ಮಾರ್ಗದರ್ಶಕ ಎಮಗೆ ಮಾಧವನೆ

ಮಾರ್ಗದರ್ಶಕ ಎಮಗೆ ಮಾಧವನೆ ನೀನಾದೆ
ಸಂಘವೇ ಅನಿವಾರ್ಯ ಎಂಬುದನೇ ಸಾರಿದೆ || ಪ ||

ನಿನದೊಂದು ಉಲಿಯಿಂದ ಭಾರತವ ರಕ್ಷಿಸಿದೆ
ಧರ್ಮ ಸ್ಥಾಪನೆಯಂದು ಸಂಚರಿಸಿ ನೀಗೈದೆ
ಮಾಧವನೆ ನೀನಾದೆ ರಾಷ್ಟ್ರಯುಗ ದ್ರಷ್ಟಾರ
ಮಂತ್ರ ನೀಡಿದೆಯೆಂದು ರಾಷ್ಟ್ರಾಯ ಸ್ವಾಹಾ || 1 ||

ಹಗಲಿರುಳು ಚಿಂತಿಸಿದೆ ರಾಷ್ಟ್ರದ ಉನ್ನತಿಯ
ಎಡೆಬಿಡದೆ ನೀಗೈದೆ ಜನಮನದ ಜಾಗೃತಿಯ
ರಾಷ್ಟ್ರಕೆ ಅರ್ಪಿಸಿದೆ ನೀನಂದೆ ಸರ್ವಸ್ವ
ಕರೆ ನೀಡಿ ನೀನಂದು ರಾಷ್ಟ್ರಾಯ ಇದಂ ನ ಮಮ || 2 ||

ಸಾರಥಿಯು ನೀನಾದೆ ಸಂಘರಥ ಚಾಲನೆಗೆ
ರಾಷ್ಟ್ರದ ಸೇವೆಯಲಿ ಅಗ್ರಸರ ನೀನೆಮಗೆ
ಹಿಂದು ನಾನೆನ್ನಲು ಅಂಜಿಕೆಯು ಬೇಕಿಲ್ಲ
ಘೋಷಿಸಿದೆ ನೀನಂದು ನ ಹಿಂದು ಪತಿತೋ ಭವೇತ್ || 3 ||

Leave a Reply

Your email address will not be published. Required fields are marked *

*

code