ಒಂದಾಗಲಿ ಗುರಿಯೆಡೆ ಮುಂದಾಗಲಿ ನಾರಿಸಮೂಹದ ಮನಸುಗಳು ನಡೆನುಡಿಯಲಿ ಮೂಡಲಿ ನನಸಾಗಲಿ ಹಿಂದುತ್ವದ ಹೊಂಗನಸುಗಳು || ಪ || ಬಾಳಿಗೆ ಆಸರೆ ಭವ್ಯ ಪರಂಪರೆ ಆದರ್ಶದ ಹಿರಿಸಾಧನೆಗೆ ನಡೆಸುವ ಸಿದ್ಧತೆ ಪಡೆದು ಪ್ರಬುದ್ಧತೆ ಭರತಭೂಮಿಯಾರಾಧನೆಗೆ || 1 || ಗಳಿಸಲು ಏಳಿಗೆ ಅಭಿನವ ಪೀಳಿಗೆ ಶೀಲವೆರೆಯೆ ಹೃದಯದಾಳಕೆ ಬೇಕು ಸಮಸ್ಯೆಯ ಸ್ಥಿರ ಪರಿಹಾರಕೆ ಮಾತೃತ್ವದ ಮಂಗಳ ಹರಕೆ || 2 || ಮನಮನಗಳನೂ ತಿದ್ದಿ ರೂಪಿಸುವ ಮನೆಮನೆ ಬೆಳಗುವ ಕಾರ್ಯವಿದು ಸ್ತ್ರೀಶಕ್ತಿಯ ಅಭಿವ್ಯಕ್ತಿಯಗೊಳಿಸಿ ಘನತೆಗೊಯ್ವ ಕೈಂಕರ್ಯವಿದು || 3 […]
“ಏನೀ ಪೌರುಷ ಅಭಿಮಾನದ ಬಲಿದಾನ ? || ಪ || ದೇಶದ ದೇಹದ ಮುಡಿಗೆದರುವ ಅಪಮಾನ ? ತಾಯ್ನಾಡಿನ ತಲೆಗೂದಲೊಳೇನೀ ಹೇನಿನ ಸೇನೆ ? ದಿನ ಬೆಳಗಾದರೆ ಉಪಟಳದುರಿ ಭೀಕರ ತಲೆಬೇನೆ ! ಗಾಂಡೀವ, ಸುದರ್ಶನ, ಗಂಡೆದೆ ಭೀಮನ ಬೆಂಬಲದಿ ಧರ್ಮಜನಾಳ್ವಿಕೆ ವಿಜೃಂಭಿಸಿದೀ ಭಾರತದಿ ದಿಲ್ಲಿಯ ಪೀಠದಿ ದ್ರೌಪದಿಯನುಜ ನಪುಂಸಕನು ಜನತಾ ಕೋಟಿಯ ರಾಜ್ಯಾಡಳಿತವ ವಹಿಸಿದನೇನು?” ಹಿಮನಗದೊಳು ಯುಗಯುಗಗಳು ಮಲಗಿದ ಶಿಲೆಯೊಂದು ಬಾಯ್ದೆರೆದಾಕಳಿಸುತ ಮೇಲೇಳುತ ಕೇಳುತಿದೆ ! || 1 || “ಕಲ್ಗುಂಡಿಗು ನಿದ್ರಾಭಂಗವೆ ? ನಿಜ, […]
ಉತ್ತರದೊಳು ಹರಿದಿಹ ಅನುಜರ ನೆತ್ತರಿಗೆ ಸೇಡಿನ ಕಿಡಿ ಆಹುತಿಯನು ಬಯಸುತಿದೆ || ಪ || ಗರ್ಜಿಸುತಿದೆ ಶತಶತಮಾನದ ನಮ್ಮಿತಿಹಾಸ ಏನಿಂತಾಯಿತೆ ಮೈಮರೆಯಿತೆ ಭಾರತದೇಶ ? ಸದ್ದುಡುಗಿತೆ ಸತ್ತಡಗಿತೆ ಪೌರುಷದಾದೇಶ ? ಅಳಿಯಿತೆ ಮಾನವ ಮಾರದ ಮಾನವರಾವೇಶ ? || 1 || ಸ್ವಾರ್ಥವು ಕುಳಿತಿತೆ ಶ್ರೀ ಹರ್ಷನ ಸಿಂಹಾಸನದಿ ? ಷಂಡತ್ವದ ನೆಲೆಯಾಯಿತೆ ನವದಿಲ್ಲಿಯ ಗಾದಿ ? ಧೃತಿಮತಿ ಇಲ್ಲದವರಿಗಾಗಲಿ ಬೀಳ್ಕೊಡುಗೆ ಮೇಲೇರಲಿ ಸತ್ಪುತ್ರರು ನಾಡಿನ ಮುನ್ನಡೆಗೆ ನವಯುವಕರೆ ಸ್ವೀಕರಿಸಿರಿ ಬನ್ನಿರಿ ಆಹ್ವಾನ ಸಂರಕ್ಷಿಸಿ ನಿಮ್ಮನು ಬೆಳೆಸಿದ […]
ಅನುಜತ್ವಕೆ ಮನುಜತ್ವಕೆ ಘನತತ್ವದ ಸ್ವೀಕಾರಕೆ ಕಿವಿಗೊಟ್ಟೆವು ಓಗೊಟ್ಟೆವು ಒಕ್ಕೊರಲಿನಲಿ ಜನದುಃಖದ ಪರಿಹಾರಕೆ ದನುಜತ್ವದ ಸಂಹಾರಕೆ ಪಣತೊಟ್ಟೆವು ಅಡಿಯಿಟ್ಟೆವು ಒಗ್ಗಟ್ಟಿನಲಿ || ಪ || ಸುಜ್ಞಾನದ ವಿಜ್ಞಾನದ ಪೂಜೆಗೆ ಬೆಳಗಲಿ ಉಜ್ವಲ ಪ್ರಾಣದ ಪ್ರಣತಿ ಆಕ್ರಮಕರ ಕಂಡೊಡನೆಯೆ ಕೆರಳುತ ಕಾಳ್ಗಿಚ್ಚಾಗುತ ಕಾಲಸ್ವರೂಪದಿ ಧಗಧಗಿಸಲಿ ಈ ಜ್ಯೋತಿ || 1 || ಅಮೃತ ಮಂತ್ರವ ಸಾರುತ ಉದಿಸುತಲಿದೆ ನವ ಭಾರತ ಇತಿಹಾಸ ಪುರಾಣಗಳಾಳದ ಉಸಿರಿಂದ ಭಾಗ್ಯೋದಯ ಕಣ್ತುಂಬಿದೆ ಪ್ರಭೆ ಚಿಮ್ಮಿದೆ ಬಲ ಹೊಮ್ಮಿದೆ ಪ್ರೇರಣೆ ಪುಟಿದಿದೆ ಬುವಿಯಾಳದ ಬಸಿರಿಂದ || […]
ಹೊಮ್ಮುತಿದೆ ಹೊಸಬೆಳಕು ಹಿಂದು ಬಾಂದಳದಲ್ಲಿ ಚಿಮ್ಮಿಸುತ ನವಸ್ಫೂರ್ತಿ ಹಿಂದು ಬಾಂಧವರಲ್ಲಿ || ಪ || ಧ್ಯೇಯ ರವಿಕಿರಣಗಳು ತುಂಬಿಸಿವೆ ತರುಣರೊಳು ಕುಂದದಿಹ ಉತ್ಸಾಹ ಸಾಧನೆಯ ವ್ಯಾಮೋಹ ಕಾಯವನು ಶ್ರೇಯಯುತ ಕಾಯಕಕೆ ಕಾದಿರಿಸಿ ಅರಳುತಿದೆ ಯುವಶಕ್ತಿ ನೋಡಿರಿಲ್ಲಿ || 1 || ಸತ್ತು ಮಲಗಿಹ ಛಲವು ಮತ್ತೆ ತಲೆ ಎತ್ತಿಹುದುs ಸುತ್ತಲಿನ ಶತ್ರುಗಳ ಪಡೆಯ ಧರೆಗೊತ್ತಿಹುದು ಹತ್ತು ದಿಕ್ಕುಗಳಲ್ಲೂ ಬಿತ್ತರಿಸಿ ರಣಘೋಷ ದೃಢತೆಯಿಂ ಮುನ್ನುಗ್ಗಿ ಜಗವ ಗೆಲ್ಲಿ || 2 || ಕುರುಡು ರೂಢಿಯ ರಾಡಿ ನಾಡಿನಿಂ ಹೊರದೂಡಿ […]
