ಯುಗ ಸಂಧಿಯ ದಿನ ಸನಿಹಕೆ ಬರುತಿದೆ

ಯುಗ ಸಂಧಿಯ ದಿನ ಸನಿಹಕೆ ಬರುತಿದೆ
ಸುಸ್ಥಿರಗೊಳುತಿದೆ ಬಂಧುತ್ವ
ನಗುಮೊಗದೊಂದಿಗೆ ಜಗದೆಲ್ಲೆಡೆಯಲು
ವಿಸ್ತರಗೊಳುತಿದೆ ಹಿಂದುತ್ವ || ಪ ||

ಸಂದಿಹ ದಿನಗಳ ಜಯ ಅಪಜಯಗಳ
ಹೊಂದಿದಬಗೆಯನು ಪರಿಕಿಸುತ
ಸುಂದರ ನಾಳೆಗೆ ಚೆಂದದ ಯೋಜನೆ
ಧುಮುಕಿದೆ ಯುವಪಡೆ ಶ್ರಮಸಹಿತ || 1 ||

ಮತ ಉನ್ಮತ್ತರು ವಿಕೃತ ಮತಿಗಳು
ಬಾಧಿಸುತಿರುವರು ಬಗೆನೂರು
ಎದುರಿಸಿ ಚದುರಿಸಿ ನಿವಾರಿಸ ಬಲ್ಲೆವು
ಹಿಂದುವಿನೆದೆ ಸ್ಥೈರ್ಯದ ಮೇರು || 2 ||

ವಿಘಟಿತ ವಿಭಜಿತ ಜನಮನವೆಲ್ಲವು
ಸಮರಸ ಗೊಳುತಿದೆ ಕಾರ್ಯದಲಿ
ಏಕತೆಯೊಂದಿಗೆ ಧ್ಯೇಯದ ಸಾಧನೆ
ವಿಕಸನಗೊಳುತಿದೆ ಭರದಲ್ಲಿ || 3 ||

Leave a Reply

Your email address will not be published. Required fields are marked *