ಹೊಮ್ಮುತಿದೆ ಹೊಸಬೆಳಕು ಹಿಂದು

ಹೊಮ್ಮುತಿದೆ ಹೊಸಬೆಳಕು ಹಿಂದು ಬಾಂದಳದಲ್ಲಿ
ಚಿಮ್ಮಿಸುತ ನವಸ್ಫೂರ್ತಿ ಹಿಂದು ಬಾಂಧವರಲ್ಲಿ || ಪ ||

ಧ್ಯೇಯ ರವಿಕಿರಣಗಳು ತುಂಬಿಸಿವೆ ತರುಣರೊಳು
ಕುಂದದಿಹ ಉತ್ಸಾಹ ಸಾಧನೆಯ ವ್ಯಾಮೋಹ
ಕಾಯವನು ಶ್ರೇಯಯುತ ಕಾಯಕಕೆ ಕಾದಿರಿಸಿ
ಅರಳುತಿದೆ ಯುವಶಕ್ತಿ ನೋಡಿರಿಲ್ಲಿ || 1 ||

ಸತ್ತು ಮಲಗಿಹ ಛಲವು ಮತ್ತೆ ತಲೆ ಎತ್ತಿಹುದುs
ಸುತ್ತಲಿನ ಶತ್ರುಗಳ ಪಡೆಯ ಧರೆಗೊತ್ತಿಹುದು
ಹತ್ತು ದಿಕ್ಕುಗಳಲ್ಲೂ ಬಿತ್ತರಿಸಿ ರಣಘೋಷ
ದೃಢತೆಯಿಂ ಮುನ್ನುಗ್ಗಿ ಜಗವ ಗೆಲ್ಲಿ || 2 ||

ಕುರುಡು ರೂಢಿಯ ರಾಡಿ ನಾಡಿನಿಂ ಹೊರದೂಡಿ
ಎದೆಯ ಬಾಗಿಲ ತೆರೆದು ಬಂಧುಗಳ ಬರಮಾಡಿ
ಜಾತಿಮತ ಭೇದಗಳ ಕಾರ್ಮುಗಿಲ ಸೀಳುತಲಿ
ಮನಮನದೊಳೈಕ್ಯತೆಯ ಪ್ರಭೆಯ ಚೆಲ್ಲಿ || 3 ||

ಆಸಾಮದಾಶಯವ ಈಡೇರಿಸಲು ಬನ್ನಿ
ಪಂಜಾಬಿನುಗ್ರತೆಯ ಪಂಜ ನಂದಿಸಬನ್ನಿ
ಮಂಜುಮುಸುಕಿಹ ನೆಲದ ಅಂಜಿಕೆಯ ಭಂಜಿಸುತ
ಪಾರ್ಥಸಾರಥಿಯಂತೆ ಎದ್ದು ನಿಲ್ಲಿ || 4 ||

Leave a Reply

Your email address will not be published. Required fields are marked *

*

code