ಪುಣ್ಯಪಾವನ ಧ್ಯೇಯ ಸಾಧಿಸಿ

ಪುಣ್ಯಪಾವನ ಧ್ಯೇಯ ಸಾಧಿಸಿ ಧನ್ಯವಾಗಲಿ ನಮ್ಮ ಜೀವನ || ಪ || ಮಾತೆ ಸೀತೆಯ, ರಾಮಚಂದ್ರನ ಪಾವನಾಂಘ್ರಿಯ ಸ್ಪರ್ಶ ಹೊಂದಿದ ತಾಯೆ ನಿನ್ನಯ ಧೂಳಿನಿಂದಲಿ ಸ್ವಚ್ಛಗೊಳ್ಳಲಿ ಮಲಿನ ತನುಮನ || 1 || ರಜಪುತಾನದ ಚಿತೆಗಳಿಂದಲಿ ಧಗಧಗಿಸಿ ಉರಿದಗ್ನಿಜ್ವಾಲೆಯ ಕಿಡಿಯು ಬೆಳಗಲು ಅಂತರಂಗವ ಅಳಿದು ಕಳೆವುದು ದೌಷ್ಟ್ಯಭೀಷಣ || 2 || ತುಚ್ಛ ಆಸೆಯು ಮನದೊಳಿಲ್ಲವು ತೃಣಸಮಾನವು ಒಡವೆ ವಸ್ತ್ರವು ಶುಭದ ವಸನವೆ ನಮ್ಮ ವೇಷವು ಶೀಲ ನಮ್ಮಯ ದಿವ್ಯ ಭೂಷಣ || 3 || ಮಾತೃಭೂಮಿಯ […]

Read More

ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ

ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವಾ ಧ್ಯೇಯ ಮಹಾಜಲಧಿಯೆಡೆಗೆ ಸಲಿಲವಾಗಿ ಹರಿಯುವಾ ಲೋಕಹಿತದ ಕಾಯಕ ನಾಡಿಗಭಯದಾಯಕ ವ್ಯಕ್ತಿವ್ಯಕ್ತಿಯಾಗಲಿಂದು ನೈಜ ರಾಷ್ಟ್ರಸೇವಕ || ಪ || ಉಚ್ಚನೀಚ ಭೇದವ ಅಳಿಸಿ ದೂರಗೊಳಿಸುವಾ ರೊಚ್ಚು ರೋಷ ನೀಗುತಾ ಬಂಧು ಭಾವ ಬೆಳೆಸುವಾ ಹಚ್ಚಿ ಜ್ಞಾನದೀವಿಗೆ ಸುತ್ತ ಬೆಳಕ ಬೀರುವಾ ಕೆಚ್ಚಿನಿಂದ ಮುಂದೆ ಸಾಗಿ ಭರದಿ ಗುರಿಯ ಸೇರುವಾ || 1 || ಎಲೆಯ ಮರೆಯೊಳರಳಿ ನಗುವ ಸುಮನರಾಶಿಯಂದದಿ ಕಡಲ ಒಡಲೊಳುಕ್ಕಿ ಮೊರೆವ ಕೋಟಿ ಅಲೆಗಳಂದದಿ ವಿಮುಖರಾಗಿ ಖ್ಯಾತಿಗೆ ಪ್ರಚಾರಕೆ ಪ್ರಶಂಸೆಗೆ ಸಹಜಭಾವದಿಂದ […]

Read More

ಸಂಘಜನಕ ಕೇಶವಾ ಜನ್ಮತಳೆದು ಬಾರೋ

ಸಂಘಜನಕ ಕೇಶವಾ ಜನ್ಮತಳೆದು ಬಾರೋ ಧ್ಯೇಯಮಾರ್ಗದಲ್ಲಿ ನಮಗೆ ದಾರಿ ತೋರೋ || ಪ || ಕೆಸರ ಒಡಲಿನಿಂದ ಕಮಲ ಅರಳಿದಂತೆ ಮರಳುಗಾಡಿನಲ್ಲಿ ಹಸಿರು ಮೂಡಿದಂತೆ ನಿಶೆಯನಳಿಸಿ ಉಷೆಯು ಉದಿಸಿದಂತೆ ಸಂಘ ಜನಿಸಿತು ಬೇಗೆಯಿಂದ ಬೆಂದ ನೆಲಕೆ ಮುದದಿ ತಂಪನುಣಿಸಿತು || 1 || ನಾಡಸ್ವಾಭಿಮಾನವ ಪ್ರಶ್ನಿಸಿರಲು ದೈನ್ಯತೆ ಬಾಡಿಹೋದ ಮನಗಳ ಕಾಡುತಿರಲು ಶೂನ್ಯತೆ ಅರುಣನಂತೆ ತರುಣಜನಕೆ ತೋರಿ ಬಾಳ ಧನ್ಯತೆ ಭರತಭೂಮಿಗಭಯವಿತ್ತೆ ಸಾರಿ ಶೌರ್ಯ ಸಂಹಿತೆ || 2 || ವಿಸ್ಮೃತಿಯ ವಿಷವನು ಸ್ವಾರ್ಥದಾಮಿಷವನು ಭ್ರಷ್ಟತೆಯ ಕಸವನು […]

