ಕಾರ್ಯಕ್ಷೇತ್ರದ ಕರೆಗೆ ಬಂಧುಗಳೇ ಓಗೊಡುವಾ | ಸೇವೆಯ ಸತ್ಪಥದಲ್ಲಿ ಹೆಜ್ಜೆಯ ಮುಂದಕೆ ಇಡುವಾ || ಪ || ಬಂದರು ನೂರು ಸವಾಲು ಎದೆಗುಂದದೆ ಸ್ವೀಕರಿಸಿ ಧೈರ್ಯದಿ ಮುನ್ನಡೆಯೋಣ ಧ್ಯೇಯದ ದೀಪವ ಧರಿಸಿ || 1 || ಶತವಿಧ ಭೇದವನಳಿಸಿ ಸಮತೆಯ ಭಾವವ ಬೆಳೆಸಿ ಸಮರಸತೆಯ ಸುಧೆಯುಣಿಸಿ ಸ್ವರ್ಗವನೇ ಧರೆಗಿಳಿಸಿ || 2 || ಸುರವಾಣಿಯ ಸವಿಜೇನು ಸರಿಸಾಟಿಯು ಇಹುದೇನು? ಯೋಗದ ಘನ ಸಹಯೋಗ ಮೈಮನಕೆ ಹಿತ ತಾನು || 3 || ವ್ಯರ್ಥವು ಬರಿ ಉಪದೇಶ ಸಾರ್ಥಕ […]
ಖಿನ್ನತೆಯ ಕಳೆದಳಿಸಿ ಭಿನ್ನತೆಯ ಬದಿಗಿರಿಸಿ | ಧನ್ಯತೆಯ ಮಾರ್ಗದಲಿ ಸಾಗೋಣ ಬನ್ನಿ | ಧರೆಗೆ ಸೇವೆಯ ಪ್ರಭೆಯ ಬೀರೋಣ ಬನ್ನಿ || ಪ || ಎನಿತೊ ಜನ್ಮದ ಪುಣ್ಯಫಲವೆಮಗೆ ಲಭಿಸಿಹುದು ಗುರಿ ಇರದ ಜೀವನಕೆ ಹೊಸದಿಶೆಯು ದೊರೆತಿಹುದು ಗುರುಹಿರಿಯರಾದರ್ಶ ದಿವ್ಯ ಮೇಲ್ಪಂಕ್ತಿ ಬೆಂಬಲಕೆ ಇಹುದೆಮಗೆ ಸಂಘಟನೆಯ ಶಕ್ತಿ || 1 || ತರತಮವು ಇಲ್ಲದಿಹ ಸದೃಢ ಸಮಾಜವನು ಕೊರತೆ ಇನಿತೂ ಇರದ ಸಮೃದ್ಧ ದೇಶವನು ನಿರ್ಮಾಣಗೈಯುವುದೆ ಬಾಳಗುರಿಯಾಗಿರಲಿ ಕಷ್ಟವೆನಿತೇ ಬರಲಿ ಮುನ್ನಡೆವ ಛಲವಿರಲಿ || 2 || […]
ಬನ್ನಿ ಬನ್ನಿ ಬಂಧುಗಳೇ ಎಲ್ಲರು ಒಂದಾಗಿ ಬನ್ನಿ ಬನ್ನಿ ಭಗಿನಿಯರೇ ಸೇವೆಗೆ ಮುಂದಾಗಿ ನಾಡಿನ ಸೇವೆಗೆ ಮುಂದಾಗಿ || ಪ || ನಾಡಿನ ಹಿತಸಾಧನೆಗಾಗಿ ಮುಡಿಪಾಗಿರಲಿ ಈ ಬದುಕು ನೋವು ನಿರಾಶೆಯ ಕೂಪದಲಿ ಮೂಡಿಸಿ ಸೇವೆಯ ಹೊಂಬೆಳಕು || 1 || ಭೇದಗಳನು ಕಿತ್ತೆಸೆಯೋಣ ಹೃದಯ ಹೃದಯಗಳ ಬೆಸೆಯೋಣ ಭಾವೈಕ್ಯದ ಘನಶಕ್ತಿಯಲಿ ಬಲಾಢ್ಯರಾಗಿ ಬೆಳೆಯೋಣ || 2 || ಸ್ವಾರ್ಥದುರಾಶೆಯ ಬದಿಗಿರಿಸಿ ಕೀರ್ತಿಯ ಬಯಕೆಯ ಸುಟ್ಟುರಿಸಿ ವ್ಯಕ್ತಿವ್ಯಕ್ತಿಗಳ ಜೋಡಿಸುತ ಸೇವೆಯ ಸೇನೆಯ ಬಲಪಡಿಸಿ || 3 ||
ಕಾಯಾವಾಚಾ ಮನಸಾ ಮಾತೆಯ ಸೇವೆಯ ಮಾಡುವೆವು | ನಮ್ಮಯ ಕೊನೆಯುಸಿರಿರುವನಕ ನಾಡಿಗಾಗಿ ಹೋರಾಡುವೆವು | ನಾಡಿಗಾಗಿಯೇ ದುಡಿಯುವೆವು ನಾಡಿಗಾಗಿಯೇ ಮಡಿಯುವೆವು || ಪ || ಇಲ್ಲಿದೆ ಬಾಳಿನ ನೂತನ ಅರ್ಥ ಸುಮ್ಮನೆ ಕಳೆಯದೆ ದಿನಗಳ ವ್ಯರ್ಥ ಕಾರ್ಯಕ್ಷೇತ್ರಕೆ ಧುಮುಕುವೆವು ಬಿಡುವಿಲ್ಲದೆ ಪರಿಶ್ರಮಿಸುವೆವು || 1 || ನಮ್ಮಯ ಹಿರಿಯರು ತೋರಿದ ಹಾದಿ ಸಾಧನೆಗದುವೇ ಭದ್ರಬುನಾದಿ ವಿಘ್ನ ವಿರೋಧವ ಮೆಟ್ಟುವೆವು ಭವ್ಯ ಸಮಾಜವ ಕಟ್ಟುವೆವು || 2 || ಗ್ರಾಮ ನಗರ ಗಿರಿಕಾನನಗಳಲಿ ಸೇವಾವ್ರತಿಗಳ ಪಡೆಯು ಚಲಿಸಲಿ ಸ್ನೇಹದೊಳೆಲ್ಲರ […]
ಧ್ಯೇಯದೆಡೆಗೆ ದಿಟ್ಟತನದಿ ಮುಂದೆ ನಡೆಯುವ ದಮನಗೈದು ದುರುಳರ ಧರೆಯ ಉಳಿಸುವ || ಪ || ನಾವು ನಾವೆ ಎಂದಿಗು ಮೃಗರಾಜನ ತೆರದಿ ಗತಕಾಲದ ಇತಿಹಾಸದ ಹಿರಿಯರ ಹಾದಿ ಮುನ್ನಡೆಸುವ ಬಡಿದೆಬ್ಬಿಸಿ ನಮ್ಮ ಅನುಜರ ನಿದ್ರಿಸಲು ಬಿಡೆವಿನ್ನು ರಣಮಹತ್ತರ || 1 || ಶಿವನ ಖಡ್ಗದ ಹೊಳಪು ಕಣ್ಣ ಮುಂದಿದೆ ರಾಣನಶ್ವದ ಖರಪುಟ ಕಿವಿಯ ತುಂಬಿದೆ ಅಝಾದ ಭಗತರ ನೆನಪು ಮನದಿ ನಿಂತಿದೆ ಸಾಗುವೀರ ಎದೆಯನೆತ್ತಿ ಭಯವದೆಲ್ಲಿದೆ || 2 || ಅದೋ ಕೇಳಿ ಮೊಳಗುತಿದೆ ವಿವೇಕವಾಣಿಯು ಎದ್ದು […]
