ಯುಗ ಸಂಧಿಯ ದಿನ ಸನಿಹಕೆ ಬರುತಿದೆ ಸುಸ್ಥಿರಗೊಳುತಿದೆ ಬಂಧುತ್ವ ನಗುಮೊಗದೊಂದಿಗೆ ಜಗದೆಲ್ಲೆಡೆಯಲು ವಿಸ್ತರಗೊಳುತಿದೆ ಹಿಂದುತ್ವ || ಪ || ಸಂದಿಹ ದಿನಗಳ ಜಯ ಅಪಜಯಗಳ ಹೊಂದಿದಬಗೆಯನು ಪರಿಕಿಸುತ ಸುಂದರ ನಾಳೆಗೆ ಚೆಂದದ ಯೋಜನೆ ಧುಮುಕಿದೆ ಯುವಪಡೆ ಶ್ರಮಸಹಿತ || 1 || ಮತ ಉನ್ಮತ್ತರು ವಿಕೃತ ಮತಿಗಳು ಬಾಧಿಸುತಿರುವರು ಬಗೆನೂರು ಎದುರಿಸಿ ಚದುರಿಸಿ ನಿವಾರಿಸ ಬಲ್ಲೆವು ಹಿಂದುವಿನೆದೆ ಸ್ಥೈರ್ಯದ ಮೇರು || 2 || ವಿಘಟಿತ ವಿಭಜಿತ ಜನಮನವೆಲ್ಲವು ಸಮರಸ ಗೊಳುತಿದೆ ಕಾರ್ಯದಲಿ ಏಕತೆಯೊಂದಿಗೆ ಧ್ಯೇಯದ ಸಾಧನೆ […]
ಓಂಕಾರದ ಮಂತ್ರದನುರಣನ ಎಲ್ಲಡೆಯು ಹಿಂದುತ್ವ ಹಿರಿದೆನಿಸುತಿಹುದ ನೋಡಿ ಕಿರಿದಾದ ಮಂತ್ರದಲಿ ಹಿರಿದಾದ ತಂತ್ರವಿದೆ ಒಂದುಗೂಡಿಸುತಿಹುದು ಎಂಥ ಮೋಡಿ || ಪ || ಭಾರತದ ಭಾಗ್ಯ ರವಿ ಬಾನಿನಲ್ಲಿ ಜಗಜಗಿಸಿ ಭರವಸೆಯ ಬೆಳಕೆಂದು ಮೂಡುತಿಹುದು ವಿಸ್ಮೃತಿಯ ನಶೆ ಇಳಿದು ಸ್ಪುಟಗೊಂಡ ದಿಶೆಯುಳಿದು ತರುಣರೆದೆ ವಿಶ್ವಾಸ ಮೂಡುತಿಹುದು || 1 || ಸ್ವರ್ಣಿಮದಕ್ಷಣ ಒಂದು ಸನಿಹಕ್ಕೆ ತರುತಿಹುದು ವರ್ಣ ವೈಷಮ್ಯದುರಿ ಆರುತಿಹುದು ಜನ್ಮದಿಂದಲಿ ಜಂತು ಕರ್ಮದಿಂ ಬ್ರಹ್ಮತ್ವ ಧರ್ಮಸೂಕ್ಷದ ಸತ್ಯ ಬೆಳಗುತಿಹುದು || 2 || ಕೇಶವನ ಕನಸುಗಳು ನನಸಾಗುತಿವೆ […]
