ಮನಮನ ಬೆಸೆಯುತ ಅಸಮತೆ ನೀಗುತ ಚಲಿಸಲಿ ಸಮರಸತೆಯ ಯಾನ ಅಳಿಸುತ ವಿಷಮತೆ ಗೊಳಿಸುತ ಐಕ್ಯತೆ ಗುಣಿಗುಣಿಸುತ ಮಾತೆಯ ಗಾನ ಜಯಹೇ ಜಯಹೇ ಜಯ ಭಾರತ ಮಾತಾ ಜಯಹೇ || ಪ || ಪ್ರತಿ ಎದೆಯಾಳದ ಕಣಕಣದಲ್ಲಿಯೂ ಸ್ವಾಭಿಮಾನ ಸುಧೆ ಹರಿಸೋಣ ಸ್ತುತಿಸುತ ಮಾತೆಯ ವಿಜಯದ ಮಂತ್ರವ ಬಾಂದಳದೆತ್ತರ ಹಬ್ಬೋಣ ಒಂದೇ ರಕ್ತವ ಹಂಚುತ ನಾವು ಒಂದಾಗುತ ಸಂಚರಿಸೋಣ || 1 || ಧ್ಯೇಯ ಸಮರ್ಪಿತ ಕಾರ್ಯದ ಪಥದಲಿ ಕಲುಷಗಳೆಲ್ಲವ ತ್ಯಜಿಸೋಣ ಸೇವೆಯ ಮಂತ್ರವ ಎಲ್ಲೆಡೆ ಬೆಳಗುತ ನಾಡಿಗೆ […]
ತಾಯ ಕರೆಗೆ ಓಗೊಡುತ ಬನ್ನಿ ಸಂಘಕಾರ್ಯಕೆ ತಡವರಿಸದೆ, ಮರುನುಡಿಯದೆ ಸವೆಸಿ ಬಾಳ ರಾಷ್ಟ್ರಕೆ || ಪ || ವಿಕೃತಿಯಾ ಇತಿಹಾಸ ಬಿಸುಟು ದೂರದೂರಕೆ ಗೆಲುವ ಛಲವ ಮನದೊಳಿರಿಸಿ ಸಾಗಿ ಮುಂದೆ ಮುಂದಕೆ ಕೆಡುಕನಳಿಸಿ ಒಳಿತನುಳಿಸಿ ಸ್ವಾರ್ಥ ದೂರಗೈಯುವಾ ಧ್ಯೇಯವೊಂದೇ ಕಣ್ಣಮುಂದೆ ರಾಷ್ಟ್ರದ ಉತ್ಥಾನಕೆ || 1 || ಗೀತೆಯಾ ಸಾರವಿಹುದು ನಮ್ಮ ಬಾಳ ಹಾದಿಗೆ ಅಧ್ಯಾತ್ಮದ ಮೇರುಶಕ್ತಿ ಸ್ಫೂರ್ತಿ ನಮ್ಮ ನಾಳೆಗೆ ರಾಷ್ಟ್ರರಥವ ಮುಂದಕ್ಕೆಳೆವ ಧ್ಯೇಯ ಕಣ್ಣ ಮುಂದಿರೆ ಆಕರ್ಷಣೆ ಮೋಹ ಮಾಯೆ ಕ್ಷಣಿಕ ನಮ್ಮ ಬಾಳಿಗೆ […]
ಜಯತು ಜಯತು ಭಾರತ…… ಜಯತು ಜಯತು ಭಾರತ ಈ ತಾಯ್ನಾಡಿನಾ ಮಕ್ಕಳು ನಾವು ಈ ಮಣ್ಣಿನಾ ಮಡಿಲಿನಾ ಕುಡಿಗಳು ನಾವು ಭರತಭೂಮಿಯ ಕೀರ್ತಿ ಪಥವನು ನಭದತ್ತ ಒಯ್ಯುವ ಕುವರರು ನಾವು || ಪ || ಗಂಗೆ ತುಂಗೆ ಹರಿಯುವ ಪುಣ್ಯನಾಡಿದು