ಸವೆಸುತ ಬಾಳ ರಾಷ್ಟ್ರೋನ್ನತಿಗೆ

ಸವೆಸುತ ಬಾಳ ರಾಷ್ಟ್ರೋನ್ನತಿಗೆ
ಧ್ಯೇಯದ ಕಣಕಣವಾಗಿ
ಸರಿಸುತ ದೂರ ಕಾರ್ಗತ್ತಲನು
ಬೆಳಗುವ ಹೊಂಬೆಳಕಾಗಿ || ಪ ||

ಕವಿದಿಹ ಮೌಢ್ಯದ ಕಾರ್ಮೋಡವನು
ಕರಗಿಸಿ ಎಳೆಎಳೆಯಾಗಿ
ಬೆಳೆಸುತ ಮುಂದಿನ ಉಜ್ವಲ ಸಿರಿಯನು
ಎಲೆಮರೆಯ ಕಾಯಾಗಿ
ಸಂಸ್ಕಾರದ ತಂಪೆಲರಾಗಿ || 1 ||

ಸಾತ್ವಿಕ ಪಥದಲಿ ಆತ್ಮೀಯತೆಯನು
ಸಹನೆಯ ಸೂತ್ರದಿ ಹೆಣೆದು
ತಾತ್ವಿಕ ಬದುಕಲಿ ಅಕರ್ಷಣೆಗಳ
ಪಾಶಗಳೆಲ್ಲವ ಕಡಿದು
ಸರಳತೆಗೆ ಕದ ತೆರೆದು || 2 ||

ರಾಷ್ಟ್ರದ ವೈಭವ ಸಾಧನೆಗಾಗಿ
ಬೆವರಿನ ಹನಿಹನಿ ಸುರಿದು
ಭಾರತ ಭೂಮಿಯ ಕೀರ್ತಿ ಪತಾಕೆಯ
ಬಾಂದಳದೆತ್ತರ ಹಿಡಿದು
ವಿಜಯದ ಸಂಭ್ರಮ ಮೆರೆದು || 3 ||

Leave a Reply

Your email address will not be published. Required fields are marked *

*

code