ದೇವಿ ಭಾರತಿ ನಿನ್ನ ಸಮರನು

ದೇವಿ ಭಾರತಿ ನಿನ್ನ ಸಮರನು
ಕಾಣೆವೈ ಈ ಜಗದಲಿ
ದೇವ ರಾಮನು ಸೀತ ಮಾತೆಯು
ಬೆಳದರೈ ನಿನ ಮಡಿಲಲಿ || ಪ ||

ಪೂರ್ವ ಪಶ್ಚಿಮ ದಕ್ಷಿಣೋತ್ತರ
ಹಬ್ಬಿದೇ ನಿನ್ನ ಕೀರುತಿ
ಸಾರ್ವ ಭೌಮಿಯು ಸಪ್ತ ಲೋಕದಿ
ನೀನೆ ಮಂಗಳೆ ಭಾರತಿ || 1 ||

ಗಂಗೆ ಯಮುನಾ ಸಿಂಧು ಸರಸ್ವತಿ
ಇವರೆ ನಿನ್ನಯ ಕಂಗಳು
ತುಂಗ ಭದ್ರ ಕಾವೇರಿ ಭೀಮರು
ಚರಣ ತೊಳೆಯುವ ಮಕ್ಕಳು || 2 ||

ಚಂದ್ರ ಶೇಖರ ಭಗತ್ ಸಿಂಗರು
ಭೋಸು ಸುಖದೇವ್ ಇತರರು
ಝಾನ್ಸಿ ರಾಣಿ ಚೆನ್ನಮ್ಮಾಜೀ
ಪ್ರಾಣ ತೆತ್ತಾ ಧೀರರು || 3 ||

ಮಲಿನ ಗೊಂಡಿಹ ನಮ್ಮ ತನುಮನ
ತೊಳೆಯೆ ಕರುಣೆಯ ಜಲದೊಳು
ಒಲುಮೆ ತೋರುತ ಪೊರೆಯೆ ನಮ್ಮನು
ಮನುಜರಾಗಿಸಿ ಜಗದೊಳು || 4 ||

Leave a Reply

Your email address will not be published. Required fields are marked *

*

code