Read More

ಜ್ಞಾನದಾತನೆ ಚಿರಪುನೀತನೆ

ಜ್ಞಾನದಾತನೆ ಚಿರಪುನೀತನೆ ಧ್ಯೇಯ ದೇವನೆ ವಂದನೆ ಜೀವನಕೆ ಸಾರ್ಥಕತೆ ಕರುಣಿಸು ಗುರಿಯ ಸೇರಲಿ ಸಾಧನೆ || ಪ || ಕಾಯದಾ ಗುಡಿಯಲ್ಲಿ ನಿನ್ನಯ ದಿವ್ಯಮೂರ್ತಿಯನಿರಿಸಿದೆ ತಾಯಿ ಭೂಮಿಯ ಸೇವೆಗೈಯುವ ಶಪಥವನು ಸ್ವೀಕರಿಸಿದೆ ಮಾಯಗೊಳಿಸಿದೆ ಮನದ ಭ್ರಾಂತಿಯ ಭ್ರಮೆಯ ಕಂಗಳ ತೆರೆಸಿದೆ || 1 || ಕದನಕಂಜದ ದಮನಕಳುಕದ ಭರತಭೂಮಿಯ ಪೌರುಷ ಹೃದಯಸದನದಿ ತುಂಬಿ ಬೆಳೆಸಿದೆ ಶೌರ್ಯಛಲಬಲ ಸಾಹಸ ಉದಯಭಾಸ್ಕರನಂತೆ ಬೆಳಗಿದೆ ತಿಮಿರಮಯ ಮನದಾಗಸ || 2 || ಕೀರ್ತಿಪಥದಲಿ ಮುಂದೆ ನಡೆಯುವ ಸ್ಫೂರ್ತಿಯನು ನೀ ನೀಡಿದೆ ಧೂರ್ತ […]

Read More

ಧ್ಯೇಯನಾದ ನಿನಾದವಾಗಿದೆ

ಧ್ಯೇಯನಾದ ನಿನಾದವಾಗಿದೆ ತರುಣ ಧಮನಿ ಧಮನಿಗಳಲಿ ಅಮೃತತ್ವದ ಅಮರ ಚಿಂತನೆ ಸ್ಫುರಿತಗೊಂಡಿದೆ ಕಣ್ಣಲಿ               || ಪ || ಮಾತೃ ಮಣ್ಣಿನ ಯಜ್ಞ ಜ್ವಾಲೆಗೆ | ಸ್ವಾರ್ಥ ದಹಿಸಿದೆ ಸ್ಫೂರ್ತಿ ಮೂಡಿದೆ ಮೋಹ ದೇಹಗಳೊಟ್ಟಿ ಕಟ್ಟಿಗೆ | ಭಸ್ಮವಾಗಿದೆ ಭುಮಿಯ ಬೆಸುಗೆಗೆ      || 1 || ಸವಾಲು ಸಾಸಿರ ಸಾಲುಗಟ್ಟಲಿ | ಕೋಟಿ ಕಂಠಗಳೆದ್ದು ನಿಂತಿವೆ ಕಷ್ಟ ಬೆಟ್ಟಗಳೆಲ್ಲ ಸಹಿಸುವ | ಮೊನಚು ಮೂಡಿದೆ ಎದೆಯಲಿ    […]

Read More

ಧ್ಯೇಯ ಮಹಾದೇವನೆ ವಂದನೆ

ಧ್ಯೇಯ ಮಹಾದೇವನೆ ವಂದನೆ ನೀ ಹರಸುತಲಿರು ಸ್ವೀಕರಿಸುತಲಿರು ವಿಕಸಿತ ಜೀವನವಿರಿಸುತ ತಲೆ ಬಾಗುವೆನು || ಪ || ನಿನ್ನ ಹಿಮಾಲಯದುನ್ನತ ನೆಲೆಗೆ, ಹಬ್ಬಲು ಹೊರಟಿಹ ಬಾಳಿನ ಲತೆಗೆ ಎಲೆಗೊಂದೊಂದರಳಿಸು ಗುಣ ಮಲ್ಲಿಗೆ, ನಾ ಪೂರ್ಣ ಸಮರ್ಪಿತನು || 1 || ಕರಗಿಸು ಮೋಹದ ಮಂಜಿನ ಮಾಯೆ, ಕಳಚಿ ಬಿಡುವೆ ಭಯಭೀತಿಯ ಛಾಯೆ ವಾಮನನು ತ್ರಿವಿಕ್ರಮನಾಗೇಳುವೆ, ಅಳೆಯುವೆ ನೆಲಗಗನವನು || 2 || ಮೆರೆದಾಡುವ ಜನ ಕಂಟಕ ಬಲಿಯ, ಮದವೇರಿದ ಅಧಿಕಾರದ ತಲೆಯ ಮೆಟ್ಟಲು ಬಿಡದರಸುವೆ ಪದವೆತ್ತುತ, ಕಾಣಿಸೆ […]