ಹೃದಯಂಗಮ ಹಿಂದು ಸಂಗಮ ಬಲು ಸಂಭ್ರಮ ಬಂಧು ಸಮಾಗಮ || ಪ || ನಾನಾ ವಿಧದಾಮಿಷಕೊಳಗಾಗಿ ಧರ್ಮಾಂಧರ ದೌಷ್ಟ್ಯಕೆ ತಲೆಬಾಗಿ ಮತಬಾಹಿರ ಹತಭಾಗ್ಯರು ನರಳಿರೆ ಮಾತೆಯ ಮಮತೆಯ ಕರೆಯು ಹೃದಯಂಗಮ || 1 || ಮಡಿಲಡಿಯಲಿ ಹುಡಿಯಾಗಿಹ ಜನರು ಒಲುಮೆಯ ಸ್ಪರ್ಶಕೆ ಹಾತೊರೆದವರು ಅರಿವಿನ ಅರುಣೋದಯದೊಡಗೂಡಿ ನಲಿಯುತ ಬರುತಿಹ ನೋಟ ಹೃದಯಂಗಮ || 2 || ಬೇಕಿಲ್ಲೆಮಗೆ ಒಣ ವೇದಾಂತ ಬೇಕಿದೆ ಐಕ್ಯದ ಘನಸಿದ್ಧಾಂತ ತರುಣ ಜನಾಂಗಕೆ ಸ್ಫೂರ್ತಿಯ ನೀಡುವ ಅರುಣಪತಾಕೆಯ ಲಾಸ್ಯ ಹೃದಯಂಗಮ || 3 […]
ಹಿಮಗಿರಿಯಾಶೃಂಗ ದೇವನದೀ ಗಂಗಾ ಮನದಲಿ ಮೂಡಿಪ ಭಾವವಿನೂತನ ಅನುಪಮ ಉತ್ತುಂಗಾsss ಅನುಪಮ ಉತ್ತುಂಗ || ಪ || ದಿವ್ಯ ಸನಾತನ ಸಂಸ್ಕೃತಿಗೆ ವೇದಪುರಾಣವೇ ಸಾಕ್ಷಿಗಳು ಹಿಂದುವಿನುನ್ನತಿ ಅವನತಿಗೆ ಸಾಕ್ಷಿ ಹಿಮಾದ್ರಿಯ ಶಿಖರಗಳು ಅಂಜುವ ಎದೆಯಲಿ ಧೈರ್ಯದ ಪಂಜನು ಉರಿಸುವ ಮಂಜಿನ ಮಹಲುಗಳು || 1 || ಆ ಸುರಲೋಕವ ಮೀರಿಸುವಾ ನಾಡಿಗೆ ಧುಮುಕಿದ ಭಾಗೀರಥೀ ಭಾರತಮಾತೆಯ ಸಂಗದಲಿ ಧನ್ಯತೆಯಾಂತಿಹ ಭಾಗ್ಯವತೀ ಹಿಂದೂ ದೇಶದ ಕಣಕಣ ಜನಮನ ಪಾವನಗೊಳಿಸಿಹ ಪುಣ್ಯವತೀ || 2 || ಸೋಲೇ ಗೆಲುವಿನ ಸೋಪಾನ […]
ಹಿಂದೂ ವೀರನೆ ನಿನ್ನೊಳು ಅಡಗಿಹ ಛಲಬಲ ಸಾಹಸ ಹೊಮ್ಮುವುದೆಂದು? ಈ ನಾಡಿನ ನರನಾಡಿಗಳಲ್ಲಿ ಕ್ಷಾತ್ರಪ್ರವಾಹವು ಉಕ್ಕುವುದೆಂದು? ಬಾ ಬಾ ನಾಡನು ಕಟ್ಟಲು ಇಂದು || ಪ || ವೀರಧನುರ್ಧರ ಆ ದಾಶರಥಿ ಚಕ್ರವ ಪಿಡಿದಿಹ ಪಾರ್ಥಸಾರಥಿ ನಿನ್ನೆದೆ ಗುಡಿಯಲಿ ಪಡಿಮೂಡಿಹರು ಅರಿವಿನ ಒಳಗಣ್ ತೆರೆಯೋ ಇಂದು || 1 || ಖಡ್ಗ ಭವಾನಿಯ ವಾರಸುದಾರ ವೀರಶಿವಾಜಿಯ ಓ ಸರದಾರ ಸಾಹಸಕಾರ್ಯಕಿದೇ ಸುಮುಹೂರ್ತ ವಿಜಯರಣಾಂಗಣದೊಳು ಧುಮುಕಿಂದು || 2 || ಕೈಜಾರಿದ ಅವಕಾಶಗಳೆನಿತೋ? ಕೈಮೀರಿದ ಸಂದರ್ಭಗಳೆನಿತೋ? ಕಳೆದಿಹ ಕಾಲವು […]
ಹನಿಯು ವಾಹಿನಿಯಾಯ್ತು ವಾಹಿನಿಯು ಜಲಧಿ ಕೇಶವನ ಛಲಧಾರಿ ಯುವಜನರ ಬಲದಿ ಸತತ ಸಾಧನೆಗೈದ ಭಾರತದ ನೆಲದಿ || ಪ || ವಿಘ್ನಕೋಟಿಯ ಗೆದ್ದು ದಾಟಿಹುದು ಸಂಘ ಅಗ್ನಿಯೊಳು ಮಿಂದು ಮೇಲೆತ್ತಿಹುದು ಶೃಂಗ ಗೈದಿಹುದು ವೈರಿಗಳ ಬಹುವ್ಯೂಹ ಭಂಗ ಪಸರಿಸಿದೆ ಸಾಹಸದ ಸಾಸಿರ ತರಂಗ || 1 || ರೂಢಿಯೊಳಗೂಡಿರುವ ಮೌಢ್ಯವನು ತೊರೆದು ಕಾಡಿರುವ ಕೇಡುಗಳ ಬೆನ್ನೆಲುಬು ಮುರಿದು ಮೂಡಿಹನು ನೋಡಲ್ಲಿ ಜಾಗೃತಿಯ ಸೂರ್ಯ ನೀಡಿಹನು ನಾಡಿದಕೆ ಕುಂದದಿಹ ಧೈರ್ಯ || 2 || ಆಂತರಿಕ ಭೇದಗಳ ಅಂತರವನಳಿಸಿ […]
ಸ್ವರ್ಗದ ಸೊಬಗನು ಮೀರಿಸಿ ಮೆರೆದಿಹ ಭಾರತದ ಅಂಗಳದಲ್ಲಿ ಕೇಶವ ಉರಿಸಿದ ಸಂಘದ ಹಣತೆಯು ಬೆಳಗಿತು ಜನಮನ ಮನದಲ್ಲಿ || ಪ || ತನ್ನೀ ನೆಲಜಲ ಧರ್ಮಸಂಸ್ಕೃತಿ ಹಿಂದೂ ಜನತೆಯು ಮರೆತಿರಲು ದಾಸ್ಯದ ಉರುಳಿಗೆ ಕೊರಳನು ನೀಡಿ ಸ್ವಾರ್ಥದ ಕೂಪದಿ ಮುಳುಗಿರಲು ಘೋರ ನಿರಾಶೆಯ ಘನ ತಿಮಿರದಿ ತಾ ಯುವ ಜನತೆಯು ಎದೆಗುಂದಿರಲು ಕೇಶವ ತೋರಿದ ಧ್ಯೇಯದ ಗಾದಿ ಅಂತಿಮ ವಿಜಯದ ಹಾದಿಯೊಳು ಮಾತೆಯ ಸೇವೆಯ ಅನುದಿನ ಮಾಡಲು ಜೀವನವನೆ ಮುಡಿಪಾಗಿಡಲು || 1 || ಭಾರತದೇಶದ ಭವ್ಯಪರಂಪರೆ […]