತಿಯ ರವಿಕಿರಣ ವಿಶ್ವವನೆ ಬೆಳಗುತಿಹುದು ವಿವಿಧತೆಯೊಳೇಕತೆಯ ಸಮರಸದ ಸಂಹಿತೆಯ ಆದರ್ಶ ಜನಮನವ ಬೆಸೆಯುತಿಹುದು || 1 || ಸುವಿಚಾರ ಬದ್ಧತೆಗೆ ಆಚಾರ ಶುದ್ಧತೆಗೆ ಭಾರತದೊಳಿಹುದೆಂದೂ ಅಗ್ರ ಪ್ರಾಶಸ್ತ್ಯ […]
ಭವ್ಯ ಭಾರತದಲ್ಲಿ ಭವಿತವ್ಯಾ ಮಿನುಗುತಿದೆ ಭರವಸೆಯ ಹೊಂಗಿರಣ ಸೊಗವ ತಂದಿದೆ || ಪ || ನವ್ಯ ಸಾಧನೆ ಬೆಳಕು ಇತಿಹಾಸವ ನಿರ್ಮಿಸಿದೆ ಭುವಿಯ ಭಾಗ್ಯವಿದು ಎಂದು ಜಗವೇ ಮೆಚ್ಚಿದೆ || 1 || ಜಡತೆಯ ಕಿತತೊಗೆದು ಎಚ್ಚರಾಯಿತು ಈ ಜನತೆ ದಾಸ್ಯ ಭಾವವನೆಲ್ಲಾ ಕಿತ್ತು ಒಗೆದಿದೆ ವೀರ ಸಂತನ ಪಥದಿ ನಿಷ್ಠೆಯಲಿ ಸಾಗಿದೆ ತಾರತಮ್ಯವ ತೊರೆದು ಧ್ಯೇಯದಾ ಎಡೆಗೆ || 2 || ಪ್ರಗತಿಯ ಪಥದಲ್ಲಿಂದು ದಾಪುಗಾಲಿನ ಈ ನಡಿಗೆ ಸ್ವಾಭಿಮಾನವೆ ನಮಗೆ ವರವೇ ಆಗಿದೆ ಸ್ವಾರ್ಥಹಿತವ […]
ತೋಳೆತ್ತಿ ನಮಿಸುವೆ ಭಗವಾ ಗುಡಿಗೆ ಗುರಿಯಿದೆ ಸನ್ನಿಹಿತ ಅಡಿಗಡಿಗೆ || ಪ || ಹಿಮಗಿರಿ ತಪ್ಪಲ ಮಂಜಿನಲಿ ಸಾಗರ ತಡಿಯ ಮರಳಿನಲಿ ಮುಂಜಾನೆ ಮೂಡುವ ನಸುಕಿನಲಿ ಸಂಜೆಯ ಕೆಂಪಿನ ಮುಸುಕಿನಲಿ || ಹೋಯಾ, ಓಯಾ || ಸಂಘಸ್ಥಾನದ ಮಣ್ಣಿನ ಕಣದಲ್ಲಿ ಉಸಿರಾಡಿ ಹೊರಳಾಡಿ ಕರುಳಾಡಿ ಒಡನಾಡಿ ಬೆಳೆಸಿದ ಕಾರ್ಯದಲಿ || 1 || ಸಂಘರ್ಷ ಹಾದಿಯ ತುಳಿದವರು ಗೀತೆಯ ಸ್ಫೂರ್ತಿಗೆ ಬೆಳೆದವರು ಸೋಲಿನ ಇತಿಹಾಸ ತೊಳೆದವರು ಆಲಸ್ಯ ಕೆಡವಿ ಬೆಳೆದವರು || ಓಯಾ || ಹಿಂದುಸ್ಥಾನದಿ ಕಸುವೆಲ್ಲ […]
ಪ್ರಸಿದ್ಧಿಯ ಬಯಸದ ಕಾರ್ಯವು ನಮ್ಮದು ಬದ್ಧತೆ ಧ್ಯೇಯದ ಕಡೆಗೆ ಸತತ ಪರಿಶ್ರಮ ಸಾಧನೆಯೊಂದಿಗೆ ಶ್ರದ್ಧಾಭಕ್ತಿಯ ಜತೆಗೆ || ಪ || ಸಮಗ್ರ ಸಮಾಜದ ಐಕ್ಯವೆ ಲಕ್ಷ್ಯ ಸಂಘವೇ ಜೀವನಕಾರ್ಯ ನಯಸಾಧನೆ ಜತೆ ವಿನಯದ ಭೂಷಣ ಹನುಮನ ಭುಜಬಲ ಧೈರ್ಯ || 1 || ಕಾಣುವ ವಿವಿಧತೆಯೊಳಗಡೆ ಅಡಗಿದೆ ಕುಸಿಯದ ಐಕ್ಯದ ಬಂಧ ಅನುಶಾಸನ ಆತ್ಮೀಯತೆಗಳೇ ಬಲ ಬದುಕಿನ ರೀತಿಯೆ ಚೆಂದ || 2 || ಅವಿಚಲ ಸದೃಢ ಧ್ಯೇಯಾದರ್ಶಕೆ ಕೇಶವ ಮೂರ್ತ ಸ್ವರೂಪ ಬತ್ತಿಯ ತೆರದಲಿ ದೇಹವ […]
