ಸಮಾಜವೇ ನಮ್ಮ ಆರಾಧ್ಯದೈವವು, ಸೇವೆಯೆ ನಿಜ ಆರಾಧನಾ ಭಾರತಮಾತೆಯು ವಿಭವದಿ ಮೆರೆಯಲು, ಸಹಕಾರಕತ್ವವೆ ಸಾಧನಾ | ಸಹಕಾರತತ್ವವೆ ಸಾಧನಾ || ಪ || ಸಮಾಜದಿಂದಲೆ ಸಂಸ್ಕೃತಿಯೆನ್ನುವ ಘನನಿಧಿ ನಮಗೆ ದೊರಕಿಹುದು ಧನ, ಜ್ಞಾನದ ಬೆಲೆ ಬಾಳುವ ಗಣಿಯು ಸಮಾಜದಿಂದಲೆ ಲಭಿಸುಹುದು ಸಮಾಜ ಋಣದಿಂ ಮುಕ್ತರಾಗಲು, ಪಡೆದುದ ಮರಳಿ ನೀಡೋಣ ಭಾರತಮಾತೆಯು ವಿಭವದಿ ಮೆರೆಯಲು, ಸಹಕಾರಕತ್ವವೆ ಸಾಧನಾ | ಸಹಕಾರತತ್ವವೆ ಸಾಧನಾ || 1 || ಸದವಕಾಶ ಎಲ್ಲರಿಗೂ ಸಿಗಲಿ ಉಪೇಕ್ಷಿತರಾರೂ ಇರದಿರಲಿ ಶಿಕ್ಷಣ, ಸ್ವಾಸ್ಥ್ಯ, ಸುಸಂಸ್ಕೃತಿ ಪಡೆದು, […]
ಸಂಘಾಷ್ಟಕ ಕಡಲೊಡೆಯ ಪದತೊಳೆವ ಈ ಪುಣ್ಯಭೂಮಿ ಹಿಮನಗವು ಶೋಭಿಸುವ ಈ ದೇವಭೂಮಿ ಹಿಂದುಭೂಮಿಯ ಪದದಿ ಮೂಜಗವೂ ಮಣಿಯೆ ಅನುದಿನವೂ ಜಪಿಸೋಣ ಸಂಘಮಂತ್ರ || 1 || ಜಗದ ಗುರು ತಾನಾಗಿ ವಂದನೆಯ ಗಳಿಸಿ ಚಂದದಿಂದಲಿ ಬೆಳಕಿತ್ತುದೀ ಹಿಂದುರಾಷ್ಟ್ರ ನಂದದೆಯೇ ಮುಂದರಿಯಲೀ ನಂದಾದೀಪ ಒಂದಾಗಿ ಜಪಿಸೋಣ ಸಂಘಮಂತ್ರ || 2 || ಕರಪಿಡಿದು ತಾಯ್ತನವ ಮೆರೆದಿರುವ ನಾಡು ನರಳಾಡಿ ಮರುಗುತಿಹ ಪರಿಯೊಮ್ಮೆ ನೋಡು ಈ ದುಃಖದಿಂದವಳ ಮೇಲೆತ್ತಲೆಂದೇ ಪ್ರತಿದಿನವೂ ಜಪಿಸೋಣ ಸಂಘಮಂತ್ರ || 3 || ನಿಂದಿತರು ಪತಿತರಲಿ […]
ಸಾರುತಲಿದೆ ಹೊಸ ನೇಸರು ನಾಡಿಗೆ, ಪರಮ ವೈಭವದ ಆಗಮನ ಭಾರತ ಮಾತೆಯ ಮಡಿಲನು ಬೆಳಗುವ, ತೀರ್ಥ ಗ್ರಾಮಗಳ ಹೊಂಗಿರಣ ಗ್ರಾಮ ವಿಕಾಸಕೆ ದುಡಿಯೋಣ, ಸಮೃದ್ಧ ಭಾರತ ಕಟ್ಟೋಣ || ಪ || ಹಕ್ಕಿಯ ಕಲರವ ನೀರಿನ ಜುಳುಜುಳು, ಹಸಿರಿನ ವನ ಗೋ ಸಂಪದವು ಸುಳಿಗಾಳಿಗೆ ತೊನೆದಾಡುವ ತೆನೆಗಳು, ಕರಕೌಶಲಗಳ ಜನಪದವು || 1 || ಹುಣ್ಣಿಮೆ ಹರಿದಿನ ಎಳ್ಳಮವಾಸ್ಯೆಗೆ, ಗುಡಿ ಗುಡಿಸಲುಗಳ ಶೃಂಗಾರ ಚಿಣ್ಣರ ಉಲ್ಲಾಸ-ಬಣ್ಣದ ಹಬ್ಬದಿ, ಮಣ್ಣಿಗು ಚಿನ್ನದ ಚಿತ್ತಾರ || 2 || ರೋಗಮುಕ್ತ […]
