ಜಯ ಜಯವೆನ್ನಿರಿ ಭಾರತಿಗೆ ಜನಹೃನ್ಮಂದಿರ ದೇವತೆಗೆ || ಪ || ಜ್ವಾಲಾಮುಖಿಯೊಳು ಉರಿಗಣ್ ತೆರೆದಿವೆ ಸುಪ್ತ ಹಿಮಾಚಲ ಶೃಂಗಗಳು ಕನ್ಯಾಕುಮಾರಿಯ ತಟದಿಂ ಹೊರಟಿವೆ ಎತ್ತರದೆಡೆಗೆ ರಥಾಂಗಗಳು ಡಮ ಡಮ ಡಮರು – ನಾದ ಶುಭಂಕರ ಮಾರ್ದನಿಗೊಳುತಿದೆ ದೆಸೆದೆಸೆಗೆ || 1 || ಸಾಗರ ಸಂಗಮ ದಾಟಿದ ಜಂಗಮ ವಿವೇಕ ಬೋಧಿಸೆ ಜಗದಗಲ ಕಾಲಡಿ ಶಂಕರ ಗೌರಿಶಂಕರ ಪೂಜೆಗೆ ಒಯ್ದನು ಹೃತ್ಕಮಲ ಹಿಂದುತ್ವದ ಹೂಂಕಾರ ಶಿವಂಕರ ಪೌರುಷ ತುಂಬುತೆ ಎದೆಎದೆಗೆ || 2 || ರಾಷ್ಟ್ರಚಿರಂತನ ಕೇಶವ ಚಿಂತನ […]
ನವ ಭಾರತ ಶಿಲ್ಪಿಗಳಾಗೋಣ ಹೊಸ ಬಾಳಿನ ಭಾಗ್ಯವ ಬರೆಯೋಣ || ಪ || ಗಂಗೆಯ ತಂದ ಭಗೀರಥನಂತೆ ವಿಷವನು ಉಂಡ ನಂಜುಂಡನಂತೆ ತಪವನು ಗೈದು ವಿಷವನ್ನು ಕುಡಿದು ಸಮಾಜ ದೇವಗೆ ಪ್ರಾಣವ ಎರೆದು || 1 || ಕಾಣುವ ಅರಿಗಳ ಅಟ್ಟುತ ಯೋಧರು ಕಾಣದ ವೈರಿಯ ಮೆಟ್ಟುತ ವೈದ್ಯರು ಕಾಯಕ ಯೋಗಿಯ ತರದಲಿ ರೈತರು ತಾಯಿಯ ಕಷ್ಟವ ತೊಳೆಯುತಲಿಹರು. || 2 || ನವ ಚೈತನ್ಯದ ನವ ಕುಸುಮಗಳು ಕಾಣುತ ಹೊರಟಿವೆ ನವ ಕನಸುಗಳು ಭಾರತ ಮಾತೆಯು […]
ನಗರಗಳು ಸಾಕೆಂದು ನಮ್ಮೂರೆ ಮೇಲೆಂದು ಯುವಜನತೆ ಮುಖ ಮಾಡಿ ತಮ್ಮೂರಿಗೆ ಜೀತದ ನೌಕರಿಯ ಧಿಕ್ಕರಿಸಿ ನಡೆದಿಹರು ಮನ ಮಾಡಿ ಆತ್ಮನಿರ್ಭರದೆಡೆಗೆ || ಪ || ಕೃಷಿಯ ಕಷ್ಟವೂ ಏಕೆ, ನಗರ ಸುಖದಾ ಬಯಕೆ ಹೊತ್ತಿತ್ತು ಯುವಜನರ ಆತ್ಮದೊಳಗೆ ದೂರದಾ ಬೆಟ್ಟವದು ನುಣ್ಣಗೆಂದರಿಯದೆ ಬಿದ್ದಿತ್ತು ದಾಸ್ಯದಾ ಕೂಪದೊಳಗೆ ಗಡಿಬಿಡಿಯ ಓಡಾಟ, ಕೆಲಸದ ಜಂಜಾಟ ಹೊತ್ತು ಕೂಳಿಗೂ ಸಮಯ ಸಿಗದೆ || 1 || ಜೀತದ…. ಈ ಕೆಲಸವೇ ಮೇಲು ಆ ಕೆಲಸ ಬಲು ಕೀಳು ಬಿತ್ತಿತ್ತು ಭಾವನೆಯು ಮನದದೊಳಗೆ […]
