ಕಾರ್ಯಕ್ಷೇತ್ರದ ಕರೆಗೆ ಬಂಧುಗಳೇ ಓಗೊಡುವಾ

ಕಾರ್ಯಕ್ಷೇತ್ರದ ಕರೆಗೆ ಬಂಧುಗಳೇ ಓಗೊಡುವಾ |
ಸೇವೆಯ ಸತ್ಪಥದಲ್ಲಿ ಹೆಜ್ಜೆಯ ಮುಂದಕೆ ಇಡುವಾ || ಪ ||

ಬಂದರು ನೂರು ಸವಾಲು
ಎದೆಗುಂದದೆ ಸ್ವೀಕರಿಸಿ
ಧೈರ್ಯದಿ ಮುನ್ನಡೆಯೋಣ
ಧ್ಯೇಯದ ದೀಪವ ಧರಿಸಿ || 1 ||

ಶತವಿಧ ಭೇದವನಳಿಸಿ
ಸಮತೆಯ ಭಾವವ ಬೆಳೆಸಿ
ಸಮರಸತೆಯ ಸುಧೆಯುಣಿಸಿ
ಸ್ವರ್ಗವನೇ ಧರೆಗಿಳಿಸಿ || 2 ||

ಸುರವಾಣಿಯ ಸವಿಜೇನು
ಸರಿಸಾಟಿಯು ಇಹುದೇನು?
ಯೋಗದ ಘನ ಸಹಯೋಗ
ಮೈಮನಕೆ ಹಿತ ತಾನು || 3 ||

ವ್ಯರ್ಥವು ಬರಿ ಉಪದೇಶ
ಸಾರ್ಥಕ ಕೃತಿಯಾದರ್ಶ
ಸರ್ವಾಂಗೀಣ ವಿಕಾಸ
ಇದು ಕಾಲದ ಸಂದೇಶ || 4 ||

Leave a Reply

Your email address will not be published. Required fields are marked *

*

code