ಭಗವೆಯ ನಾವ್ ಗಗನದಲಿ ಹಾರಿಸುವಾ ಹಿರಿಮೆಯಿಂದ ಮೆರೆಯಿಸುವಾ ಬಲುಮೆಯಿಂದ || ಪ || ಮೇಲೆ ಮೇಲೆ ಗಗನದಲಿ ಹೊಳೆವ ನೀಲ ಮೇಘದಲಿ ಪಟಪಟನೇ ಪುಟಿಸುತಲಿ ನಲಿಯಿಸುವಾ ಕಲಿತನದಿ || 1 || ಹಿರಿತನದ ಹಿರಿಮೆಯಿಂದ ಯೌವನದ ಹೆಮ್ಮೆಯಿಂದ ಬಾಲತನದ ಲೀಲೆಯಿಂದ ಪೂಜಿಸುವಾ ಪ್ರತಿದಿನದಿ || 2 || ಭಾರತದ ಐಸಿರಿಯ ವೀರತೆಯ ಜಯ ಸಿರಿಯ ಕೇಶವನ ಮನಸಿರಿಯ ಮೆರೆಯಿಸುವಾ ಅವಿರತದಿ || 3 ||
ಬೆಳಕು ಒಂದು ಇಳೆಗೆ ಬಂದು ಇರುಳನೆಲ್ಲ ಕಳೆಯಿತು ಧರೆಯ ಕಣದ ಬತ್ತಿ ಉರಿದು ಕೋಟಿ ಹಣತೆ ಬೆಳಗಿತು || ಪ || ಆತ್ಮ ಒಂದು ರೂಪುಗೊಂಡು ಹಿಂದು ಎದೆಯೊಳರಳಿತು ಸಿಂಧು ಬಿಂದು ನೊಂದು ಬೆಂದು ಬಂದು ಮನವ ತಲುಪಿತು ಮಂತ್ರ ಒಂದು ಜನಿಸಿತು, ಸಂಘಶಕ್ತಿ ಉದಿಸಿತು ಕವಿದು ನಿಂತ ದಾಸ್ಯಛಾಯೆ, ಬಿಟ್ಟಿತೋ ತೊಲಗಿತು || 1 || ತತ್ವ ಒಂದು ಸಲಿಲವಾಗಿ ದೇಶವ್ಯಾಪಿ ಹರಿಯಿತು ಹನಿಗಳೆಲ್ಲ ಒಂದುಗೂಡಿ ಹರಿವಿನಲ್ಲಿ ಮೊರೆಯಿತು ಉಕ್ಕಿಹರಿವ ಸೆಳವಿನಲ್ಲಿ ಸೊಕ್ಕಿ ಬೆಳೆದ ಅಸುರಶಕ್ತಿ […]
ಬಾಳ ಹಣತೆ ಜ್ಯೋತಿ ನಗಲಿ ಎರೆವ ಸೇವೆ ತೈಲವ ಶುದ್ಧ ಮಮತೆ ಭಕ್ತಿ ಇರಲಿ ತೊರೆವ ಸ್ವಾರ್ಥ ಮೋಹವ || ಪ || ಕರುಣೆ ಕಡಲ ಒಡಲಿನಲ್ಲಿ ತೊಳೆದು ಬಿಡುವ ಭೇದವ ಸ್ಫೂರ್ತಿ ಗಂಗೆ ಉಕ್ಕಿ ಬರಲಿ ಕೊಚ್ಚಿ ಜಡ ಸ್ವಭಾವವ ಸ್ವಾಭಿಮಾನ ಕವಚದಲ್ಲಿ ಪೊರೆವ ಸತ್ಯ ಧರ್ಮವ ಬಿರಿದು ಬದುಕು ಶ್ರಮಿಸುತಿರಲಿ ಅರಿತು ಸಮಯ ಮೌಲ್ಯವ || 1 || ದೇಹದುಸಿರು ಸ್ಥಿರವದಲ್ಲ ಅಮರ ನಮ್ಮ ಕಾಯಕ ಒಂದುಗೂಡಿ ನಡೆವೆವೆಲ್ಲ ದಾಟಿ ಸಕಲ ಕಂಟಕ ಕೀರ್ತಿ […]
ಬಾ ಬಾ ಸಂಘಸ್ಥಾನದ ಕಡೆಗೆ || ಪ || ಸ್ವಾರ್ಥದ ಸೋಪಾನದ ತುಳಿತುಳಿಯುತ ಬಾಬಾ ಭೂಮಾತೆಯ ಮಡಿಲೆಡೆಗೆ ಉರಿಯಾರದೆ ಕಿಡಿ ಕಾರದೆ ಬೆಳಗುವ ಚಿರಸ್ನೇಹದ ವರದೀಪದ ಕಡೆಗೆ || 1 || ತುಂಬಿದ ಹೃದಯದ ಸೋದರವೃಂದವು ಆದರದಿಂದಲಿ ಕರೆಯುವ ಕಡೆಗೆ ಎದೆಯಾಳದಿ ಅತಿ ಪ್ರೀತಿಯ ಮಮತೆಯ ಮೈತ್ರಿಯ ಸಾಗರ ಮೊರೆಯುವ ಕಡೆಗೆ || 2 || ಸ್ವಾರ್ಥವ ಮರೆಯಿಸಿ ಸ್ಫೂರ್ತಿಯ ದೊರಕಿಸಿ ಭಾವಾವೇಶವು ಹೊಮ್ಮುವ ಕಡೆಗೆ ಚೇತನಚಿಲುಮೆಯ ಶತಶತ ಧಾರೆಯ ಬಗೆಯಾವೇಗವು ಚಿಮ್ಮುವ ಕಡೆಗೆ || 3 […]
ಬನ್ನಿ ಹಿಂದು ವೀರರೇ ಮುಂದೆ ಸಾಗುವಾ ವೀರಮಾತೆ ಪುತ್ರರೆಂದು ಧೀರ ಸಂತಾನರೆಂದು ಧರೆಯೊಳಿಂದು ಸಾರುವಾ ಮುಂದೆ ಸಾಗುವಾ || ಪ || ತಾಯ ಸೇವೆಗಾಗಿ ಬನ್ನಿ ಧ್ಯೇಯಕಾಗಿ ದುಡಿವ ಬನ್ನಿ ನಿದ್ದೆ ತೊರೆಯುವಾ, ಎದ್ದು ನಿಲ್ಲುವಾ, ಸಿದ್ಧರಾಗುವಾ ಕತ್ತಲನ್ನು ಕಬಳಿಸುತ್ತ, ಸುತ್ತ ಬೆಳಕನರಳಿಸುತ್ತ ಮುಕ್ತ ರವಿಯು ಮೂಡುವಾ ನೋಟ ನೋಡುವಾ || 1 || ಭಗವ ಧ್ವಜ ಹಾರುತಿಹುದು, ಮುಗಿಲ ಮೇಲೇರುತಿಹುದು ಶುಭವ ಕೋರುತಾ, ಅಭಯವೀಯುತಾ, ಪ್ರಭೆಯ ಬೀರುತಾ ಭೋಗ ವಿಷಯ ರಾಗ ತ್ಯಜಿಸಿ, ತ್ಯಾಗ ಭಾವ […]
ಬನ್ನಿ ಸೋದರರೆ ಬನ್ನಿ ಬಾಂಧವರೆ ಹೃದಯ ಹೃದಯಗಳ ಬೆಸೆಯೋಣ ವಸುಧಾ ಕುಟುಂಬ ರಚಿಸೋಣ ಮೊಳಗಲಿ ತಾಯ ಯಶೋಗಾನ ಭಾರತೀ ಜಯ ಭಾರತೀ ಜಯ ಭಾರತೀ ಜಯ ಭಾರತೀ || ಪ || ಹಸಿವಡಗಲಿ ತೃಷೆ ಹಿಂಗಲಿ ಅಜ್ಞಾನದ ಪೊರೆ ಹರಿಯಲಿ ರೋಗ ರೂಢಿಗೊದಗಲಿ ಅವಸಾನ ಸುತರೆಮಗಿದು ಕರ್ತವ್ಯಪಣ ಧರೆ ಎನಿಸಲಿ ಆನಂದವನ || 1 || ಕೊರತೆ ಕಲುಷಗಳನಳೆದಳೆದು ಸರಿಯುತ್ತರ ಸುರಿಮಳೆಗರೆದು ಸರ್ವವ್ಯಾಪಿಯಾಗಲಿ ಸಂಕ್ರಮಣ ಸಂಘಟನಾಬಲ ನಿರ್ಮಾಣ ವಿಶ್ವ ಸಂತತಿಯ ಕಲ್ಯಾಣ || 2 || ಹಿಂದು […]
ಪರಶಿವಾಲಯ ವರ ಹಿಮಾಲಯ ಜ್ವಲಿಸು ಒಡಲಿನ ಜ್ವಾಲೆಯ ಹಿರಿಮೆ ಮಹಿಮೆಯ ಓ ನಗಾಧಿಪ ದಹಿಸು ನಾಡಿನ ವೈರಿಯ || ಪ || ಸತ್ತು ಮಲಗುತ ನೆತ್ತರಿತ್ತರು ಎನಿತೊ ಸಾಸಿರ ಯೋಧರು ತಮ್ಮ ನೆಲದೊಳೆ ಹೆಮ್ಮೆ ಛಲದೊಳೆ ಮಾತೆಗರ್ಪಿತರಾದರು ಅತ್ತ ಹೆಣ್ಣಿನ ಕಣ್ಣ ನೀರಿದೆ ಹೆತ್ತ ಒಡಲದು ಚೀರಿದೆ ಸುರಿದ ನೆತ್ತರ ಸೇಡಿನುತ್ತರ ನೀಡಿರೆನ್ನುತ ನರಳಿದೆ || 1 || ವೀರ ದಾಹಿರನೊಡನೆ ಬಾಳಿದ ಸಿಂಧು ದೇಶದೊಳಡಗಿದ ಖಡ್ಗ ಬಂಧುವೆ ಸೀಳು ದಾಸ್ಯವ ಏಳು ಮೇಲಕೆ ನೆಗೆಯುತ ಪೃಥ್ವಿರಾಜನ […]