ಸಾಗರದ ಅಲೆಯಂತೆ ದಾಳಿಯದು ನಡೆಯುತ್ತಿದೆ ದೇಶವದು ನಿಂತಿಹುದು ಬಂಡೆಯಂತೆ ಹಿಂದುತ್ವವೀ ನೆಲದ ರಕ್ಷಣೆಗೆ ನಿಂತಿರಲು ಕ್ಷಾತ್ರ ತೇಜದ ವಂಶ ಸೋಲದಂತೆ || ಪ || ಸ್ವಾರ್ಥ ಲಾಭ ಮೋಹದಿಂದ ರಾಷ್ಟ್ರ ಮರೆತ ತರುಣರು ತ್ಯಾಗದೌತಣಕ್ಕೆ ಮಣಿದು ಸಂತರಾಗಿ ಬಂದರು ಭೇದ ಭಾವ ಕ್ರೋಧ ಮದವ ಬಿಡಿಸಿ ಶಾಂತಿ ಸಹನೆ ಜೊತೆಯಾಗಿ ಬೆಳಗುತಿರಲು ಅಮರರೆಲ್ಲ ಪುತ್ರರು || 1 || ರಾಷ್ಟ್ರಕಾಯ ಮೃತ್ಯುಂಜಯ ಪ್ರಗತಿ ಪತನಕಾಣದು ಧರ್ಮ ಪ್ರಾಣವಾಗಿ ನೆಲೆಸೆ ಸೋಲು ಗೆಲ್ಲಲಾರದು ದೇಶ ಭಕ್ತಿ ಶಕ್ತಿಯಾಗಿ ಪಂಕ್ತಿ-ಪಂಕ್ತಿ […]
ನಿನ್ನ ಜೀವನ ಧ್ಯೇಯ ಜೀವನ ನಿನ್ನ ದರ್ಶನ ಹಿಂದು ದರ್ಶನ.. ನಿನ್ನ ಮಾರ್ಗದಿ ನಡೆಸಿ ನಮ್ಮನು, ಮಾಧವನಾಗಿಸು.. || ಪ || ಕೋಟಿ ಸ್ವಭಾವವ ಒಂದೆಡೆ ಬೆಸೆಯುತ ನಿನ್ನಯ ಚಿಂತನೆ ಅತಿಶಯವು, ತರುಣ ಹೃದಯಗಳು ರಾಷ್ಟ್ರಕೆ ಮಿಡಿಯಲು ಋಷಿತಮ ಜೀವನ ಪ್ರೇರಣೆಯು… || 1 || ಜಾತಿ ಭೇದಗಳ ಮೇಲು ಕೀಳುಗಳ ನಾಡಿನೆಲ್ಲೆಡೆ ಸಂಘರ್ಷ, ಹಿಂದು ಭಾವವ ಜಾಗೃತಗೊಳಿಸಿದೆ ಕೇಶವ ನೀನು ಯುಗ ಪುರುಷ… || 2 || ಭವ್ಯ ಪರಂಪರೆ ಸದ್ಗುಣ ಶೀಲವೇ ರಾಷ್ಟ್ರ ವೈಭವಕೆ […]
ಯುವಕರೆಲ್ಲ ಬನ್ನಿರಿ ವೀರಗಾನ ಮೊಳಗುವಾ ಎಚ್ಚರಾಗಿ ಬನ್ನಿರಿ ಜನ್ಮಭೂಮಿ ಉಳಿಸುವಾ || ಪ || ವೇದಮಂತ್ರ ತುಂಬಿಬಂದ ರಾಷ್ಟ್ರವನ್ನು ಪಡೆಯುವಾ ನಾಡಿನ ಶಾಂತಿಗಾಗಿ ಸೇವೆಗೈದು ಬದುಕುವಾ ಸತ್ಯವಂತ ಹರಿಶ್ಚಂದ್ರ ಜನಿಸಿದ ಭೂಮಿಯಲಿ ಧ್ಯೇಯದಾ ದಾರಿಹಿಡಿದು ರಾಮರಾಜ್ಯ ಕಟ್ಟುವಾ || 1 || ಮರಳಿ ಜ್ಞಾನಪಡೆದು ಮುಂದೆ ವೀರರಾಗಿ ಸಾಗುವಾ ಹರಿದು ರಕ್ತ ತುಂಬಿಬರಲಿ ದೇಶಕಾಗಿ ಬದುಕುವಾ ಬಂಧುಭಾವದಿಂದ ಮೆರೆದು ತಾಯಿನಾಡ ಉಳಿಸುವಾ ಹಿಂದುಕುಲದ ಯುಗಯುಗದ ನೆನಪಿಗಾಗಿ ಬಾಳುವಾ|| 2 || ಹೆಮ್ಮೆಯಿಂದ ಎದೆಯನೆತ್ತಿ ಹಿಂದು ಎಂದು ನಡೆಯುವಾ […]