ಸರಿಗಮ ಸ್ವರಗಳ ಏರಿಳಿತ

ಸರಿಗಮ ಸ್ವರಗಳ ಏರಿಳಿತ
ಅದುವೇ ಸುಮಧುರ ಸಂಗೀತ
ಸಮರಸತೆಯ ಸ್ಪಂದನ ಮಿಡಿತ
ನಾಡಿನ ಐಕ್ಯದ ಸಂಕೇತ || ಪ ||

ಅಳಿಸಲೇಬೇಕು ನಾವಿಂದು
ಮೇಲುಕೀಳುಗಳ ಅಂತರವ
ರಚಿಸಲೇಬೇಕು ಸುಂದರ ಸದೃಢ
ಭಾರತಮಾತೆಯ ಮಂದಿರವ || 1 ||

ಜಾತಿಮತಗಳ ಗೋಡೆಯ ಕೆಡವಿ
ರಾಷ್ಟ್ರೀಯತೆಯು ಪ್ರವಹಿಸಲಿ
ಹಿಂದುತ್ವದ ಶ್ರೀಗಂಧದ ಪರಿಮಳ
ದಶದಿಶೆಗಳಿಗೂ ಪಸರಿಸಲಿ || 2 ||

ವಿಶ್ವಶಾಂತಿಯ ಗುರಿಸಾಧನೆಗೆ
ವಿಶ್ವಾಸವೆ ಮೂಲಾಧಾರ
ಭಾರತೀಯರೇ ನೀಡಲು ಬಲ್ಲೆವು
ಯುಗಗಳ ಕನಸಿಗೆ ಆಕಾರ || 3 ||

Leave a Reply

Your email address will not be published. Required fields are marked *

*

code