ದೇವಿ ಭಾರತಿ ನಿನ್ನ ಸಮರನು ಕಾಣೆವೈ ಈ ಜಗದಲಿ ದೇವ ರಾಮನು ಸೀತ ಮಾತೆಯು ಬೆಳದರೈ ನಿನ ಮಡಿಲಲಿ || ಪ || ಪೂರ್ವ ಪಶ್ಚಿಮ ದಕ್ಷಿಣೋತ್ತರ ಹಬ್ಬಿದೇ ನಿನ್ನ ಕೀರುತಿ ಸಾರ್ವ ಭೌಮಿಯು ಸಪ್ತ ಲೋಕದಿ ನೀನೆ ಮಂಗಳೆ ಭಾರತಿ || 1 || ಗಂಗೆ ಯಮುನಾ ಸಿಂಧು ಸರಸ್ವತಿ ಇವರೆ ನಿನ್ನಯ ಕಂಗಳು ತುಂಗ ಭದ್ರ ಕಾವೇರಿ ಭೀಮರು ಚರಣ ತೊಳೆಯುವ ಮಕ್ಕಳು || 2 || ಚಂದ್ರ ಶೇಖರ ಭಗತ್ ಸಿಂಗರು ಭೋಸು […]
ಯೋಗ ಮಾಡಿರೋ ಎಲ್ಲರು ಯೋಗವ ಮಾಡಿರೋ ಎಲ್ಲ ಭೋಗವ ಬದಿಗೆ ಇಟ್ಟು, ಆರೋಗ್ಯವಂತರಾಗಲು ಇಂದು|| ಪ || ರೋಗ-ರುಜಿನವಾ ದೂರವಿರಿಸಲು, ಪ್ರತಿದಿನ ಹರುಷದಿ ಬದುಕಲು ನೀವು ಋಷಿ ಪುಂಗವರ ನೆನೆಯುತ ನೀವು, ಸಾಧಕರಾಗಿ ಬೆಳೆಯಲು ಎಲ್ಲರು ||ಯೋಗ..|| ಸೂರ್ಯನಮಸ್ಕಾರ ಮಾಡಲು ದಿನವೂ, ಸಂಪೂರ್ಣ ಫಲವ ಪಡೆವಿರಿ ನೀವು| ಪ್ರಾಣಾಯಾಮವ ಮಾಡಲು ನಿಮಗೆ, ನೂರು ವರುಷದ ಆಯುಷ್ಯವಿಹುದು ||ಯೋಗ ..|| ವಜ್ರಕಾಯವ ಗಳಿಸಲು ನೀವು ವಜ್ರಾಸನವ ಮಾಡಿಯೇ ನೋಡಿ ಚುರುಕುತನದ ಬುದ್ಧಿಗಾಗಿ, ಶೀರ್ಷಾಸನವ ಮಾಡಿಯೇ ನೋಡಿ||ಯೋಗ..|| ಅರ್ಧ ತಾಸಿನ […]
ದಕ್ಷತೆಯಿಂದಲಿ ರಕ್ಷೆಯ ಕಟ್ಟುವ ಹಿರಿಮೆಯ ನೆನಪಿಸುತ ಇದರೊಲುಮೆಯ ಗಮನಿಸುತ | ಅಕ್ಷಯವಾಗಲಿ ಲಕ್ಷ್ಮಣ ಪ್ರೀತಿಯು ಸಮರಸ ಮೆರೆಯಲಿದೋ ಜಗವನೆ ಬೆಳಗಲಿದೋ || ಪ || ಮೇಲು-ಕೀಳಿನ ಭೇದವ ಮರೆಯುವ ಬಡವ-ಬಲ್ಲಿದ ಭಾವವ ನೀಗುವ ಪಂಡಿತ-ಪಾಮರ ತರತಮ ತೊರೆಯುವ ಜಾತಿ ಧರ್ಮವ ಮರೆಯುತ ಒಲವಲಿ ಕಟ್ಟುವ ಕೈಗಳಿಗೇ…ತಟ್ಟಲಿ ಮನಗಳಿಗೆ || 1 || ಪುರಾಣದಿಂದಲೂ ರಕ್ಷೆಯ ಮಹಿಮೆ ಚರಿತೆಯಲೂ ಇದೆ ಇದರದೇ ಹಿರಿಮೆ ಸೋದರ ಭಾವವು ಸೋದರಿ ರಕ್ಷಣೆ ಇಂದಿನ ದಿನದೀ ಎಲ್ಲರ ಭದ್ರತೆ ನಮದದು […]
ಆಕಾಶಕೆದ್ದುನಿಂತ ಪರ್ವತ ಹಿಮ ಮೌನದಲ್ಲಿ ಕರಾವಳಿಗೆ ಮುತ್ತನಿಡುವ ಪೆರ್ದೆರೆಗಳ ಗಾನದಲ್ಲಿ ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರ ಘೋಷವೇಳುವಲ್ಲಿ ಕಣ್ಣು ಬೇರೆ, ನೋಟ ಒಂದು ನಾವು ಭಾರತೀಯರು || ಪ || ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ ನಮ್ಮ ಯೋಧರೆತ್ತಿಹಿಡಿದ ನಮ್ಮ ಧ್ವಜದ ನೆರಳಿನಲ್ಲಿ ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಳಿನಲ್ಲಿ ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ ಭಾಷೆ ಬೇರೆ ಭಾವವೊಂದು ನಾವು ಭಾರತೀಯ || […]
ಶ್ರೀಗಂಧಾ ಈ ನೆಲದ ಮಣ್ಣಿದು ತಪೋವನವು ಪ್ರತಿ ಗ್ರಾಮವು ಪ್ರತಿ ಮಗಳೂ ಆ ದೇವಿಯ ರೂಪ ಪ್ರತಿ ಮಗನೂ ಶ್ರೀರಾಮನು || ಪ || ಪ್ರತಿ ಶರೀರ ಮಂದಿರದೊಲು ಪಾವನ ಪ್ರತಿ ಮಾನವ ಉಪಕಾರಿಯು ಸಿಂಹವೇ ಇಲ್ಲಿ ಮಕ್ಕಳ ಆಟಿಕೆ ಹಸುವೇ ಇಲ್ಲಿದೋ ತಾಯಿಯು ಬೆಳಗಿನ ಸಮಯದಿ ಶಂಖದ ಧ್ವನಿಯು ಸಂಜೆಗೆ ತಪ್ಪದೆ ಜೋಗುಳವು ||ಪ್ರತಿ ಮಗಳೂ|| ಕರ್ಮದ ಮೇಲೆ ಭಾಗ್ಯವು ಬದಲು ಶ್ರಮನಿಷ್ಠೆಗಳೇ ಕಲ್ಯಾಣವು ತ್ಯಾಗ ತಪದ ಪಾರಾಯಣ ಗೈವ ಕವಿ ಮನಸಿನ ಸಿಹಿವಾಣಿಯು ಜ್ಞಾನವು […]
ಓ… ಗುರುವೇ ವಂದನೆ ಓ… ಗುರುವೇ ಶಿರವಂದನೆ || ಪ || ನಿಮ್ಮ ಪೂಜಿಪ ಕೋಟಿ ತರುಣರ ಹೃದಯ ಚೇತನ ನೂತನ ರಾಷ್ಟ್ರ ಪಟದಲಿ ದಿಟ್ಟ ಧೀರರ ಕ್ಷಾತ್ರ ತೇಜದ ಪ್ರಸರಣ || 1 || ಯಜ್ಞ ಜ್ವಾಲೆಯು ನಭದಿ ಚಿಮ್ಮುತ ಧರ್ಮ ದಾರಿಯ ಬೆಳಗುತಾ ಹಿಂದು ಕನಕದ ಹೊಳಪು ಹೆಚ್ಚಿಸಿ ಘನತೆ ಮೆರೆಸಿದೆ ಅನುದಿನ || 2 || ಅರಿಗಳೆದೆಯಲಿ ಒಲವು ಪಸರಿಸಿ ರಾಷ್ಟ್ರವಾಗಿಸೋ ಸಾಧನಾ ಗತಇತಿಹಾಸದ ಡಮರುಗ ಬಾರಿಸಿ ಸತ್ಯಸಾರುವ ಶಿವನರ್ತನ || 3 […]
ರಾಷ್ಟ್ರ ಚೇತನ ಸಂಘ ಮಂಥನ ಅನುಭವ ಸಿಹಿ ಸಿಂಚನ || ಪ || ದೇಶದೆಲ್ಲೆಡೆ ದಾಸ್ಯ ಭಾವನೆ ಕಿತ್ತು ಎಸೆಯುವ ಚಿಂತನ ಎಲ್ಲರೊಂದೇ ಎಂದು ಸಾರುವ ಮಮತೆ ಕಡಲಿನ ಜೀವನ || 1 || ಈ ನಾಡಿನೊಳಗಿರುವವರು ಎಲ್ಲರೂ ಹಿಂದೂ ಎನ್ನುವ ದೀಪವ ಎಲ್ಲರ ಎದೆಯೊಳಗೆ ಬೆಳಗಿಸಿ ಸತ್ಯ ಸಾರುವ ಸಾಧನ || 2 || ಎಲ್ಲ ಜೀವಕು ದೈವ ಸ್ಥಾನವ ನೀಡೋ ನಾಡಿದು ಭಾರತ ವಿಶ್ವವೇ ಒಂದೆಂದು ಸಾರುವ ಪರಮ ವೈಭವದಾ ರಥ || 3 […]