ಕಂಗು ತೆಂಗು ಬೆಳೆಯುವ ಹಸುರುಹೊನ್ನಿದು ಶಿಲ್ಪಕಲೆಯ ಬೆಡಗಲ್ಲಿ ಬೆಳೆದ ಬೀಡಿದು ಹಿಮಾದ್ರಿಯ ಶಿಖರದಿಂದ ಕಂಗೊಳಿಪನಾಡಿದು || 1 || ವಿವಿಧ ಜಾತಿ ವಿವಿಧ ಪಂಥ ವಿವಿಧ ಭಾಷೆಯು ವಿವಿಧ ಕಲೆ ವಿವಿಧ ಬೆಳೆ ವಿವಿಧ ವೇಷವು […]
ಭರತ ಮಾತೆಯ ಚರಣ ಸೇವೆಗೆ ಬನ್ನಿ ಕುಸುಮಗಳಾಗುತ ಧನ್ಯಭಾವದಿ ನಿತ್ಯ ನಮಿಸಲು ಗೊಳಿಸಿ ಜನಮನ ಜಾಗೃತ ಸವೆಸಿ ತನುಮನ ಅವಿರತ || ಪ || ಮೇರು ಶಿಖರವ ಏರಬಯಸಿರಿ ಬಾಳ ಬವಣೆಯ ಮರೆಯುತ ವಿಜಯದುಂದುಭಿ ಘೋಷ ಮೊಳಗಿಸಿ ಕೀಳರಿಮೆ ಬದಿಗೊತ್ತುತ ಗೊಳಿಸಿ ಜನಮನ ಜಾಗೃತ ಸವೆಸಿ ತನುಮನ ಅವಿರತ || 1 || ಒಂದೆ ಅನ್ನವ ಉಣುವ ನಮ್ಮಲಿ ತುಳಿತ ತರತಮವೇತಕೆ ಎಲ್ಲ ಭಿನ್ನತೆ ಮರೆತು ಬೆರೆಯಲಿ ಹಿಂದು ಭಾವದ ಐಕ್ಯತೆ ಗೊಳಿಸಿ ಜನಮನ ಜಾಗೃತ ಸವೆಸಿ […]
ಮಾಧವ ನಿನ್ನಯ ಆದರ್ಶಗಳೆ ಬಾಳಿಗೆ ಸೋಪಾನ ಭೇದವ ಮರೆಸುವ ಆದೇಶಗಳೆ ಸ್ಫೂರ್ತಿಯ ಸಂಚಲನ ಸಾಧನೆ ತೋರಿ ಮಾಡಿದೆಯಂದು ಸಂತರ ಸಮ್ಮಿಲನ ಸಾಧಕ ಪುರುಷನೆ ಯುಗ ದ್ರಷ್ಟಾರನೆ ಗೈವೆವು ಶತನಮನ || ಪ || ಕೇಶವ ನೆಟ್ಟಿಹ ವೃಕ್ಷದ ಪಾಲನೆ ಪೋಷಣೆ ನೀ ಗೈದೆ ಕ್ಲೇಶವನೆಣಿಸದೆ ಸಂಘದ ಕಾರ್ಯಕ್ಕೆ ರಭಸವ ನೀ ತಂದೆ ಶೋಷಿತ ಜನತೆಗೆ ಪ್ರೀತಿಯ ಸುಧೆಯನು ಅನುದಿನ ನೀನೆರೆದೆ ಆಸರೆ ನೀಡುತ ವನವಾಸಿಗಳ ಬಾಳಿಗೆ ಬೆಳಕಾದೆ || 1 || ಅಮ್ಮನ ಮರೆಯುವ ನಮ್ಮಯ ತರುಣರ […]
