ಧ್ಯೇಯದೆಡೆಗೆ ದಿಟ್ಟತನದಿ ಮುಂದೆ ನಡೆಯುವ
ದಮನಗೈದು ದುರುಳರ ಧರೆಯ ಉಳಿಸುವ || ಪ ||
ನಾವು ನಾವೆ ಎಂದಿಗು ಮೃಗರಾಜನ ತೆರದಿ
ಗತಕಾಲದ ಇತಿಹಾಸದ ಹಿರಿಯರ ಹಾದಿ
ಮುನ್ನಡೆಸುವ ಬಡಿದೆಬ್ಬಿಸಿ ನಮ್ಮ ಅನುಜರ
ನಿದ್ರಿಸಲು ಬಿಡೆವಿನ್ನು ರಣಮಹತ್ತರ || 1 ||
ಶಿವನ ಖಡ್ಗದ ಹೊಳಪು ಕಣ್ಣ ಮುಂದಿದೆ
ರಾಣನಶ್ವದ ಖರಪುಟ ಕಿವಿಯ ತುಂಬಿದೆ
ಅಝಾದ ಭಗತರ ನೆನಪು ಮನದಿ ನಿಂತಿದೆ
ಸಾಗುವೀರ ಎದೆಯನೆತ್ತಿ ಭಯವದೆಲ್ಲಿದೆ || 2 ||
ಅದೋ ಕೇಳಿ ಮೊಳಗುತಿದೆ ವಿವೇಕವಾಣಿಯು
ಎದ್ದು ಸಾಗು ನಿಲ್ಲದೆ ಗುರಿ ಮುಟ್ಟುವವರೆಗೂ
ಬಲು ಸ್ಥೈರ್ಯದಿ ಹಿಂದುವಿನೆದೆ ಸೆಟೆದು ನಿಂತಿದೆ
ಗೆಲುವೆಮ್ಮದೆ ದಿಟವಹುದು ಈಶನೊಲವಿದೆ || 3 ||