ವನವಾಸ ಕಳೆದದ್ದಾಯಿತು

ವನವಾಸ ಕಳೆದದ್ದಾಯಿತು ಬಾರೋ ರಾಮ ಒಳಗೆ
ಬಯಲಲ್ಲಿ ಕಾದದ್ದಾಯಿತು ಬಾರೋ ನಿನ್ನ ಅರಮನೆಗೆ || ಪ ||

ಸುಖಮಯ ಭವಿಷ್ಯ ಪಣವಿಟ್ಟು ಕರಸೇವಕರು ನೂರಾರು
ಯುಗಸಂಕಲ್ಪವೀಡೇರಲು ಭೀಮ ಸಾಹಸ ತೋರಿದರು
ತ್ಯಾಗ ಶೌರ್ಯ ಮೆರೆಯುತಲಿ ಪೀಳಿಗೆಯಿಂದ ಪೀಳಿಗೆಗೆ
ಸೃಜಿಸುತಲಿ ನವ ಇತಿಹಾಸ, ಬಾರೋ ನಿನ್ನ ಅರಮನೆಗೆ || 1 ||

ರಾಮನ ವಚನವು ಎಂದೆಂದೂ ಸುಳ್ಳಾದದ್ದೇ ಕಂಡಿಲ್ಲ
ರಾಮನ ಬಾಣವು ಎಂದಿಗೂ ಗುರಿ ತಪ್ಪಿದ್ದೇ ನೋಡಿಲ್ಲ
ನಿನ್ನಯ ಭಕ್ತರ ಸಂಕಲ್ಪ ಅಮಿತ ಭಕ್ತಿಯ ಶಕ್ತಿಗೆ
ಎಂದೂ ಕೂಡ ಸೋಲಿಲ್ಲ, ಬಾರೋ ನಿನ್ನ ಅರಮನೆಗೆ || 2 ||

ನಿನ್ನ ಪವಿತ್ರ ಕಾರ್ಯದಲಿ ನಾ ನಿಮಿತ್ತನೆಂಬ ಅರಿವಿದೆ
ಧರ್ಮದ ವಿಜಯದ ಈ ಘಳಿಗೆ ಆತ್ಮ ವಿಶ್ವಾಸ ತುಂಬಿದೆ
ಎಮ್ಮಯ ಜೀವನ ಅರ್ಪಿತವು ದೇಶ ಧರ್ಮದ ಕಾರ್ಯಕೆ
ರಾಮ ರಾಜ್ಯವ ಕಟ್ಟುವೆವು, ಬಾರೋ ನಿನ್ನ ಅರಮನೆಗೆ || 3 ||

Leave a Reply

Your email address will not be published. Required fields are marked *