ಸುಮಸಮ ಮನಸಿನ

ಸುಮಸಮ ಮನಸಿನ
ಮನುಜರು ನೆಲಸಿಹ
ಮನೆಯಿದು ಸಮನಸರಾವಾಸ || ಪ ||

ಅನುಜರು ತನುಜರು
ಅನುಭವಿ ಹಿರಿಯರು
ಅನುಸರಿಸುವ ಸತಿ ಸಹವಾಸ || 1 ||

ಸ್ವಾರ್ಥದ ನಿಯಮನ
ಪರಹಿತ ಚಿಂತನ
ಭೋಗದ ಬದುಕಿಗೆ ಕಡಿವಾಣ || 2 ||

ಅತಿಥಿ ಅಭ್ಯಾಗತ
ಸಾಧಯ ಸಜ್ಜನರಿಗೆ
ಮನೆಯಿದು ನೆಲೆ ನೀಡುವ ತಾಣ || 3 ||

ಸ್ನಾನದ ಜಲದಲಿ ಭೋಜನದೆಲೆಯಲಿ
ಆಟದ ಪಾಠದ ಸಮಯದಲಿ
ರಾಷ್ಟ್ರಾರಾಧನೆ ದೇವರ ಸ್ಮರಣೆ
ಕ್ಷಣ ಕ್ಷಣ ಶಿಕ್ಷಣ ಬದುಕಿನಲಿ || 4 ||

Leave a Reply

Your email address will not be published. Required fields are marked *

*

code