ಭರತಮಾತೆ ಪುತ್ರರೇ ಒಂದುಗೂಡುವ

ಭರತಮಾತೆ ಪುತ್ರರೇ ಒಂದುಗೂಡುವ
ದೇಶಕಾಗಿ ಸ್ವಾರ್ಥಬಿಟ್ಟು ಸೇವೆಗೈಯುವಾ || ಪ ||

ಹಿಂದು ಹಿಂದು ಕೂಡಿ ನಾವು ರಾಮಲಕ್ಷ್ಮಣರಾಗುವಾ
ವಾಯುಪುತ್ರ ಭೀಮನಂತೆ ಧ್ಯೇಯಕಾಗಿ ನಿಲ್ಲುವಾ ಶಕ್ತಿಗಾಗಿ ಯುಕ್ತಿಗಾಗಿ
ಶಕ್ತಿಗಾಗಿ ಯುಕ್ತಿಗಾಗಿ ಒಂದು ಗೂಡುವಾ || 1 ||

ಧ್ಯೇಯ ಧರ್ಮವನ್ನು ನಾವು ಅರಿತುಕೊಳ್ಳುವಾ
ದ್ವೇಷ ಬಿಟ್ಟು ಅರಿತು ನಾವು ಬೆರೆತು ಬಾಳುವಾ ತ್ಯಾಗಕಾಗಿ ಕಾರ್ಯಕಾಗಿ
ತ್ಯಾಗಕಾಗಿ ಕಾರ್ಯಕಾಗಿ ದೀಕ್ಷೆಗೈಯುವಾ || 2 ||

ಭಗವೆಯಡಿಯಲಿಂದು ನಾವು ಸ್ಫೂರ್ತಿ ಪಡೆಯುವಾ
ರಾಷ್ಟ್ರದೇಳ್ಗೆಗಾಗಿ ಕೂಡಿ ಸತತ ದುಡಿಯುವಾ ದೇಶಕಾಗಿ ಧರ್ಮಕಾಗಿ
ದೇಶಕಾಗಿ ಧರ್ಮಕಾಗಿ ಬದುಕಿ ಬಾಳುವಾ || 3 ||

Leave a Reply

Your email address will not be published. Required fields are marked *