ನುಡಿದಂತೆ ನಡೆದವನ ಅಡಿಗೆನ್ನ ನಮನ

ನುಡಿದಂತೆ ನಡೆದವನ ಅಡಿಗೆನ್ನ ನಮನ
ಕತ್ತಲಲಿ ಬೆಳಕಿತ್ತ ನಿನಗೆನ್ನ ನಮನ || ಪ ||

ಪರದಾಸ್ಯ ಮುಸುಕಿರಲು ಪರತತ್ವ ತುಂಬಿರಲು
ಸ್ವಾಭಿಮಾನದ ಜ್ವಾಲೆ ಪ್ರಜ್ವಲಿಸಿ ಬೆಳಗಿಸಿದೆ
ಬರಿದಾದ ಭಾವಗಳ ಒಡೆದೊಡೆದ ಹೃದಯಗಳ
ಒಂದೆಡೆಗೆ ಬೆಸಹೊಯ್ದು ದುರ್ಭೇದ್ಯ ನಿರ್ಮಿಸಿದೆ || 1 ||

ಬಡತನದ ಬೇಗೆಯಲಿ ಬರಿದಾದ ಸಿರಿತನದಿ
ಹಾಲಾಹಲವ ಕುಡಿದು ಅಮೃತವ ಸುರಿಸಿರುವೆ
ಹಗಲಿರುಳು ಇಲ್ಲದೆಯೇ ನಿಃಸ್ವಾರ್ಥ ಸೇವೆಯಲಿ
ಮೈ ಮನವ ದಂಡಿಸುತ ಆದರ್ಶ ಬೆಳೆಸಿರುವೆ || 2 ||

ಬಹು ಜನಕೆ ನೀ ತಿಳಿಯೆ ತಿಳಿದವಗೆ ನೀನೊಲಿವೆ
ಅವರೆಲ್ಲ ಹೃದಯಗಳ ದೇಗುಲದಿ ರಾಜಿಸುವೆ
ದೇಶಪ್ರೇಮವನೆರೆದು ಧ್ಯೇಯನಿಷ್ಠೆಯ ಬೆಳೆದು
ಆ ತಾಯಿ ಭಾರತಿಯ ವರಪುತ್ರ ನೀನಾದೆ || 3 ||

Leave a Reply

Your email address will not be published. Required fields are marked *

*

code