ಧ್ಯೇಯ ತಪಸಿನ ಪುಣ್ಯ ಫಲವಿದು

ಧ್ಯೇಯ ತಪಸಿನ ಪುಣ್ಯ ಫಲವಿದು ಹಿಂದು ಐಕ್ಯದ ಮಂತ್ರವು
ರಾಷ್ಟ್ರಪುರುಷನ ಚರಣಸೇವೆಗೆ ಅರ್ಪಿತವು ಈ ಕಮಲವು || ಪ ||

ಕ್ಞಾತ್ರತೇಜವ ಹರಿಸಿ ನೀಡುವ ಜಡತೆಗಿಂದೆ ತರ್ಪಣ
ಹಿಂದು ಹಿಂದುವಿನೊಡಲ ಕಂಪಿಗೆ ನಮ್ಮ ಜೀವನ ಅರ್ಪಣ
ಧರ್ಮ ರಾಜ್ಯದ ನವ್ಯ ಸೃಷ್ಟಿಗೆ ಭಗವಾ ಎಮಗೆ ಪ್ರೇರಣೆ
ನಮ್ಮ ಹೃದಯಗಳೆಲ್ಲ ಸಿದ್ಧವು ಮಾಡಲಿಂದೆ ಸಮರ್ಪಣ || 1 ||

ಅರಿಗಳೆದೆಯನು ನಡುಗಿಸಿದೆ ಈ ಸಂಘ ಶಕ್ತಿಯ ತೇಜವು
ಹಿಂದು ಶಕ್ತಿಯ ಅಂಗ ನಾವು ಸಾರ್ಥಕವು ಈ ಜೀವವು
ಮೇಲುಕೀಳುಗಳೆಲ್ಲಾ ಸರಿಸಿ ಬಂಧು ಬಂಧುವಿನೆದೆಯಲಿ
ಸ್ಪಂದಿಸುವೆ ನಾ ರಾಷ್ಟ್ರಕಾರ್ಯಕೆ ಹಿಂದು ಐಕ್ಯದ ಮಂತ್ರವ || 2 ||

Leave a Reply

Your email address will not be published. Required fields are marked *

*

code