ಬನ್ನಿ ಬನ್ನಿ ಬಂಧುಗಳೇ ಎಲ್ಲರು ಒಂದಾಗಿ
ಬನ್ನಿ ಬನ್ನಿ ಭಗಿನಿಯರೇ ಸೇವೆಗೆ ಮುಂದಾಗಿ
ನಾಡಿನ ಸೇವೆಗೆ ಮುಂದಾಗಿ || ಪ ||
ನಾಡಿನ ಹಿತಸಾಧನೆಗಾಗಿ ಮುಡಿಪಾಗಿರಲಿ ಈ ಬದುಕು
ನೋವು ನಿರಾಶೆಯ ಕೂಪದಲಿ ಮೂಡಿಸಿ ಸೇವೆಯ ಹೊಂಬೆಳಕು || 1 ||
ಭೇದಗಳನು ಕಿತ್ತೆಸೆಯೋಣ ಹೃದಯ ಹೃದಯಗಳ ಬೆಸೆಯೋಣ
ಭಾವೈಕ್ಯದ ಘನಶಕ್ತಿಯಲಿ ಬಲಾಢ್ಯರಾಗಿ ಬೆಳೆಯೋಣ || 2 ||
ಸ್ವಾರ್ಥದುರಾಶೆಯ ಬದಿಗಿರಿಸಿ ಕೀರ್ತಿಯ ಬಯಕೆಯ ಸುಟ್ಟುರಿಸಿ
ವ್ಯಕ್ತಿವ್ಯಕ್ತಿಗಳ ಜೋಡಿಸುತ ಸೇವೆಯ ಸೇನೆಯ ಬಲಪಡಿಸಿ || 3 ||