Read More

ಧ್ಯೇಯಧಾರೀ ಸಾಗು ಸಂತತ

ಧ್ಯೇಯಧಾರೀ ಸಾಗು ಸಂತತ ತ್ಯಾಗ ಸೇವಾ ಕಾರ್ಯಪಥದಿ || ಪ || ವ್ಯಕ್ತಿಗತ ಯಶ ಸೌಖ್ಯ ಶ್ರೇಷ್ಠತೆ ಪಡೆವ ಬಹು ಮನದಾಸೆ ತೊರೆದು ಭಕ್ತಿ ಭಾವನೆ ತುಂಬಿ ಮನದಲಿ ರಾಷ್ಟ್ರಪುರುಷನ ಮೂರ್ತಿ ಕೊರೆದು ಸೂಕ್ತ ಸಾದರ ಗಂಧ ಕೃತಿಸುಮ ಶೀಲ ಕತ್ತುರಿ ಪಾದ ಕೆರೆದು ಶಕ್ತಿ ದೀಪವನುರಿಸಿ ಹೃದಯದ ನಿಷ್ಠೆ ಪ್ರಭೆಯಾರತಿಯ ಗೈದು ಮೌಕ್ತಿಕದ ಸರ ಸೇವೆ ಸಲಿಸುತ ಪೂಜಿಸುತ ನಡೆ ಧ್ಯೇಯಪಥದಿ || 1 || ವೈರಭಾವನೆ ಮನದಿ ಸುಳಿಯದೆ ಸ್ವಾಭಿಮಾನವ ತುಂಬಿ ಉರದಿ ಅರ […]

Read More

ಧ್ಯೇಯ ತಪಸಿನ ಪುಣ್ಯ ಫಲವಿದು

ಧ್ಯೇಯ ತಪಸಿನ ಪುಣ್ಯ ಫಲವಿದು ಹಿಂದು ಐಕ್ಯದ ಮಂತ್ರವು ರಾಷ್ಟ್ರಪುರುಷನ ಚರಣಸೇವೆಗೆ ಅರ್ಪಿತವು ಈ ಕಮಲವು || ಪ || ಕ್ಞಾತ್ರತೇಜವ ಹರಿಸಿ ನೀಡುವ ಜಡತೆಗಿಂದೆ ತರ್ಪಣ ಹಿಂದು ಹಿಂದುವಿನೊಡಲ ಕಂಪಿಗೆ ನಮ್ಮ ಜೀವನ ಅರ್ಪಣ ಧರ್ಮ ರಾಜ್ಯದ ನವ್ಯ ಸೃಷ್ಟಿಗೆ ಭಗವಾ ಎಮಗೆ ಪ್ರೇರಣೆ ನಮ್ಮ ಹೃದಯಗಳೆಲ್ಲ ಸಿದ್ಧವು ಮಾಡಲಿಂದೆ ಸಮರ್ಪಣ || 1 || ಅರಿಗಳೆದೆಯನು ನಡುಗಿಸಿದೆ ಈ ಸಂಘ ಶಕ್ತಿಯ ತೇಜವು ಹಿಂದು ಶಕ್ತಿಯ ಅಂಗ ನಾವು ಸಾರ್ಥಕವು ಈ ಜೀವವು ಮೇಲುಕೀಳುಗಳೆಲ್ಲಾ […]

Read More

ಪ್ರೇಮ ಸೇ ಹಾಥ ಮೇ

ಪ್ರೇಮ ಸೇ ಹಾಥ ಮೇ ಹಾಥ ಬಾಂಧೇ ಚಲೇ ಧ್ಯೇಯ ಕೇ ಪಂಥ ಸೇ ಸಾಥ ಗಾತೇ ಚಲೇ || ಪ || ಕ್ಯೋಂ ಕರೇ ಆಜ ಹಮ ಸಂಕಟೋ ಕಾ ವಿಚಾರ ಮಾರ್ಗ ಮೇ ದರ್ದ ದುಃಖ ಕೇ ಅಡಂಗೇ ಅಪಾರ ಫೂಲ ಕಾಂಟೋ ಭರಿ ಬಾಡ ಕಾಟೇ ಚಲೇ || 1 || ಸ್ಫೂರ್ತಿ ಪಗ ಪಗ ಪೇ ಹೋತೀ ಚಲೇ ವರ್ಧಮಾನ ಧೂಪ ಛಾಯಾ ಸಮಾನ ಹೋ ಹಮೇ ಭಾಸಮಾನ ಸಂಘಟನ ಗೀತ […]

Read More