ಭಾರತ ದೇಶದ ಏಕತೆಯಳಿಸುವ ಕೆಲಸವು ಪ್ರತಿದಿನ ನಡೆಯುತಿದೆ ಸೋಗಿನ ಪ್ರಗತಿಯ ಹೆಸರಲಿ ನಿತ್ಯವು ಸಂಸ್ಕೃತಿ ಸಭ್ಯತೆ ಕೆಡುತಲಿದೆ || ಪ || ಮೂರ್ಖ ಮತಾಂಧರು ಮಾಡುತಲಿಹರು ಮನೆಯೊಳಗಡೆಯೇ ಮಸಲತ್ತು ಒಳಗಡೆ ನುಸುಳುವ ಮುಸಲರಿಗೆಲ್ಲ ಅಶನವಸತಿಗಳ ನೆರವಿತ್ತು || 1 || ಮೊಲೆಯನು ಉಣಿಸುವ ನೆಪದಲಿ ಪೂತನಿ ಮೋಹಕ ರೂಪದಿ ಬರುತಿಹಳು ಹೊನ್ನಿನ ಮಣ್ಣಿನ ಆಮಿಷ ತೋರುತ ಮತಪರಿವರ್ತನೆ ಮಾಡಿಹಳು || 2 || ಧರ್ಮ ವಿಲೋಪವು ಮತನಿರಪೇಕ್ಷತೆ ಸುಮ್ಮನೆ ಮಾತಿನ ಬಡಿವಾರ ಕುಟಿಲತೆ ಮೆರೆದಿಹ ರಾಜಕಾರಣವು ಮಾಡಿದ […]
ಪಡುಗಡಲಿನಾಚೆಯ ಭೋಗ ಪ್ರವಾಹದಲೆ ಎಡೆಬಿಡದೆ ದಡಗಳನು ಬಡಿಯುತಿಹುದು || ಪ || ಹುಡಗನಿವ ಮುದುಕನಿವ ಕಡು ಬಡವನೆನ್ನದೆಯ ಕೆಳ ಕೆಡಹಿ ತುಳಿದಾಡಿ ಕುಣಿಯುತಿಹುದು || 1 || ಭೋಗಕಿದೆ ಭೋರ್ಗರೆತ ಭೋಗವದು ಜಲಪಾತ ಅಂತ್ಯವರಿಯದ ಪಯಣ ಸತತ ಕೊರೆಯುತಿದೆ || 2 || ಸಲಿಲಕ್ಕೆಲ್ಲಿಯ ಸ್ಥೈರ್ಯ ಸ್ಥಿರತೆಯಿದೆ ಹಿಮನಗಕೆ ತ್ಯಾಗ ಸಂಸ್ಕøತಿ ನಮದು ಮೇರುಸ್ಥೈರ್ಯ || 3 || ಶತಕಗಳ ಇತಿಹಾಸ ಧೃತಿಗೆಡದ ಮೃದುಹಾಸ ವಿಷವೃತ್ತ ದಾಟುವೆವು ಅಚಲಧೈರ್ಯ || 4 || adana escort adıyaman […]
ಸುಮಸಮ ಮನಸಿನ ಮನುಜರು ನೆಲಸಿಹ ಮನೆಯಿದು ಸಮನಸರಾವಾಸ || ಪ || ಅನುಜರು ತನುಜರು ಅನುಭವಿ ಹಿರಿಯರು ಅನುಸರಿಸುವ ಸತಿ ಸಹವಾಸ || 1 || ಸ್ವಾರ್ಥದ ನಿಯಮನ ಪರಹಿತ ಚಿಂತನ ಭೋಗದ ಬದುಕಿಗೆ ಕಡಿವಾಣ || 2 || ಅತಿಥಿ ಅಭ್ಯಾಗತ ಸಾಧಯ ಸಜ್ಜನರಿಗೆ ಮನೆಯಿದು ನೆಲೆ ನೀಡುವ ತಾಣ || 3 || ಸ್ನಾನದ ಜಲದಲಿ ಭೋಜನದೆಲೆಯಲಿ ಆಟದ ಪಾಠದ ಸಮಯದಲಿ ರಾಷ್ಟ್ರಾರಾಧನೆ ದೇವರ ಸ್ಮರಣೆ ಕ್ಷಣ ಕ್ಷಣ ಶಿಕ್ಷಣ ಬದುಕಿನಲಿ || 4 […]