ಕಲೆಯು ರಂಜನೆಗಲ್ಲ ಭಗವದಾರಾಧನೆಗೆ ಶಿವನಾಗಿ ಶಿವಪೂಜೆ ಬಾಳಬಯಕೆ ಉನ್ಮತ್ತಚಿತ್ತಕ್ಕೆ ಪಥವೇನು ಗತಿಯೇನು ಸ್ಥಿರಚಿತ್ತ ಉತ್ಕರ್ಷ ಕಲೆಯ ಹರಕೆ || ಪ || ಭಾವಪ್ರವಾಹಕ್ಕೆ ತಾಳಲಯಗಳ ತೀರ ಶಾಂತ ಸುಖಸಾಗರದ ದಿಶೆಗೆ ಯಾನ ರುದ್ರತಾಂಡವದೊಡನೆ ಉಮೆಯಲಾಸ್ಯದ ಮಿಲನ (ಧೀಂತಕಿಟ ಧಿರಗಿಟತಕಿಟ ಧೀಂತಕಿಟ ಧೀಂತಾ) ಭದ್ರವನೆ ಉಲಿಯಿತು ರುದ್ರವೀಣಾ || 1 || ಸೃಷ್ಟಿಮೂಲವೆ ನಾದ ಪ್ರಣವಮಂತ್ರ ನಿನಾದ ಪ್ರಸ್ತರಣ ವಿಸ್ತರಣ ಶಾಸ್ತ್ರವೇದ ಒಂದು ಹಲವಾಗುವುದು ಹಲವರಲು ತಾನಿಹುದು ಪಠಣ ಗಾಯನದಿಂದ ತತ್ವ ಬೋಧ || 2 || ಮರುಳು […]
ಶ್ರೀಗಂಧ ನಾನಾಗಿ ಹುಟ್ಟುತ್ತಿದ್ದರೆ ಆಗ ನಿನ್ನ ಪಾದಾರ್ಚನೆಗೆ ಸವೆಯುತಿದ್ದೆ ಗಿಡದಲ್ಲಿ ಹೂವಾಗಿ ಹುಟ್ಟುತ್ತಿದ್ದರೆ ಆಗ ಪಾದ ಪೂಜೆಯ ಸಮಯ ಬಳಿ ಸೇರುತಿದ್ದೆ || ಪ || ನಿನ್ನ ಭಜಿಸುವ ದುಂಬಿ ನಾನಾಗಿ ಜನಿಸಿದರೆ ಪದಕಮಲ ಮಕರಂದ ಹೀರುತಿದ್ದೆ ನೀ ನಡೆವ ಮಾರ್ಗದಲಿ ನಾನು ಜನಿಸಿದರಾಗ ನಿನ್ನ ಪದ ಧೂಳಿಯಲಿ ಹೊರಳಾಡುತಿದ್ದೆ || 1 || ಯಾವೊಂದು ನದಿಯಲ್ಲಿ ನೀರಾಗಿ ಜನಿಸಿದರೆ ನಿನ್ನ ಪದ ತೊಳೆವಲ್ಲಿ ನಾನೊದಗುತಿದ್ದೆ ನಿನ್ನ ನಿಜ ಭಕ್ತನು ನಾನಾಗಿ ಜನಿಸಿದರೆ ನಿನ್ನ ಪದಕಮಲದಲಿ ಮೈಮರೆಯುತಿದ್ದೆ […]
