ಮಾಧವ ನಿನ್ನಯ ಆದರ್ಶಗಳೆ

ಮಾಧವ ನಿನ್ನಯ ಆದರ್ಶಗಳೆ ಬಾಳಿಗೆ ಸೋಪಾನ
ಭೇದವ ಮರೆಸುವ ಆದೇಶಗಳೆ ಸ್ಫೂರ್ತಿಯ ಸಂಚಲನ
ಸಾಧನೆ ತೋರಿ ಮಾಡಿದೆಯಂದು ಸಂತರ ಸಮ್ಮಿಲನ
ಸಾಧಕ ಪುರುಷನೆ ಯುಗ ದ್ರಷ್ಟಾರನೆ ಗೈವೆವು ಶತನಮನ || ಪ ||

ಕೇಶವ ನೆಟ್ಟಿಹ ವೃಕ್ಷದ ಪಾಲನೆ ಪೋಷಣೆ ನೀ ಗೈದೆ
ಕ್ಲೇಶವನೆಣಿಸದೆ ಸಂಘದ ಕಾರ್ಯಕ್ಕೆ ರಭಸವ ನೀ ತಂದೆ
ಶೋಷಿತ ಜನತೆಗೆ ಪ್ರೀತಿಯ ಸುಧೆಯನು
ಅನುದಿನ ನೀನೆರೆದೆ
ಆಸರೆ ನೀಡುತ ವನವಾಸಿಗಳ ಬಾಳಿಗೆ ಬೆಳಕಾದೆ || 1 ||

ಅಮ್ಮನ ಮರೆಯುವ ನಮ್ಮಯ ತರುಣರ
ಮೌಢ್ಯವ ಕಿತ್ತೊಗೆದು
ಒಮ್ಮನದಿಂದಲಿ ವಿಶ್ವದ ಹಿಂದುಗಳೆಲ್ಲರ ಬರಸೆಳೆದು
ಶ್ರಮಿಕರ ಕೃಷಿಕರ ವಿದ್ಯಾರ್ಥಿಗಳ ಸಂಘದ ಬಳಿಕರೆದು
ಮರ್ಮವನರುಹಿದೆ ಸಂಘದ ಕಾರ್ಯದ ಹಂದರ
ಹೆಣೆದ್ಹೆಣೆದು || 2 ||

ವ್ಯಕ್ತಿಯ ಹೃದಯದಿ ದೃಢ ವಿಶ್ವಾಸದ ಚಿತ್ರವ ಚಿತ್ರಿಸುತ
ಚಿತ್ತದಿ ಅರಳಿದ ಸೇವೆಯ ಪುಷ್ಪವ ನಾಡಿಗೆ ಅರ್ಪಿಸುತ
ಶಕ್ತವಿಚಾರದ ಸಾತ್ವಿಕ ತಾತ್ವಿಕ ಬಾಳಲಿ ಪಯಣಿಸುತ
ಶಕ್ತಿಯ ತುಂಬಿದೆ ಹಿಂದುತ್ವದ
ನಿಜ ಹಿರಿಮೆಯ ಬಿಂಬಿಸುತ || 3 ||

Leave a Reply

Your email address will not be published. Required fields are marked *

*

code