ಬೆಳಕಾಗಿ ನೀ ಬಂದೆ ಧ್ಯೇಯದಾ ದಿಶೆ ತಂದೆ ನಿನ್ನ ಉಜ್ವಲ ಛಲಕೆ ಸಾಧನೆಯ ಹಿರಿಮೆ ಮಾಧವನೆ ನಿನ್ನೊಲುಮೆ ಪ್ರೇರಣೆಯ ಚಿಲುಮೆ || ಪ || ಜಾತಿ ಭೇದವ ಮರೆತು ಸಕಲ ಜನರೊಳು ಬೆರೆತು ಧ್ಯೇಯ ಪಥದೊಳು ನಡೆವ ಕಾಯಕದ ಕರೆಯಿತ್ತು ನಿನ್ನೊಳಿರೆ ಎನಿತೆನಿತೋ ಕಾರ್ಯಸೂಚಿಯ ಕುಲುಮೆ ಮಾಧವನೆ ನಿನ್ನೊಲುಮೆ ಪ್ರೇರಣೆಯ ಚಿಲುಮೆ || 1 || ಮಾತಿನಂತೆಯೆ ಕೃತಿಯು ಸರಳತೆಯ ನಡೆನುಡಿಯು ಅಂತರಾಳವ ಹೊಕ್ಕು ಮಾರ್ದನಿಪ ಮೃದು ನುಡಿಯು ನಾಡಸೇವೆಗೆ ಎರೆದೆ ನಿನ್ನ ತಪಸಿನ ಮಹಿಮೆ ಮಾಧವನೆ […]
ಸವೆಸುತ ಬಾಳ ರಾಷ್ಟ್ರೋನ್ನತಿಗೆ ಧ್ಯೇಯದ ಕಣಕಣವಾಗಿ ಸರಿಸುತ ದೂರ ಕಾರ್ಗತ್ತಲನು ಬೆಳಗುವ ಹೊಂಬೆಳಕಾಗಿ || ಪ || ಕವಿದಿಹ ಮೌಢ್ಯದ ಕಾರ್ಮೋಡವನು ಕರಗಿಸಿ ಎಳೆಎಳೆಯಾಗಿ ಬೆಳೆಸುತ ಮುಂದಿನ ಉಜ್ವಲ ಸಿರಿಯನು ಎಲೆಮರೆಯ ಕಾಯಾಗಿ ಸಂಸ್ಕಾರದ ತಂಪೆಲರಾಗಿ || 1 || ಸಾತ್ವಿಕ ಪಥದಲಿ ಆತ್ಮೀಯತೆಯನು ಸಹನೆಯ ಸೂತ್ರದಿ ಹೆಣೆದು ತಾತ್ವಿಕ ಬದುಕಲಿ ಅಕರ್ಷಣೆಗಳ ಪಾಶಗಳೆಲ್ಲವ ಕಡಿದು ಸರಳತೆಗೆ ಕದ ತೆರೆದು || 2 || ರಾಷ್ಟ್ರದ ವೈಭವ ಸಾಧನೆಗಾಗಿ ಬೆವರಿನ ಹನಿಹನಿ ಸುರಿದು ಭಾರತ ಭೂಮಿಯ ಕೀರ್ತಿ […]
ಜಾಗೃತಗೊಳ್ಳಲಿ ಎಲ್ಲೆಡೆಯೂ ನವಶಕ್ತಿಯ ಸ್ಫುರಣ ಜ್ವಲಿಸಲಿ ನಾಡಿನ ಪ್ರತಿಕಡೆಯೂ ತಾರುಣ್ಯದ ಕಿರಣ ಸಜ್ಜನ ಶಕ್ತಿಯ ಜಾಗರಣ……. ದುರ್ಜನ ಶಕ್ತಿಯ ಸಂಹರಣ || ಪ || ಪ್ರತಿ ಎದೆಯಾಳದಿ ಸ್ಫುಟಗೊಳಲಿ ಧ್ಯೇಯದ ಪುನರವತಾರ ಪ್ರತಿಧ್ವನಿ ಮಾರ್ದನಿಗೊಳುತಿರಲಿ ತಾಯ್ನಾಡಿಗೆ ಜಯಕಾರ ಒಂದೇ ನಾಡಿನ ಒಂದೇ ತಾಯಿಯ ಸುತರೆಮ್ಮಯ ಮಮಕಾರ || 1 || ಹದಿಹರೆಯದ ನವ ಹುರುಪಿರಲಿ ಮುನ್ನುಗ್ಗುವ ಛಲವಿರಲಿ ಅನುದಿನ ಸ್ಫೂರ್ತಿಯ ಸೆಲೆಯಿರಲಿ ಹೊಸತನದಾ ಸಾಧನೆಯಿರಲಿ ನವ ಉತ್ಸಾಹದ ನವ ಉನ್ಮೇಷದ ಯುವತನವೇಳಲಿ ಮನಗಳಲಿ || 2 || […]
ಹೆತ್ತ ಒಡಲಿನ ಹತ್ತು ಹೈಕಳು ಮುಷ್ಟಿಕೈಗಳ ತೆರದಿ ಒಟ್ಟುಗೂಡುತ ಕಟ್ಟಲು ಬನ್ನಿ ಸ್ವಾಭಿಮಾನವ ಭರದಿ ಚಲಿಸಲಿ ನಮ್ಮಯ ನಡಿಗೆ……….. ಗ್ರಾಮ ವಿಕಾಸದ ಕಡೆಗೆ || ಪ || ನಾಡಿನ ನಡುವಿನ ಕಟ್ಟೆಯ ಮ್ಯಾಗೆ ಕುಳಿತಿರುವಾ ಯಜಮಾನ ನೋವನು ಉಂಡಿಹ ಊರಿನ ಮಂದಿಗೆ ಕೊಡುವನು ನ್ಯಾಯ ತೀರ್ಮಾನ ಹೊಲದಲಿ ಗಳಿಸಿದ ಕೂಳನು ಹಂಚುವ ಒಲವಿನ ಪರಿ ನೋಡೋಣ || 1 || ಬೆಳಗಾಗೆದ್ದು ಮಡಿಯಲಿ ಮಿಂದು ದ್ಯಾವರ ಪೂಜೆಯ ಗೈದು ಮನೆಯನು ಸಾರಿಸಿ ಆಕಳ ಪೂಜಿಸಿ ಹೊಲಗದ್ದೆಗಳಲಿ ದುಡಿದು […]
ಹೃದಯದ ಕಣಕಣ ಮಾರ್ದನಿಗೊಳುತಲಿ ಗೈದಿದೆ ವಿಜಯದ ಝೇಂಕಾರ ಭಾರತಮಾತೆಗೆ ಜಯಕಾರ | ಭಾರತಮಾತೆಗೆ ಜಯಕಾರ || ಪ || ವಿಶ್ವದ ದೃಷ್ಟಿಯ ಸೃಷ್ಟಿಯಗೈದ ಉಜ್ವಲ ಸಂಸ್ಕೃತಿ ಹಿಂದುತ್ವ ವಸುಧೆಯ ಮಕ್ಕಳು ಎಲ್ಲರೂ ಒಂದೇ ಎನ್ನುತ ಸಾರುತ ಬಂಧುತ್ವ ಶತಶತಮಾನಕೂ ನಿತ್ಯ ಸನಾತನ ಭಾರತ ಭೂಮಿಯ ಆದರ್ಶ || 1 || ಉರಿದು ವಿನಾಶದ ಹಾದಿಯ ಹಿಡಿದಿದೆ ವಿಶ್ವವ ಕೆಡಿಸುವ ಪರತತ್ವ ಉಳಿಸುವುದೊಂದೇ ಮಾನವಕುಲವನು ಹಿಂದೂ ಧರ್ಮದ ಸಾರಥ್ಯ ಋಷಿಮುನಿ ಪುಂಗವ ಜೀವನ ದೃಷ್ಟಿಯೇ ಮನುಕುಲದುಳಿವಿಗೆ ಆಧಾರ || […]