ಬನ್ನಿರೈ ಭಾರತದ ಬಾಗಿಲಿದೋ ತೆರೆದಿಹುದು ಸನ್ಮತಿಯ ಉನ್ನತಿಯ ಪಥವ ತೋರಿಹುದು || ಪ || ಹರನೊಡನೆ ಧುರವಿತ್ತು ಶರವ ಪಡೆದ ನರ ಮರಣಿಸಿದ ಪ್ರಿಯಪತಿಯ ಮರಳಿ ತಂದವಳ ಯಮನಾಲಯವ ಹೊಕ್ಕು ವರವಗಳಿಸಿದ ಕುವರ ವೀರಚರಿತೆಯ ಕೇಳಿ ಯಶವ ಪಡೆದವರ || 1 || ರವಿಸೋಮ ವಂಶಗಳ ಕೀರ್ತಿಗಾಥೆಯ ಕಥನ ವೇದಾಂತ ಉಪನಿಷದ ಗೀತಸಾರದ ಮನನ ಅಣು ಗಣಕದಧ್ಯಯನ ಕ್ಷಿಪಣಿಗಳ ಉಡ್ಡಯನ ಪರ ಅಪರವೆರಡರಲೂ ಊರ್ಧ್ವಮುಖಪಯಣ || 2 || ಸಂಸ್ಕೃತವು ಸಂಸ್ಕೃತಿಯು ಸಂಸ್ಕಾರ ಸನ್ನಡತೆ ಸಂಗೀತ ಸಾಹಿತ್ಯ […]
ಪಾಂಚಜನ್ಯದ ಕರೆಗೆ ಕರಗಿತು ದ್ವಾಪರದ ಆ ಕುರುಕುಲ ಹರಿಯು ಉರಿಸಿದ ಧೈರ್ಯ ದೀಪ್ತಿಗೆ ಬೆಳಗಿ ಧರ್ಮದ ದೇಗುಲ || ಪ || ಅವನ ಕೆಲಸಕೆ ಮತ್ತೆ ಹೊರಟಿದೆ. ಭರತ ಖಂಡ ಮನುಕುಲ ಮಾತೃ ವ್ಯಾಕುಲ ಕಳೆಯೆ ಕಲೆತಿದೆ ಕಲಿಯ ಕಲಿಗಳ ಸಂಕುಲ || 1 || ಬೆರಳು ನಲಿಯಲು ಉಲಿವ ಕೊಳಲಲು ಸ್ವಾಭಿಮಾನದ ಸರಿಗಮ ಏರುಇಳಿತದ ಸಪ್ತ ಸ್ವರದಲಿ ಸಾಮರಸ್ಯದ ಸಂಗಮ || 2 || ಪಣವ ಆನಕ ಶಂಖ ಗೋಮುಖ ರಣದ ಭೇರಿಯ ವಾದನ ಸ್ಫೂರ್ತಿ […]
ಭರತಭೂಮಿಯ ಭಾಗ್ಯ ಉದಿಸಿದೆ ಏಳು ಮೇಲಕೆ ತರುಣನೆ ಭರದಿ ಸೇರಲಿ ಕೋಟಿ ಕರಗಳು ತರಲು ಶುಭಪರಿವರ್ತನೆ || ಪ || ಗರ್ಜಿಸುವುದನು ಮರೆತು ಸಿಂಹವದೇಕೆ ನರಿಗಳ ನೆಚ್ಚಿದೆ? ಸಜ್ಜನರ ನಿಷ್ಕ್ರಿಯತೆ ಕಾರಣ ದುರ್ಜನರ ಬಲ ಹೆಚ್ಚಿದೆ! ಆವ ದೈವವು ಕಾವುದೆನ್ನುತ ಬಾಗಿ ಕಂಗಳ ಮುಚ್ಚಿದೆ? ದೇವದುರ್ಲಭ ಸಂಘಟನೆಯಿದೆ ಸಾಗು ಬೆದರದೆ ಬೆಚ್ಚದೆ! || 1 || ಸೌಮ್ಯ ಸಂಸ್ಕೃತಿ ಸುಧೆಗೆ ಪೂತನಿ ವಿಷವನಿಕ್ಕುವ ಸಂಚಿದೆ ಸಾಮ್ಯವಾದದ ಮಾಯೆ ಜಿಂಕೆಯು ನಾಡನೊಡೆಯಲು ಹೊಂಚಿದೆ ಶಸ್ತ್ರಶಾಸ್ತ್ರದೊಳಾರು ನಿನಗೆಣೆ ನುಗ್ಗು ಸ್ಫೂರ್ತಿಯ […]