ಕಡಲತಡಿಯ ಸಿಡಿಲ ಸಂತನ ಮನಸಿನಾಳದ ಕಿಡಿ ನುಡಿ ಎದ್ದುನಿಂತಿಹ ಹಿಂದು ತರುಣನೆ ಮುಂದು ಮುಂದಕೆ ನಡಿ ನಡಿ || ಪ || ತರುಣ ಹೃದಯಕೆ ಮನಕೆ ನಯನಕೆ ಭಾವಬಿಂಬಕೆ ಕನ್ನಡಿ ವಿಶ್ವವಿಜಯದ ಯಶದ ಕಥನಕೆ ಬರೆದ ಸುಂದರ ಮುನ್ನುಡಿ || 1 || ಅಡಿಯ ಮುಂದಿಡೆ ಸ್ವರ್ಗ ಕಾದಿದೆ ಹಿಂದಕುಳಿದಿದೆ ನರಕವು ಮುಂದೆ ಗುರಿ ಇದೆ ಗುರುವು ಜತೆಗಿರೆ ನಿತ್ಯ ಸಾಧನೆ ಮಾರ್ಗವು || 2 ||
ಜಗಳವೇತಕೆ ಯುಗಳ ಭಾಷೆಯು ಮಗಳ ಸಮವಹುದಾಕೆಗೆ ಮುಗುಳು ನಗುತಲೆ ತೊದಲ ತಿದ್ದುವ ದಾತೆ ಸಂಸ್ಕೃತ ಮಾತೆಗೆ || ಪ || ತಮಿಳು ಚಂದನ ಕಂಪು ಕನ್ನಡ ಮುರಳಿನಾದದ ಕೈರಳಿ ಅರಳಿ ನಗುತಿಹ ಸುಮಗಳೆನಿತಿವೆ ಭರತಮಾತೆಯ ಬನದಲಿ || 1 || ಪ್ರತಿಪದವು ಪ್ರತಿ ಪದೆಯದಾಗಲಿ ನವಶಕೆಯ ಶಶಿಯುದಿಸಲಿ ಸೃಜಿಸಿ ಪದಗಳ ಕಾವ್ಯಕವನವ ರಚಿಸಿ ಜನಮನ ನಲಿಯಲಿ || 2 || ವಿಭಜನೆಯ ಕಿಡಿ ಕೆಡುಕಿಗಲ್ಲದೆ ಬದುಕಿಗೆಂದಿಗು ಸಲ್ಲದು ಸಭ್ಯ ಸಜ್ಜನರೆಮ್ಮ ಜನತೆಯು ಒಡಕು ಮಾತನು ಒಲ್ಲದು || […]
ಪಾಂಚಜನ್ಯದ ಕರೆಗೆ ಕರಗಿತು ದ್ವಾಪರದ ಆ ಕುರುಕುಲ ಹರಿಯು ಉರಿಸಿದ ಧ್ಯೇಯ ದೀಪ್ತಿಗೆ ಬೆಳಗಿ ಧರ್ಮದ ದೇಗುಲ || ಪ || ಅವನ ಕೆಲಸಕೆ ಮತ್ತೆ ಹೊರಟಿದೆ ಭರತ ಖಂಡ ಮನುಕುಲ ಮಾತೃ ವ್ಯಾಕುಲ ಕಳೆಯೆ ಕಲೆತಿದೆ ಕಲಿಯ ಕಲಿಗಳ ಸಂಕುಲ || 1 || ಬೆರಳು ನಲಿಯಲು ಉಲಿವ ಕೊಳಲಲು ಸ್ವಾಭಿಮಾನದ ಸರಿಗಮ ಏರು ಇಳಿತದ ಸಪ್ತಸ್ವರದಲಿ ಸಾಮರಸ್ಯದ ಸಂಗಮ || 2 || ಪಣವ ಆನಕ ಶಂಖ ಗೋಮುಖ ರಣದ ಭೇರಿಯ ವಾದನ ಸ್ಫೂರ್ತಿ […]
ಭಾರತಾವನಿ ನಿನ್ನ ಆಶ್ರುಧಾರೆಗೆ ತೊಯ್ದು ತೆರೆಯಿತೆ ಪರಶಿವನ ಹೃದಯದ್ವಾರ ಶಿಶು ರೂಪವನು ತಳೆದು ನಿನ್ನ ಮಡಿಲಲಿ ಬೆಳೆದು ಹರಿಸಿದನೆ ಜಗದೆಡೆಗೆ ಪ್ರೇಮ ಪೂರ || ಪ || ನವಯುಗದ ದೃಷ್ಟಾರ ಯುವ ಮನದ ನೇತಾರ ವಿವೇಕದಲಿ ಆನಂದ ಕಂಡ ಸಂತ ಪತಿತ ಶೋಷಿತ ಮನಕೆ ಬಳಲಿ ಬಾಗಿದ ಜನಕೆ ಬೆನ್ನೆಲುಬು ತಾನಾಗಿ ಸೆಟೆದು ನಿಂತ || 1 || ಅಂಗನೆಯರಾಹ್ವಾನ ಅಂದಣದ ಬಹುಮಾನ ಒಂದಿನಿತು ಕುಂದಿಸದ ಧವಳ ಶೀಲ ಜ್ಞಾನ ತೇಜೋಮಯದ ತೆರೆದ ಕಂಗಳಕಾಂತಿ ಫಾಲನೇತ್ರನ ಕರದಿ […]