ವಿಶ್ವದ ಹಣೆಬರಹ ಬರೆವ ಓ ವಿಧಿಯೇ

ವಿಶ್ವದ ಹಣೆಬರಹ ಬರೆವ ಓ ವಿಧಿಯೇ
ಬರೆಯಲಿಬಿಡು ಭಾರತವು ವಿಶ್ವದ ಭವಿತವ್ಯವ
ಶರಣಾಗಿ ಬರುವವರು ಬರಲಿಬಿಡು ಭಾರತಕೆ
ಆಸ್ಥೆಯಲಿ ಪೋಷಿಪಳು ತಾಯಿ ಭಾರತಿಯು || ಪ ||

ಚಿತ್ರಿಸಿಡು ಭಾರತದ ರಮಣೀಯ ಸೌಂದರ್ಯ
ಮುದವ ನೀಡುವ ಚಿತ್ರ ಓ ಚಿತ್ರಕಾರ
ಅಳಿಸಿಹೋಗದ ಶಾಯಿ ಇರಲಿ ನಿನ ಚಿತ್ರದಲಿ
ಮೈಮನದಿ ನೆಲೆನಿಲಲಿ ವಿಶ್ವ ಭಿತ್ತಿಯಲಿ || 1 ||

ಗಾಯಕನೆ ನೀ ಹಾಡು ಭಾರತದ ಚರಿತ್ರೆಯನೆ
ಭಾವ ರಾಗಗಳೊಡನೆ ತಾಳ ಕೂಡಿರಲಿ
ಮನದಿ ನೆಲೆಗೊಳ್ಳಲಿ ಭಾರತಿಯ ಇತಿಹಾಸ
ತಲೆದೂಗಲಿ ವಿಶ್ವ ತಾಯಿ ಭಾರತಿಗೆ || 2 ||

ಕೋಟಿಪುಣ್ಯಕೆ ಸಮವು ಭಾರತದಿ ಹುಟ್ಟುವುದು
ಜನ್ಮಜನ್ಮದಾ ಪುಣ್ಯ ಭಾರತಿಯ ಮಡಿಲು
ಪ್ರತಿಜನ್ಮ ಜನಿಸುವೆನು ನಾನಿಲ್ಲಿ ಓವಿಧಿಯೆ
ಬದಲಿಸದೆ ಬರೆದುಬಿಡು ಎನ್ನ ಹಣೆಬರಹ || 3 ||

Leave a Reply

Your email address will not be published. Required fields are marked *

*

code