ಮಾರ್ಗದರ್ಶಕ ಎಮಗೆ ಮಾಧವನೆ ನೀನಾದೆ ಸಂಘವೇ ಅನಿವಾರ್ಯ ಎಂಬುದನೇ ಸಾರಿದೆ || ಪ || ನಿನದೊಂದು ಉಲಿಯಿಂದ ಭಾರತವ ರಕ್ಷಿಸಿದೆ ಧರ್ಮ ಸ್ಥಾಪನೆಯಂದು ಸಂಚರಿಸಿ ನೀಗೈದೆ ಮಾಧವನೆ ನೀನಾದೆ ರಾಷ್ಟ್ರಯುಗ ದ್ರಷ್ಟಾರ ಮಂತ್ರ ನೀಡಿದೆಯೆಂದು ರಾಷ್ಟ್ರಾಯ ಸ್ವಾಹಾ || 1 || ಹಗಲಿರುಳು ಚಿಂತಿಸಿದೆ ರಾಷ್ಟ್ರದ ಉನ್ನತಿಯ ಎಡೆಬಿಡದೆ ನೀಗೈದೆ ಜನಮನದ ಜಾಗೃತಿಯ ರಾಷ್ಟ್ರಕೆ ಅರ್ಪಿಸಿದೆ ನೀನಂದೆ ಸರ್ವಸ್ವ ಕರೆ ನೀಡಿ ನೀನಂದು ರಾಷ್ಟ್ರಾಯ ಇದಂ ನ ಮಮ || 2 || ಸಾರಥಿಯು ನೀನಾದೆ ಸಂಘರಥ […]
ನಮ್ಮಯ ತಾತ ಬಲುಗಂಭೀರ ನುಡಿ ನಡೆಗಳಲೂ ಆದರ್ಶ ದೋಷವೆ ಇರದ ಸುಂದರ ಬದುಕು ಎಂದಿಗು ಮೊಗದಲಿ ಸಂತೋಷ || ಪ || ಮಕ್ಕಳ ಜೊತೆಯಲಿ ಮಗುವಾಗುವರು ನಗಿಸುತ ಕಥೆಯನು ಹೇಳುವರು ತಾತನ ಮಾತಲಿ ಅರಿವಿನ ಹೂರಣ ಮನೆತನಕವರು ಭೂಷಣರು || 1 || ವಿನಯದ ಮಾತಲಿ ನಮ್ಮನು ರಂಜಿಸಿ ನಗುತಲೆ ತಪ್ಪನು ತಿದ್ದುವರು ಪ್ರೀತಿಯ ಜೊತೆಯಲಿ ಪಾಠವ ಕಲಿಸಿ ಬುದ್ಧಿಯ ಕಲಿಸಿ ಬೆಳೆಸುವರು || 2 || ಹಬ್ಬದ ಸಂಭ್ರಮ ಸಡಗರದಾ ದಿನ ಬಾಗಿಲ ತೋರಣ ಕಟ್ಟುವರು […]
ಗುರುವಿನಾಣತಿಯಂತೆ ನೀ ಬಂದೆ ಭಾರತಕೆ ಅವರ ಮಾರ್ಗದಿ ನಡೆದು ಬೆಳೆದೆ ಬಾನೆತ್ತರಕೆ ನನ್ನದೇನೂ ಇಲ್ಲ ಎಂಬರಿವ ಮೂಡಿಸಿದೆ ಭಾರತೀಯರ ಮನದಿ ಬೇರೂರಿದೆ || ಪ || ಅನ್ಯ ನೆಲದಲಿ ಜನಿಸಿ ಬೆಳೆದ ಭಾರತಪುತ್ರಿ ಶ್ರೀಮಾತೆ ಸುತೆಯಾದೆ ಧವಳ ಕುವರಿ ಗುರುವಿನನುಗ್ರಹ ಪಡೆದ ವಿವೇಕ ಮಾನಸ ಪುತ್ರಿ ಪರಮ ಗುರುವಿನ ಕೃಪೆಗೆ ಪಾತ್ರ ಸುಕುಮಾರಿ || 1 || ಬಾಲೆಯರಿಗೆ ಗುರುವು ವಿಧವೆಯರ ಬಾಳ್ಬೆಳಕು ತರುಣಗಣದ ಕ್ರಾಂತಿ ಬೋಧಕಿಯು ನೀನಾದೆ ಮಹಾವ್ಯಾಧಿಯ ಸೋಂಕು ಎರಗೆ ಮಾನವ ಕುಲಕೆ ಸ್ವಚ್ಛತೆಯ […]
ಸಂಘಶಾಖೆಯೊಂದು ಭುವಿಯ ಬಯಲಿನಲ್ಲಿ ನೆಲೆಸಿತು ಜನರ ಮನದ ಕ್ಲೇಶವಳಿಸಿ ಗುರಿಯನೊಂದ ನೀಡಿತು || ಪ || ಭರತಭೂಮಿ ನಮ್ಮ ತಾಯಿ ನಾವು ಅವಳ ಮಕ್ಕಳು ಹಿಂದುಭೂಮಿ ನಮ್ಮನೆಲ್ಲ ಸುಖದಿ ಬೆಳೆಸಿದಂಥ ತಾಯಿ ಪುಣ್ಯಭೂಮಿ ಎನ್ನ ಕಾಯ ನಿನಗೆ ಮುಡಿಪುಗೊಳಿಸುವೆ ಮಂಗಲೆ ಸುಮಂಗಲೆ ವಂದನೆ ಅಭಿವಂದನೆ || 1 || ಶಕ್ತಿಶಾಲಿ ಪ್ರಭುವೆ ನಿನಗೆ ಶಿರವಬಾಗಿ ನಮಿಪೆವು ಹಿಂದುರಾಷ್ಟ್ರದಂಗವೆಂಬ ಭಾವವೆಮದು ಅಚಲವು ಈಶ ನಿನ್ನ ಕಾರ್ಯಕಾಗಿ ಸದಾ ಸಿದ್ಧರಿರುವೆವು ಕಾರ್ಯ ಸಫಲವಾಗಲೆಂದು ಹರಸು ಎಮಗೆ ಹರಸು || 2 […]
ಮನದಿ ಮಂದಾಸನವನಿತ್ತಿಹೆ ಮಾತೆ ಮೋದದಿ ಮಂಡಿಸು ಮೂಢನಾಗಿಹೆ ಮೌಲ್ಯ ಮರೆತಿಹೆ ಮುನಿಸುದೋರದೆ ಮನ್ನಿಸು || ಪ || ಮೂಡಣಾಗಸದಲ್ಲಿ ಮಿತ್ರನು ಮಗುವಿನಂದದೊಳುದಿಸಲು ಮಮತೆಯಾ ಮಂದಾರವರಳಿತು ಮಧುರ ಮಧುವನ್ನೀಯಲು || 1 || ಮುನಿ ಮನೀಷಿಗಳೆಲ್ಲ ಮಾಡಿದ ಮನನ ಮಂಥನದಿಂದಲಿ ಮೇದಿನಿಗೆ ಮುದ ಮೋಕ್ಷವಾತ್ಮಕೆ ಮಂತ್ರವುದಿಸಿತು ಮನದಲಿ || 2 || ಮನುಜನುಳಿವಿನ ಮಾರ್ಗವರಿಯಿತು ಮಂತ್ರವಾಯಿತು ಮುನ್ನುಡಿ ಮೋಹ ಮರೆಯುತ ಮದವನಳಿಸುತ ಮನುಜನಿರಿಸಿದ ಮುಂದಡಿ || 3 || ಮಾನವನ ಮಹದೇವನಾಗಿಪ ಮಂತ್ರ ಮಾರ್ದನಿಗೊಳುತಿದೆ ಮಗುವಿನಂದದಿ ಮಣಿದೆ ಮುದದಲಿ […]