ಕಡಲತಡಿಯ ಸಿಡಿಲ ಸಂತನ

ಕಡಲತಡಿಯ ಸಿಡಿಲ ಸಂತನ
ಮನಸಿನಾಳದ ಕಿಡಿ ನುಡಿ
ಎದ್ದುನಿಂತಿಹ ಹಿಂದು ತರುಣನೆ
ಮುಂದು ಮುಂದಕೆ ನಡಿ ನಡಿ || ಪ ||

ತರುಣ ಹೃದಯಕೆ ಮನಕೆ ನಯನಕೆ
ಭಾವಬಿಂಬಕೆ ಕನ್ನಡಿ
ವಿಶ್ವವಿಜಯದ ಯಶದ ಕಥನಕೆ
ಬರೆದ ಸುಂದರ ಮುನ್ನುಡಿ || 1 ||

ಅಡಿಯ ಮುಂದಿಡೆ ಸ್ವರ್ಗ ಕಾದಿದೆ
ಹಿಂದಕುಳಿದಿದೆ ನರಕವು
ಮುಂದೆ ಗುರಿ ಇದೆ ಗುರುವು ಜತೆಗಿರೆ
ನಿತ್ಯ ಸಾಧನೆ ಮಾರ್ಗವು || 2 ||

One thought on “ಕಡಲತಡಿಯ ಸಿಡಿಲ ಸಂತನ

  1. ಕಡಲತಡಿಯ ಸಿಡಿದ ಸಂತ ಪೇಜಾವರ ಸ್ವಾಮೀಜಿಗಳ ಕುರಿತ ಹಾಡು ಅತ್ಯುತ್ತಮವಾಗಿದೆ

    • Phone No: 07760699404

Leave a Reply

Your email address will not be published. Required fields are marked *

*

code