ಹಿಂದು ರಾಷ್ಟ್ರ ರಕ್ಷಿಸಲು ಖಡ್ಗ ಹಿಡಿಯೋ ಧೀರ ಶತ್ರು ಇರಲಿ ಮಿತ್ರ ಬರಲಿ ಸಾಗು ಮುಂದೆ ವೀರ || ಪ || ಅನಾದಿ ಕಾಲದಿಂದ ಬಂದ ಹಿಂದು ಸಂಸ್ಕೃತಿ ಬುನಾದಿಯಿಂದ ಎತ್ತಿಹಿಡಿದು ಧರ್ಮದಾ ವೃತಿ ಅಧರ್ಮ ಮಾರ್ಗದಲ್ಲಿ ನಡೆದ ವೀರರವನತಿ ಸ್ವಶಕ್ತಿ ಇಳಿದ ರಾಷ್ಟ್ರವೆಲ್ಲ ಪರರ ಆಹುತಿ || 1 || ರಾಷ್ಟ್ರವನ್ನು ಕಬಳಿಸುವಾ ದುಷ್ಟ ದುರಾಕ್ರಮಕರು ಮೂಲೆ ಮೂಲೆಗಳಿಗು ಹರಡಿ ವಂಚಿಸುತಲಿ ಇರುವರು ದರ್ಪದಿಂದ ವೀರತ್ವದ ನಮ್ಮ ರಾಷ್ಟ್ರ ಸುಡುವರು ಇಂಥ ಹೀನ ಜನರ ಹೃದಯ […]
ರಾಷ್ಟ್ರಸೇವಕ ಬಾರ ಹಿಂದು ವೀರನೆ ಬಾರ ನನ್ನ ಕಂದನೆ ಕೇಳ, ಎನುವಳಮ್ಮ || ಪ || ಅಂಗ ಭಂಗವದಾಗೆ ಮರಳಿ ಜೋಡಿಸಬಹುದು ವಂಗಭಂಗವದಾಗೆ ಬಾರದೇಕೆ? ಸಿಂಧು ಗಾಂಧಾರ ಬ್ರಹ್ಮಾದಿ ಮುರಿದಂಗಗಳ ಕಸಿಯ ಮಾಡಲು ಬನ್ನಿ ಎನ್ನ ಮೈಯ್ಗೆ || 1 || ಸೈನ್ಯವಾಗಿರೆ ಹಿಂದು ಮನೆಮನೆಯೆ ತಾನಿಂದು ಸ್ತನ್ಯವಾಗಿರೆ ರಾಷ್ಟ್ರಭಕ್ತಿ ನಿಮಗೆ ದೈನ್ಯ ದುಃಖ ಹತಾಶೆಯ ಕಾಲ ಹಿಂದಾಗಿ ಮಾನ್ಯತೆಯ ಪಡೆಯೆನೇ ಜಗದೆ ನಾನು? || 2 || ಆಗು ಗೆಳೆಯಗೆ ಮಿತ್ರ ಶಕ್ತಿ ಹಿಡಿದವರ ಕುತ್ತು […]
ಇದೋ ಶ್ರದ್ಧಾಂಜಲಿ ರಾಷ್ಟ್ರಪುರುಷ – ಶತ – ಕೋಟಿ ಹೃದಯಗಳ ಸಮವರಳುತಿವೆ | ಈ ದಿನ ನಿಮ್ಮಯ ಪೂಜಾ ಕಾರ್ಯಕೆ ಸೇತು ಹಿಮಾಚಲ ಸಂಗಮಿಸುತಿವೆ || ಪ || ಮಾತೆಯ ಪದ ಪದ್ಮಾಂಚಲದಲಿ ನೀ ಅಮೂಲ್ಯಕಾಣಿಕೆ ಅರ್ಪಿಸಿದೆ | ಅಕ್ಷಯ ಚಿರ ಸತ್ಯವ ನುಡಿದೆ ಹಿಂದುತ್ವಕೆ ಅಮೃತವ ಉಣ್ಣಿಸಿದೆ | ತವ ಸಂಸ್ಕಾರವು ಸೃಜಿಸಿದ ತನುಮನ ಅಭೇದ್ಯ ಕೋಟೆಗಳೋ ಎನಿಸುತಿವೆ || 1 || ನಡೆದೇ ಸದಾ ಕಠೋರ ನಿಯಮದಿ ಲೋಕಪ್ರಸಿದ್ಧಿ ಪರಾಙ್ಮುಖ ಪಥದಿ ನಿಶ್ಚಲ ನಿಲುವಿನ […]
ಸಂಘದಂಗಳದಲ್ಲಿ ನಡೆದಿದೆ ಧ್ಯೇಯ ಸಾಧನೆ ಅವಿರತ ಹಸಿವು ಕಾಣದು ತೃಷೆಯು ಕಾಡದು ಅಸುವು ರಾಷ್ಟ್ರ ಸಮರ್ಪಿತ || ಪ || ಕಸುವು ಕುಂದುವ ಮೊದಲೆ ಮೋಸದ ಮುಸುಕ ಸರಿಸುವ ಹಂಬಲ ವಸುಧೆಗೊದಗಿದ ನೋವ ನೀಗಲು ನಮಗೆ ದೇವರೆ ಬೆಂಬಲ || 1 || ಶುದ್ಧ ಸಾತ್ವಿಕ ತಪದ ಜತೆಗಿದೆ ಶಸ್ತ್ರ ಶಾಸ್ತ್ರ ಪ್ರಬುದ್ಧತೆ ಯುದ್ಧ ಸಿದ್ಧತೆ ಭರದಿ ನಡೆದಿದೆ ಬುದ್ಧವಚನಕು ಬದ್ಧತೆ || 2 || ಸದ್ದು ಗದ್ದಲವಿರದೆ ಸಭ್ಯತೆ ಹೃದಯ ಗದ್ದುಗೆ ಏರಿದೆ ವಿದ್ಯೆ ಬುದ್ಧಿಗೆ […]
ರಾಷ್ಟ್ರದೇವಗೆ ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆ ಮೃತ್ಯು ಭೃತ್ಯನು ಹಿಂದುಭೂಮಿಗೆ ಮರಣ ಕಾದಿದೆ ಸಾವಿಗೆ || ಪ || ಕೋಟಿಕೋಟಿಯ ತರುಣ ಧಮನಿಯು ರಾಷ್ಟ್ರಪ್ರೇಮದ ಸ್ರೋತದಿ ನಾಳದಾಳದ ನೆತ್ತರೊರೆಯುವ ದೇಶ ಧರ್ಮದ ಗಾನದಿ ಹೃದಯಹೃದಯವು ದುರ್ಗವಾಗಿದೆ ಅರಿಯನಳಿಸಲು ನಿಂತಿದೆ ಹಿಂದಿನಂತೆಯೆ ಹಿಂದು ಚೇತನವಿಂದು ಜಾಗೃತವಾಗಿದೆ || 1 || ಕಾಲಕಾಲಕೆ ಕ್ರಾಂತಿಶೂರರ ಕಣಕೆ ಕಳುಹುತ ಬೆದರದೆ ಹಿಂದುದೇಶದ ಯುವಜನಾಂಗದ ಧ್ಯೇಯಬಾವುಟವೇರಿದೆ ಹಗೆಯ ತುಳಿಯುತ ಗಗನದೆತ್ತರ ಬೆಳೆದು ನಿಲ್ಲುವ ಪೌರುಷ ಪ್ರಕಟವಾಗಿದೆ ರಾಷ್ಟ್ರಗೌರವ ಉಳಿಸಿ […]