ಗಂಗಾ ಯಮುನಾ ಸಂಗಮ ಸಮತಲಭೂಮಿ

ಗಂಗಾ ಯಮುನಾ ಸಂಗಮ ಸಮತಲ ಭೂಮಿ ಸ್ವರ್ಗೀಯ ಸುಂದರ ಭೂಮಿ | ನಮ್ಮಿ ನಲ್ಮೆಯ ಭೂಮಿ | ಸ್ವತಂತ್ರ ಭಾರತ ಭೂಮಿ || ಪ || ಸಗರ ಸುಪುತ್ರರ ಸದ್ಗತಿ ದಾತನ ಸಾಹಸದೊಸಗೆಯ ಭೂಮಿ ಚಿನ್ನದ ತೆನೆಗಳ ಭೂಮಿ | ಉತ್ತರ ಭಾರತ ಭೂಮಿ | ಧರ್ಮಕ್ಷೇತ್ರದ ಭೂಮಿ || 1 || ದಕ್ಷಿಣ ಪಶ್ಚಿಮ ಪೂರ್ವಕೆ ಸಾಗರ | ಸಮುದ್ರ ಯೋಧನ ಭೂಮಿ | ಸುಭದ್ರ ಭಾರತ ಭೂಮಿ | ಪವಿತ್ರ ಭಾರತ ಭೂಮಿ | […]

Read More

ಕೇಳೋ ಗೆಣೆಯಾ

ಕೇಳೋ ಗೆಣೆಯಾ, ಕೇಳೋ ಗೆಣೆಯಾ ನಿಂದ ಕೈಯ ನಾ ಜೋಡಿಸಿಕೊಂಡು ಭಾರತ ಮಾತೆಗೆ ಹೇಳುವೆ ಕಣಿಯಾ || ಪ || ಅನ್ನರಗಡು ಅಗತೈತಿ, ಬನ್ನ ಬಗಡು ಹೋಗತೈತಿ ಸಣ್ಣತನ ನೀಗತೈತಿ, ಸಣ್ಣ ಸಣ್ಣತನ ನೀಗತೈತಿ ಅಣ್ಣ ತಮ್ಮ ಒಂದಾಗತೈತಿ || 1 || ಹಿಂದುವಾದಿ ಹಿಂದ್ಯಾಕ ಆದಿ, ಮುಂದೆ ನಡೆದರೈತಿ ಹಾದಿ ನಿಂದಿರದ ಹಿಂಗ್ಯಕ ಬಿದ್ದಿ, ನೀ ನಿಂದಿರದ ಹಿಂಗ್ಯಕ ಬಿದ್ದಿ ಚಂದವಲ್ಲವೀ ಮಂಪರು ನಿದ್ದಿ || 2 || ತಲಿಗೆಡಿಸೋ ಬುದ್ಧಿ ಸಾಕ, ಛಲ ಬೇಕಾ […]

Read More

ಕೇಳದೋ ಗಿರಿಗಹ್ವರದಿಂದೇಳುತ

ಕೇಳದೊ ! ಗಿರಿಗಹ್ವರದಿಂದೇಳುತ ಗರ್ಜಿಸುತಿರುವ ಸಮೀರ ಭಾರತಮಾತೆಯ ಕಾವಲುಪ್ರಹರಿಯ ಪ್ರಲಯಂಕರ ಹೂಂಕಾರ || ಪ || ಚೇತನಚಿಲುಮೆಯ ಶತಶತ ಧಾರೆಯ ರುಂದ್ರ ಪ್ರವಾಹವೆ ಹರಿದು ವಿಘ್ನ ವಿರೋಧವ ತೇಲಿಸಿ ಮುಳುಗಿಸಿ ಕೊಳೆ ತೊಳೆಯುತ ಭೋರ್ಗರೆದು ನಾಡಿನ ನರನಾಡಿಗಳೊಳು ನಡೆದಿದೆ ನವ ವಿಪ್ಲವ ಸಂಚಾರ || 1 || ಕರಕರದಲಿ ಮಿಂಚಲಿ ಹೊರನೆಗೆಯಲಿ ಕಾಪಿನ ಖಡ್ಗ ಕಠಾರಿ ರಕ್ಷಿತವಾಗಲಿ ಶುಭಕೃತಿ ಸಂಸ್ಕೃತಿ ಅರಿದನುಜರ ಶಿರ ಹಾರಿ ಶಿಲೆ ಶಿಲೆ ಸಿಡಿದಿದೊ ಬಿರುಗಣ್ ಬಿಡಲಿದೆ ನರಸಿಂಹನ ಅವತಾರ || 2 […]

Read More

ಕಾವಿಯ ವರ್ಣದ ಧ್ವಜವೂ

ಕಾವಿಯ ವರ್ಣದ ಧ್ವಜವೂ ನಮ್ಮ ಧ್ವಜವೂ ಭಾರತ ಮಾತೆಯ ಕೈಯೊಳಗಿರುವ ಹಿಂದೂವೀರರ ಸ್ಫೂರ್ತಿಯ ಧ್ವಜವಿದು || ಪ || ಹಿಂದೂಸ್ಥಾನವನೇಕೀಕರಿಸುವ ಅಮರಾಕಾಂಕ್ಷೆಯ ಕೇಂದ್ರವಿದು ತ್ಯಾಗದ ಶೌರ್ಯದ ತೇಜದಿ ಬೆಳಗುವ || 1 || ಉಜ್ವಲ ದೇಶದ ಪರಂಪರೆಯನು ಬೆಳಗುವ ನಾಡಿನ ಸೂರ್ಯವಿದು ಪವಿತ್ರ ಗುಡಿಗಳ ಶಿಖರದ ಮೇಲಿನ || 2 || ಪ್ರತಾಪ ಶಿವರಾ ಮಾನದ ಬಿಂದು ವಿಜಯಾನಗರದ ತೇಜವಿದು ಹಿಂದೂವಿಜಯದ ಚಿಹ್ನೆಯಿದು ನಮ್ಮ || 3 || ನಾಡಿನ ವೈಭವ ಸಾಧಿಸಲಿಂದು ಮಾರ್ಗವ ತೋರುವ ದೀಪವಿದು […]

Read More

ಕಾರ್ಮೋಡಗಳ ಸೀಳಿ ಕೋಲ್ಮಿಂಚು ಮೈದಾಳಿ

ಕಾರ್ಮೋಡಗಳ ಸೀಳಿ ಕೋಲ್ಮಿಂಚು ಮೈದಾಳಿ ಗುಡುಗಿತು ನಭೋಮಂಡಲ ರಾಮನ ನೆಲದಿಂದ ಧರ್ಮದ ನೆಲೆಯಿಂದ ಬೆಳಗಲಿ ಭೂಮಿಯಂಗಳ ರಾಮನಾಮದಿ ಬೆಳಗಲಿ ಭೂಮಿಯಂಗಳ || ಪ || ಸಾಮಗಾನದ ಶೃತಿಗಿಹುದೇ ಲಯ ಸಾಮರಸ್ಯದ ಕೃತಿಗೆಲ್ಲಿಯ ಕ್ಷಯ ವಿಷಮದ ವ್ಯಾಪಾರ ವಿಶ್ವದಿ ನಶಿಸಲಿ ರಸಪೂರ್ಣವೆನಿಸಲಿ ಈ ತಾಯ್ನೆಲ || 1 || ಜಡತೆಯ ವಂಶಕೆ ವಜ್ರಾಘಾತ ಜಾಗೃತ ಜ್ವಾಲೆಗೆ ಝಂಝೂವಾತ ನಿದ್ರೆಯ ಮುದ್ರೆಯ ಒದ್ದೋಡಿಸುತಾ ಸದ್ದನು ಮರೆಯಲಿ ಸ್ವರಸಂಕುಲ || 2 || ಉಜ್ವಲ ಸಂಸ್ಕೃತಿ ಉದ್ದೀಪಿಸಿದೆ ಉತ್ಕರ್ಷಕೆ ಜಗ ಉಡ್ಡಯಿಸುತಿದೆ […]

Read More

ಕಟ್ಟುವೆವು ನಾವು ಹೊಸ ನಾಡೊಂದನು

ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು || ಪ || ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ ಹರಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ನಮ್ಮದೆಯ ಕನಸುಗಳೆ ಕಾಮಧೇನು – ಆದಾವು ಕರೆದಾವು ವಾಂಛಿತವನು || 1 || ಕರೆವ ಕೈಗಿಹುದಿದೋ ಕನಸುಗಳ ಹರಕೆ ಗುರಿತಪ್ಪದೊಮ್ಮುಖದ ಬಯಕೆ ಬೆಂಬಲಕೆ ಜಾತಿ ಮತ ಭೇದಗಳ ಕಂದಕವು […]

Read More

ಓರ್ವ ಕೇಶವ ಓರ್ವ ಮಾಧವ

ಓರ್ವ ಕೇಶವ ಓರ್ವ ಮಾಧವ ಅಮರ ಪಂಕ್ತಿಗೆ ಯಾದವ “ಜಯಿಸು ಅಜೇಯವ ಸೆಣಸು ಸವಾಲಿಗೆ” ಸೂತ್ರ ಮೊಳಗಿದ ಬಾಂಧವ || || ಪ || ಬಾಲ್ಯದಲಿ ಸಂಗೀತ ಸುಧೆಯಲಿ ಬಾಲಭಾಸ್ಕರ ಎನಿಸಿದೆ ಕನ್ನಡ ನೆಲದಲಿ ಸಂಘಧ್ಯೇಯದ ತಾನ ಪಲ್ಲವಿ ಉಲಿಸಿದೆ || || 1 || ಬಾನಿನೆತ್ತರ ಭಾವ ಬಿತ್ತರ ಹೊಸದು ಆಯಾಮಗಳ ಮಜಲು ಹಿಂದು ಭಾವನೆ ಬೆಳೆದು ಬೆಳಗಲು ಹಬ್ಬಿಸಿದೆಯಾ ಅಪೂರ್ವ ಬಿಳಲು || 2 || ದಿಟ್ಟ ಮನಸಿನ ಕಠಿಣ ತಪಸಿನ ಮನು ಹೃದಯಗಳ […]

Read More

ಓ ಏಳು ಮೈತಾಳು ನವಯುಗ ನಿರ್ಮಾಪಕನೆ

ಓ ಏಳು ಮೈತಾಳು ನವಯುಗ ನಿರ್ಮಾಪಕನೆ || ಪ || ಬೊಬ್ಬಿರಿಯುವ ತೆರೆತೆರೆ ಹೃದಯಾಂಬುಧಿಯಂಚಿನಲಿ ಬರಸಿಡಿಲಿನ ಘನಗರ್ಜನೆ ಗಹನದ ಮಿಂಚಿನಲಿ ಉದ್ಧಟ ನದಿಯಾರ್ಭಟ ಸೆರೆಸೆರೆಯ ಪ್ರವಾಹದಲಿ ತೆರೆ ತೆರೆ ಭೀಕರ, ಉರಿಗಣ್ಣನು ಬಡಬಾನಲನೆ || 1 || ಗ್ರಹ ಗ್ರಹಗಳ ಸಿಡಿಸುವ ಅಣುಶಕ್ತಿಯ ಅಂಗಾರ ಪ್ರಲಯೇಶ್ವರನಿಗೆ ಸೃಷ್ಟಿಯ ಮೊದಲಿನ ಶೃಂಗಾರ ಕರೆ ಸಂಕ್ರಾಂತಿಯ ಜ್ಞಾನತುಷಾರ ಸ್ಥೈರ್ಯದಿ ಸೃಷ್ಟಿಸು ಪುನರಪಿ ರೂಪಿಸು ವಿಶ್ವವನೆ || 2 || ಎದೆಯನು ಮೆಟ್ಟುವ ಮಸಣದ ಭೂತವ ಹೊಡೆದಟ್ಟಿ ಜಡ ಮಸಣದ ಎದೆಯೊಳಗೂ […]

Read More

ಒಂದು ದಿನ ಸಂಜೆಯ ಸಮಯ

ಒಂದು ದಿನ ಸಂಜೆಯ ಸಮಯ ತಿರುಗಾಡಲು ಹೊರಟಾಗ ಕಂಡೆನು ನಾ ಮನವನು ಸೆಳೆವ ಸುಂದರ ದೃಶ್ಯವನೊಂದ || ಪ || ಮಾರ್ಗದ ಬದಿಯಲಿ ಬಯಲು, ಆ ಬಯಲಲಿ ಮಕ್ಕಳ ಹುಯಿಲು ಮಕ್ಕಳಿಗೆಲ್ಲಾ ಮುಖ್ಯನು ಒಬ್ಬ, ಗರ್ಜಿಸಿತವನಾ ಬಿಗಿಲು ಟಿರ್ರ್ ಟ್ರಿಕ್… ಟಿರ್ರ್ ಟ್ರಿಕ್ …. ತತ್ತರಿಸಿತು ಆ ಮುಗಿಲು || 1 || ದಕ್ಷ ಆರಮ ಆಜ್ಞೆ, ಅದು ಶಿಸ್ತಿಗೆ ಸೂಚಕ ಸಂಜ್ಞೆ ಸಂಜ್ಞೆಯನರಿತು ಸಾಗಿತು ಮುಂದೆ, ತರುಣರ ಬಾಲರ ಸೇನೆ ಏಕ್-ದೋ-ಏಕ್-ದೋ, ಏಕ್-ದೋ-ಏಕ್-ದೋ, ಸಂಪತಗೊಂಡಿತು ತಾನೇ […]

Read More

ಒಂದುಗೂಡುವಾ ಮುಂದೆ ಸಾಗುವಾ

ಒಂದುಗೂಡುವಾ ಮುಂದೆ ಸಾಗುವಾ ಬಂಧು ಭಾವದಿಂದ ಸೇರುವಾ ಹಿಂದುಭೂಮಿ ಸೇವೆ ಗೈಯ್ಯುವಾ || ಪ || ಅಂದು ತುಂಬಿ ತುಳುಕುತಿದ್ದ ಧನ ಧಾನ್ಯವೆತ್ತ ಸಾಗಿದೆ ಇಂದು ಜನತೆ ಅರ್ಧ ನಗ್ನವಾಗಿ ಬಡವಾಗಿದೆ ದುಡಿದು ಬೇಗ ಫಲವ ಗಳಿಸುವಾ ತಾಯಿನಾಡನು ಸಮೃದ್ಧಿಗೊಳಿಸುವಾ || 1 || ವಿಮಲ ಶೀಲ ದಿವ್ಯ ವಿದ್ಯೆ ಕಲೆಗಳೆಲ್ಲಿ ಪೋದವೂ ? ಭ್ರಮೆಯ ಹೊಂದಿ ಪರರ ಬಲೆಗೆ ಸಿಲುಕಿ ದೀನರಾದೆವೂ ಮರಳಿ ಜ್ಞಾನವನ್ನು ಪಡೆಯುವಾ ನಾವ್ ಧರೆಯ ಜನಕೆ ನಯದಿ ನೀಡುವಾ || 2 […]

Read More