ರಾಮ ದಂಡು ನಡೆಯಿತು ರಾಮ ದಂಡು ಗಂಡೆದೆ ಎಂಟೆದೆ ಕೆಚ್ಚೆದೆ ತುಂಬಿರುವ ವೀರ ದಂಡು ಶೂರ ದಂಡು ಸೋಮ ದಂಡು ರಾಮ ದ್ರೋಹಿ ಹಿಂದೂ ದ್ರೋಹಿ ಬಂಟರನ್ನು ಸದೆಬಡಿಯುವ ಹನುಮ ದಂಡು ಸಿಡಿಗುಂಡು ಶೂರ ದಂಡು ರಾಮ ದಂಡು ಭೀಮ ದಂಡು ಹಿಂದೂ ದಂಡು|| ಪ || ಸಾಧು ಸಂತ ಋಷಿಗಳು ದಾರಿ ತೋರಲು ವಿಶ್ವಹಿಂದೂ ಪ್ರೇಮಿಗಳು ಮುಂದೆ ನಡೆದರು ಧರ್ಮದ ಪಂಜನು ಹಿಡಿಯುತ sss ಶಾಂತಿಯ ಮಂತ್ರವ ಸಾರುತ ss ಜಯ ರಾಮ ಶ್ರೀ ರಾಮ […]
ಶಿಶಿರ ಋತು ಸರಿದಂತೆ ಮುಂಜಾವು ಹರಿದಂತೆ ಹಿಂದುತ್ವದಭಿಮಾನ ಮೈ ಕೊಡವಿದೆ ತೊರೆದು ಶತಕದ ನಿದ್ದೆ, ನಾಡು ಮೇಲೆದ್ದಂತೆ ಯುವ ಮನದಿ ಚೈತನ್ಯ ನವಿರೆದ್ದಿದೆ ನವಯುಗದ ನವಗಾನ ಶುಭ ನುಡಿದಿದೆ || ಪ || ಕೇಶವ ಭಗೀರಥನ ಹರಿಸಿ ಸಂಘದ ಗಂಗೆ ವಿಮಲ ಸಂಸ್ಕೃತಿ ಮೈದುಂಬಿದೆ ರಾಷ್ಟ್ರಜೀವನದಂಗ ಪ್ರತ್ಯಂಗ ನಳನಳಿಸಿ ಸಮರಸದ ಸೂತ್ರದಲ್ಲಿ ಸಂಭ್ರಮಿಸಿವೆ ಹಿಂದು ಶಕ್ತಿ ಪ್ರವಾಹ ಸಂಘಮಿಸಿವೆ || 1 || ಅಂದು ಕೇಶವನುರಿಸಿದೊಂದು ನಂದಾದೀಪ ಜಗಕ್ಕೆಲ್ಲ ತೇಜವನು ಬಿತ್ತರಿಸಿದೆ ಪುರುಷಾರ್ಥ ಪೀಠಿಯಲಿ ವಿಜಗೀಶು ಭಾವದಲಿ […]
ವಿಶ್ವದ ಹಣೆಬರಹ ಬರೆವ ಓ ವಿಧಿಯೇ ಬರೆಯಲಿಬಿಡು ಭಾರತವು ವಿಶ್ವದ ಭವಿತವ್ಯವ ಶರಣಾಗಿ ಬರುವವರು ಬರಲಿಬಿಡು ಭಾರತಕೆ ಆಸ್ಥೆಯಲಿ ಪೋಷಿಪಳು ತಾಯಿ ಭಾರತಿಯು || ಪ || ಚಿತ್ರಿಸಿಡು ಭಾರತದ ರಮಣೀಯ ಸೌಂದರ್ಯ ಮುದವ ನೀಡುವ ಚಿತ್ರ ಓ ಚಿತ್ರಕಾರ ಅಳಿಸಿಹೋಗದ ಶಾಯಿ ಇರಲಿ ನಿನ ಚಿತ್ರದಲಿ ಮೈಮನದಿ ನೆಲೆನಿಲಲಿ ವಿಶ್ವ ಭಿತ್ತಿಯಲಿ || 1 || ಗಾಯಕನೆ ನೀ ಹಾಡು ಭಾರತದ ಚರಿತ್ರೆಯನೆ ಭಾವ ರಾಗಗಳೊಡನೆ ತಾಳ ಕೂಡಿರಲಿ ಮನದಿ ನೆಲೆಗೊಳ್ಳಲಿ ಭಾರತಿಯ ಇತಿಹಾಸ ತಲೆದೂಗಲಿ […]