ತಾಯ ಕರೆಗೆ ಓಗೊಡುತ ಬನ್ನಿ

ತಾಯ ಕರೆಗೆ ಓಗೊಡುತ ಬನ್ನಿ ಸಂಘಕಾರ್ಯಕೆ
ತಡವರಿಸದೆ, ಮರುನುಡಿಯದೆ ಸವೆಸಿ ಬಾಳ ರಾಷ್ಟ್ರಕೆ || ಪ ||

ವಿಕೃತಿಯಾ ಇತಿಹಾಸ ಬಿಸುಟು ದೂರದೂರಕೆ
ಗೆಲುವ ಛಲವ ಮನದೊಳಿರಿಸಿ ಸಾಗಿ ಮುಂದೆ ಮುಂದಕೆ
ಕೆಡುಕನಳಿಸಿ ಒಳಿತನುಳಿಸಿ ಸ್ವಾರ್ಥ ದೂರಗೈಯುವಾ
ಧ್ಯೇಯವೊಂದೇ ಕಣ್ಣಮುಂದೆ ರಾಷ್ಟ್ರದ ಉತ್ಥಾನಕೆ || 1 ||

ಗೀತೆಯಾ ಸಾರವಿಹುದು ನಮ್ಮ ಬಾಳ ಹಾದಿಗೆ
ಅಧ್ಯಾತ್ಮದ ಮೇರುಶಕ್ತಿ ಸ್ಫೂರ್ತಿ ನಮ್ಮ ನಾಳೆಗೆ
ರಾಷ್ಟ್ರರಥವ ಮುಂದಕ್ಕೆಳೆವ ಧ್ಯೇಯ ಕಣ್ಣ ಮುಂದಿರೆ
ಆಕರ್ಷಣೆ ಮೋಹ ಮಾಯೆ ಕ್ಷಣಿಕ ನಮ್ಮ ಬಾಳಿಗೆ || 2 ||

ಸಮರಸತೆಯ ಸುಪ್ರಭಾತ ಸ್ತುತಿಸುತ ಮುಂಜಾವಿಗೆ
ಸಂಸ್ಕೃತಿಯಾ ಮಧುರ ಕಂಪು ಸೂಸುತ ಈ ನಾಡಿಗೆ
ಹೀನ-ದೀನ, ಬಡವ-ಧನಿಕ ಎಂಬ ಭೇದ ತೋರದೆ
ಒಂದೆ ತಾಯ ಮಕ್ಕಳೆಲ್ಲಾ ಬನ್ನಿ ನಾಡಸೇವೆಗೆ || 3 ||

Leave a Reply

Your email address will not be published. Required fields are marked *

*

code