ಶಿಶಿರ ಋತು ಸರಿದಂತೆ ಮುಂಜಾವು ಹರಿದಂತೆ

ಶಿಶಿರ ಋತು ಸರಿದಂತೆ ಮುಂಜಾವು ಹರಿದಂತೆ
ಹಿಂದುತ್ವದಭಿಮಾನ ಮೈ ಕೊಡವಿದೆ
ತೊರೆದು ಶತಕದ ನಿದ್ದೆ, ನಾಡು ಮೇಲೆದ್ದಂತೆ
ಯುವ ಮನದಿ ಚೈತನ್ಯ ನವಿರೆದ್ದಿದೆ
ನವಯುಗದ ನವಗಾನ ಶುಭ ನುಡಿದಿದೆ || ಪ ||

ಕೇಶವ ಭಗೀರಥನ ಹರಿಸಿ ಸಂಘದ ಗಂಗೆ
ವಿಮಲ ಸಂಸ್ಕೃತಿ ಮೈದುಂಬಿದೆ
ರಾಷ್ಟ್ರಜೀವನದಂಗ ಪ್ರತ್ಯಂಗ ನಳನಳಿಸಿ
ಸಮರಸದ ಸೂತ್ರದಲ್ಲಿ ಸಂಭ್ರಮಿಸಿವೆ
ಹಿಂದು ಶಕ್ತಿ ಪ್ರವಾಹ ಸಂಘಮಿಸಿವೆ || 1 ||

ಅಂದು ಕೇಶವನುರಿಸಿದೊಂದು ನಂದಾದೀಪ
ಜಗಕ್ಕೆಲ್ಲ ತೇಜವನು ಬಿತ್ತರಿಸಿದೆ
ಪುರುಷಾರ್ಥ ಪೀಠಿಯಲಿ ವಿಜಗೀಶು ಭಾವದಲಿ
ಕೋಟಿ ತರುಣರ ಪಡೆಯ ಮುನ್ನಡೆಸಿದೆ
ಭಾರತಿಯ ಜಯಘೋಷ ಮಾರ್ಧನಿಸಿದೆ || 2 ||

Leave a Reply

Your email address will not be published. Required fields are marked *

*

code