ಪಣತೊಡು ಬಲಿ ಕೊಡು ನಾಡಸೇವೆಗೆ || ಪ || ಸ್ವಾರ್ಥ ಬಿಡು ತ್ಯಾಗ ತೊಡು, ಮೋಹ ಮಮತೆ ಬದಿಗಿಡು, ಸುಖದ ಚಿಂತೆ ದೂರಿಡು, ಧೈರ್ಯದಿಂದ ಮುಂದೆ ಸಾಗು ಕಾರ್ಯಕ್ಷೇತ್ರಕೇ || 1 || ಲಕ್ಷ್ಮಿ ಪದ್ಮಿನೀಯರ, ಶಿವ ಪ್ರಭು ಪ್ರತಾಪರ, ಬಸವ ಚಾಣಕ್ಯರ, ಭಕ್ತಿ ಶಕ್ತಿ ಶೌರ್ಯ ನೆನೆಸು ನಮಿಸು ಮಾತೆಯ || 2 || ದೇಶ ಹಿತ, ಸ್ವಜನ ಹಿತ, ನನ್ನ ಹಿತವಿದೆನ್ನುತಾ ದೇಶಕಾಗಿ ದುಡಿಯುತಾ, ಹಗಲು ಇರುಳು ದೇಹ ಸವೆಸು ಧ್ಯೇಯ ಪೂರ್ತಿಗೇ || […]
ನುಡಿದಂತೆ ನಡೆದವನ ಅಡಿಗೆನ್ನ ನಮನ ಕತ್ತಲಲಿ ಬೆಳಕಿತ್ತ ನಿನಗೆನ್ನ ನಮನ || ಪ || ಪರದಾಸ್ಯ ಮುಸುಕಿರಲು ಪರತತ್ವ ತುಂಬಿರಲು ಸ್ವಾಭಿಮಾನದ ಜ್ವಾಲೆ ಪ್ರಜ್ವಲಿಸಿ ಬೆಳಗಿಸಿದೆ ಬರಿದಾದ ಭಾವಗಳ ಒಡೆದೊಡೆದ ಹೃದಯಗಳ ಒಂದೆಡೆಗೆ ಬೆಸಹೊಯ್ದು ದುರ್ಭೇದ್ಯ ನಿರ್ಮಿಸಿದೆ || 1 || ಬಡತನದ ಬೇಗೆಯಲಿ ಬರಿದಾದ ಸಿರಿತನದಿ ಹಾಲಾಹಲವ ಕುಡಿದು ಅಮೃತವ ಸುರಿಸಿರುವೆ ಹಗಲಿರುಳು ಇಲ್ಲದೆಯೇ ನಿಃಸ್ವಾರ್ಥ ಸೇವೆಯಲಿ ಮೈ ಮನವ ದಂಡಿಸುತ ಆದರ್ಶ ಬೆಳೆಸಿರುವೆ || 2 || ಬಹು ಜನಕೆ ನೀ ತಿಳಿಯೆ ತಿಳಿದವಗೆ […]
ನಿನ್ನ ನೆನಪು ತರಲಿ ನಮಗೆ ಹೃದಯದಾ ವಿಕಾಸ ಅದರ ಅರಿವಿನಲ್ಲಿ ದೂರವಾಗಲೆಲ್ಲ ಪಾಶ ಮಾಯವಾಗಿ ಸ್ವಾರ್ಥವೆಲ್ಲ ಮೂಡಲೊಂದು ಆಶಾ ನಿನ್ನ ಕಣದ ಅಣುವು ನಾವು ಆಗಲೆಂಬ ಆಶಾ || ಪ || ಚಂಡಮಾರುತದ ನಡುವೆ ಒಂದೆ ದೀಪ ಜ್ವಾಲೆ ಉರಿಯುತಿತ್ತು ದಿಟ್ಟತನದಿ ಸೊರಗಿಹೋಯ್ತು ಗಾಳಿ ಕತ್ತಲನ್ನು ದೂರ ಸರಿಸಿ ಬೆಳಗಿ ಅದರ ಜ್ವಾಲೆ ಹೊತ್ತಿಸಿತು ದೀಪಗಳನು ಆಯ್ತು ದೀಪ ಮಾಲೆ || 1 || ಹಿಂದು ನಾವೆ ಮುಳುಗಿಸಲು ಏಳುತಿದ್ದ ಅಲೆಗಳು ನಾವಿಕನೆ ನಿನ್ನ ಮುಂದೆ ಉಡುಗಿ […]