ಯೋಗ ಮಾಡಿರೋ ಎಲ್ಲರು ಯೋಗವ ಮಾಡಿರೋ

ಯೋಗ ಮಾಡಿರೋ ಎಲ್ಲರು ಯೋಗವ ಮಾಡಿರೋ
ಎಲ್ಲ ಭೋಗವ ಬದಿಗೆ ಇಟ್ಟು, ಆರೋಗ್ಯವಂತರಾಗಲು ಇಂದು|| ಪ ||

ರೋಗ-ರುಜಿನವಾ ದೂರವಿರಿಸಲು, ಪ್ರತಿದಿನ ಹರುಷದಿ ಬದುಕಲು ನೀವು
ಋಷಿ ಪುಂಗವರ ನೆನೆಯುತ ನೀವು, ಸಾಧಕರಾಗಿ ಬೆಳೆಯಲು ಎಲ್ಲರು ||ಯೋಗ..||

ಸೂರ್ಯನಮಸ್ಕಾರ ಮಾಡಲು ದಿನವೂ, ಸಂಪೂರ್ಣ ಫಲವ ಪಡೆವಿರಿ ನೀವು|
ಪ್ರಾಣಾಯಾಮವ ಮಾಡಲು ನಿಮಗೆ, ನೂರು ವರುಷದ ಆಯುಷ್ಯವಿಹುದು ||ಯೋಗ ..||

ವಜ್ರಕಾಯವ ಗಳಿಸಲು ನೀವು ವಜ್ರಾಸನವ ಮಾಡಿಯೇ ನೋಡಿ
ಚುರುಕುತನದ ಬುದ್ಧಿಗಾಗಿ, ಶೀರ್ಷಾಸನವ ಮಾಡಿಯೇ ನೋಡಿ||ಯೋಗ..||

ಅರ್ಧ ತಾಸಿನ ಯೋಗವ ಮಾಡಿ, ದಿನವೆಲ್ಲ ಚೈತನ್ಯ ತುಂಬುದು ನಿಮಗೆ|
ಕೆಲ ನಿಮಿಷಗಳ ಧ್ಯಾನವ ಮಾಡಿ, ಸಮಚಿತ್ತ ಪಡೆವ ಬೆರಗನು ನೋಡಿ||ಯೋಗ||

Leave a Reply

Your email address will not be published. Required fields are marked *

*

code