ನಗರಗಳು ಸಾಕೆಂದು ನಮ್ಮೂರೆ ಮೇಲೆಂದು

ನಗರಗಳು ಸಾಕೆಂದು ನಮ್ಮೂರೆ ಮೇಲೆಂದು ಯುವಜನತೆ ಮುಖ ಮಾಡಿ ತಮ್ಮೂರಿಗೆ
ಜೀತದ ನೌಕರಿಯ ಧಿಕ್ಕರಿಸಿ ನಡೆದಿಹರು ಮನ ಮಾಡಿ ಆತ್ಮನಿರ್ಭರದೆಡೆಗೆ || ಪ ||

ಕೃಷಿಯ ಕಷ್ಟವೂ ಏಕೆ, ನಗರ ಸುಖದಾ ಬಯಕೆ
ಹೊತ್ತಿತ್ತು ಯುವಜನರ ಆತ್ಮದೊಳಗೆ
ದೂರದಾ ಬೆಟ್ಟವದು ನುಣ್ಣಗೆಂದರಿಯದೆ
ಬಿದ್ದಿತ್ತು  ದಾಸ್ಯದಾ ಕೂಪದೊಳಗೆ
ಗಡಿಬಿಡಿಯ ಓಡಾಟ, ಕೆಲಸದ ಜಂಜಾಟ
ಹೊತ್ತು ಕೂಳಿಗೂ ಸಮಯ ಸಿಗದೆ || 1 ||  ಜೀತದ….

ಈ ಕೆಲಸವೇ ಮೇಲು ಆ ಕೆಲಸ ಬಲು ಕೀಳು
ಬಿತ್ತಿತ್ತು ಭಾವನೆಯು ಮನದದೊಳಗೆ
ತನ್ನ ಕುಶಲತೆ ಮರೆತು ಕಂಗೆಟ್ಟು ಹೋಗಿತ್ತು
ಅಂಧಾನುಕರುಣೆಯೊಳಗೆ
ತನ್ನ ಶಕ್ತಿಯನರಿತು ನಡೆದಿಹರು ಸಾಸಿರದಿ
ಯುವಜನರು ಸ್ವತ್ವದುನ್ನತಿಯ ಕಡೆಗೆ || 2 ||  ಜೀತದ….

ಎಕರೆಗಟ್ಟಲೆ ಭೂಮಿ, ತಲೆಮಾರ ಹಳೆಮನೆಯು ಮಾರಿ ಬಂದರು ಬಾಳ ಕಟ್ಟಲೆಂದು
ಪಟ್ಟಣದ ನಡುವೆಯಲಿ ಪುಟ್ಟದ ಚದುರಡಿಯ ಬಾಡಿಗೆಗೆ
ಮನೆಯ ಕೊಂಡು
ಸ್ವಗ್ರಾಮ ಕರೆದಿರಲು, ಕೆಚ್ಚೆದೆಯ ಛಲವಿರಲು, ನಿರ್ಧರಿಸಿ
ಗ್ರಾಮದುತ್ಥಾನದೆಡೆಗೆ || 3 ||   ಜೀತದ…..

Leave a Reply

Your email address will not be published. Required fields are marked *

*

code