ರಾಮ ದಂಡು ನಡೆಯಿತು ರಾಮ ದಂಡು
ಗಂಡೆದೆ ಎಂಟೆದೆ ಕೆಚ್ಚೆದೆ ತುಂಬಿರುವ
ವೀರ ದಂಡು ಶೂರ ದಂಡು ಸೋಮ ದಂಡು
ರಾಮ ದ್ರೋಹಿ ಹಿಂದೂ ದ್ರೋಹಿ ಬಂಟರನ್ನು ಸದೆಬಡಿಯುವ
ಹನುಮ ದಂಡು ಸಿಡಿಗುಂಡು ಶೂರ ದಂಡು
ರಾಮ ದಂಡು ಭೀಮ ದಂಡು ಹಿಂದೂ ದಂಡು|| ಪ ||
ಸಾಧು ಸಂತ ಋಷಿಗಳು ದಾರಿ ತೋರಲು
ವಿಶ್ವಹಿಂದೂ ಪ್ರೇಮಿಗಳು ಮುಂದೆ ನಡೆದರು
ಧರ್ಮದ ಪಂಜನು ಹಿಡಿಯುತ sss
ಶಾಂತಿಯ ಮಂತ್ರವ ಸಾರುತ ss
ಜಯ ರಾಮ ಶ್ರೀ ರಾಮ ಎಂದು ಹಾಡುತ s || 1 ||
ಸಪ್ತ ಸತ್ ಸ್ವತಂತ್ರ ಮಂತ್ರ ಏನೇ ಆಗಲಿ
ತಡೆಯೊಡ್ಡುವ ಅಡ್ಡಗೋಡೆ ಎದುರು ನಿಲ್ಲಲಿ
ನ್ಯಾಯದ ಅಂಕುಶ ಬಿಸುತss
ಛೇದಿಸಿ ಖಂಡಿಸಿ ಸಾಗುತಾss
ವಿಜಯ ಧ್ವಜದೊಂದಿಗೆ ಮುಂದೆ ಸಾಗುತಾss
||ರಾಮ ದಂಡು ||
ರಾಮಜನ್ಮ ಭೂಮಿಗಾಗಿ ನಾವು ಬದುಕುವ
ಪುಣ್ಯಭೂಮಿ ರಾಮ ಭೂಮಿ ನಮಗೆ ದಕ್ಕಿತು
ಎನುತಲಿ ಸಂಭ್ರಮ ಆಚರಿಸುತಾsss
ಮಂದಿರ ಕಟ್ಟಲು ಶ್ರಮಿಸುತಾss
ಗುರಿ ಸೇರಲು ಗುಡುಗುಡುಗಿ ಮುಂದೆ ಚಲಿಸುತಾ || 2 ||