ಪಣತೊಡು ಬಲಿ ಕೊಡು ನಾಡಸೇವೆಗೆ || ಪ ||
ಸ್ವಾರ್ಥ ಬಿಡು ತ್ಯಾಗ ತೊಡು, ಮೋಹ ಮಮತೆ ಬದಿಗಿಡು,
ಸುಖದ ಚಿಂತೆ ದೂರಿಡು, ಧೈರ್ಯದಿಂದ ಮುಂದೆ ಸಾಗು ಕಾರ್ಯಕ್ಷೇತ್ರಕೇ || 1 ||
ಲಕ್ಷ್ಮಿ ಪದ್ಮಿನೀಯರ, ಶಿವ ಪ್ರಭು ಪ್ರತಾಪರ,
ಬಸವ ಚಾಣಕ್ಯರ, ಭಕ್ತಿ ಶಕ್ತಿ ಶೌರ್ಯ ನೆನೆಸು ನಮಿಸು ಮಾತೆಯ || 2 ||
ದೇಶ ಹಿತ, ಸ್ವಜನ ಹಿತ, ನನ್ನ ಹಿತವಿದೆನ್ನುತಾ
ದೇಶಕಾಗಿ ದುಡಿಯುತಾ, ಹಗಲು ಇರುಳು ದೇಹ ಸವೆಸು ಧ್ಯೇಯ ಪೂರ್ತಿಗೇ || 3 ||
ನಾಡ ಮಕ್ಕಳೇಳಲಿ, ಕೂಡಿ ಒಂದೇ ಆಗಲಿ,
ಬಿಡದೆ ಸೇವೆ ಗೈಯಲಿ, ನಾಡು ಗೆಲಲಿ ಮೇಲ್ಮೆ ಬರಲಿ ಭಾರತಾಂಬೆಗೇ || 4 ||
ಈ ೀತೆಯ ಧ್ವನಿ ಬೇಕಾಗಿದೆ. ಇದ್ದವರು ಕಳಿಸಿರಿ.
9663962224-ವರದರಾಜ ಬೀದರ