ಭರತ ಮಾತೆಯ ಚರಣ ಸೇವೆಗೆ
ಬನ್ನಿ ಕುಸುಮಗಳಾಗುತ
ಧನ್ಯಭಾವದಿ ನಿತ್ಯ ನಮಿಸಲು
ಗೊಳಿಸಿ ಜನಮನ ಜಾಗೃತ
ಸವೆಸಿ ತನುಮನ ಅವಿರತ || ಪ ||
ಮೇರು ಶಿಖರವ ಏರಬಯಸಿರಿ
ಬಾಳ ಬವಣೆಯ ಮರೆಯುತ
ವಿಜಯದುಂದುಭಿ ಘೋಷ ಮೊಳಗಿಸಿ
ಕೀಳರಿಮೆ ಬದಿಗೊತ್ತುತ
ಗೊಳಿಸಿ ಜನಮನ ಜಾಗೃತ
ಸವೆಸಿ ತನುಮನ ಅವಿರತ || 1 ||
ಒಂದೆ ಅನ್ನವ ಉಣುವ ನಮ್ಮಲಿ
ತುಳಿತ ತರತಮವೇತಕೆ
ಎಲ್ಲ ಭಿನ್ನತೆ ಮರೆತು ಬೆರೆಯಲಿ
ಹಿಂದು ಭಾವದ ಐಕ್ಯತೆ
ಗೊಳಿಸಿ ಜನಮನ ಜಾಗೃತ
ಸವೆಸಿ ತನುಮನ ಅವಿರತ || 2 ||
ಸತ್ಯವೆಂದಿಗು ಮಿಥ್ಯವಾಗದು
ನಿತ್ಯ ಸಭ್ಯತೆ ಮೆರೆದರೆ
ಗೊತ್ತು ಗುರಿಯದು ತಲುಪಬಲ್ಲದು
ಸಂಘ ಮಂತ್ರವು ಜತೆಗಿರೆ
ಗೊಳಿಸಿ ಜನಮನ ಜಾಗೃತ
ಸವೆಸಿ ತನುಮನ ಅವಿರತ || 3 ||