ಸವೆಸುತ ಬಾಳ ರಾಷ್ಟ್ರೋನ್ನತಿಗೆ ಧ್ಯೇಯದ ಕಣಕಣವಾಗಿ ಸರಿಸುತ ದೂರ ಕಾರ್ಗತ್ತಲನು ಬೆಳಗುವ ಹೊಂಬೆಳಕಾಗಿ || ಪ || ಕವಿದಿಹ ಮೌಢ್ಯದ ಕಾರ್ಮೋಡವನು ಕರಗಿಸಿ ಎಳೆಎಳೆಯಾಗಿ ಬೆಳೆಸುತ ಮುಂದಿನ ಉಜ್ವಲ ಸಿರಿಯನು ಎಲೆಮರೆಯ ಕಾಯಾಗಿ ಸಂಸ್ಕಾರದ ತಂಪೆಲರಾಗಿ || 1 || ಸಾತ್ವಿಕ ಪಥದಲಿ ಆತ್ಮೀಯತೆಯನು ಸಹನೆಯ ಸೂತ್ರದಿ ಹೆಣೆದು ತಾತ್ವಿಕ ಬದುಕಲಿ ಅಕರ್ಷಣೆಗಳ ಪಾಶಗಳೆಲ್ಲವ ಕಡಿದು ಸರಳತೆಗೆ ಕದ ತೆರೆದು || 2 || ರಾಷ್ಟ್ರದ ವೈಭವ ಸಾಧನೆಗಾಗಿ ಬೆವರಿನ ಹನಿಹನಿ ಸುರಿದು ಭಾರತ ಭೂಮಿಯ ಕೀರ್ತಿ […]
ಜಾಗೃತಗೊಳ್ಳಲಿ ಎಲ್ಲೆಡೆಯೂ ನವಶಕ್ತಿಯ ಸ್ಫುರಣ ಜ್ವಲಿಸಲಿ ನಾಡಿನ ಪ್ರತಿಕಡೆಯೂ ತಾರುಣ್ಯದ ಕಿರಣ ಸಜ್ಜನ ಶಕ್ತಿಯ ಜಾಗರಣ……. ದುರ್ಜನ ಶಕ್ತಿಯ ಸಂಹರಣ || ಪ || ಪ್ರತಿ ಎದೆಯಾಳದಿ ಸ್ಫುಟಗೊಳಲಿ ಧ್ಯೇಯದ ಪುನರವತಾರ ಪ್ರತಿಧ್ವನಿ ಮಾರ್ದನಿಗೊಳುತಿರಲಿ ತಾಯ್ನಾಡಿಗೆ ಜಯಕಾರ ಒಂದೇ ನಾಡಿನ ಒಂದೇ ತಾಯಿಯ ಸುತರೆಮ್ಮಯ ಮಮಕಾರ || 1 || ಹದಿಹರೆಯದ ನವ ಹುರುಪಿರಲಿ ಮುನ್ನುಗ್ಗುವ ಛಲವಿರಲಿ ಅನುದಿನ ಸ್ಫೂರ್ತಿಯ ಸೆಲೆಯಿರಲಿ ಹೊಸತನದಾ ಸಾಧನೆಯಿರಲಿ ನವ ಉತ್ಸಾಹದ ನವ ಉನ್ಮೇಷದ ಯುವತನವೇಳಲಿ ಮನಗಳಲಿ || 2 || […]
ಹೆತ್ತ ಒಡಲಿನ ಹತ್ತು ಹೈಕಳು ಮುಷ್ಟಿಕೈಗಳ ತೆರದಿ ಒಟ್ಟುಗೂಡುತ ಕಟ್ಟಲು ಬನ್ನಿ ಸ್ವಾಭಿಮಾನವ ಭರದಿ ಚಲಿಸಲಿ ನಮ್ಮಯ ನಡಿಗೆ……….. ಗ್ರಾಮ ವಿಕಾಸದ ಕಡೆಗೆ || ಪ || ನಾಡಿನ ನಡುವಿನ ಕಟ್ಟೆಯ ಮ್ಯಾಗೆ ಕುಳಿತಿರುವಾ ಯಜಮಾನ ನೋವನು ಉಂಡಿಹ ಊರಿನ ಮಂದಿಗೆ ಕೊಡುವನು ನ್ಯಾಯ ತೀರ್ಮಾನ ಹೊಲದಲಿ ಗಳಿಸಿದ ಕೂಳನು ಹಂಚುವ ಒಲವಿನ ಪರಿ ನೋಡೋಣ || 1 || ಬೆಳಗಾಗೆದ್ದು ಮಡಿಯಲಿ ಮಿಂದು ದ್ಯಾವರ ಪೂಜೆಯ ಗೈದು ಮನೆಯನು ಸಾರಿಸಿ ಆಕಳ ಪೂಜಿಸಿ ಹೊಲಗದ್ದೆಗಳಲಿ ದುಡಿದು […]
ಹೃದಯದ ಕಣಕಣ ಮಾರ್ದನಿಗೊಳುತಲಿ ಗೈದಿದೆ ವಿಜಯದ ಝೇಂಕಾರ ಭಾರತಮಾತೆಗೆ ಜಯಕಾರ | ಭಾರತಮಾತೆಗೆ ಜಯಕಾರ || ಪ || ವಿಶ್ವದ ದೃಷ್ಟಿಯ ಸೃಷ್ಟಿಯಗೈದ ಉಜ್ವಲ ಸಂಸ್ಕೃತಿ ಹಿಂದುತ್ವ ವಸುಧೆಯ ಮಕ್ಕಳು ಎಲ್ಲರೂ ಒಂದೇ ಎನ್ನುತ ಸಾರುತ ಬಂಧುತ್ವ ಶತಶತಮಾನಕೂ ನಿತ್ಯ ಸನಾತನ ಭಾರತ ಭೂಮಿಯ ಆದರ್ಶ || 1 || ಉರಿದು ವಿನಾಶದ ಹಾದಿಯ ಹಿಡಿದಿದೆ ವಿಶ್ವವ ಕೆಡಿಸುವ ಪರತತ್ವ ಉಳಿಸುವುದೊಂದೇ ಮಾನವಕುಲವನು ಹಿಂದೂ ಧರ್ಮದ ಸಾರಥ್ಯ ಋಷಿಮುನಿ ಪುಂಗವ ಜೀವನ ದೃಷ್ಟಿಯೇ ಮನುಕುಲದುಳಿವಿಗೆ ಆಧಾರ || […]
ಸ್ವಾರ್ಥ ದ್ವೇಷ ನಿರಾಸೆ ಜಾಡ್ಯವ ತೊರೆದು ಮೇಲೇಳ್ ಸೋದರ | ಪ್ರೀತಿ ಗೌರವ ತ್ಯಾಗದಿಂ ಕ – ಟ್ಟೋಣ ಭಾರತ ಮಂದಿರ || ಪ || ಗಾಳಿ ನೀರು ಮಣ್ಣು ಮರಕೆ ನಮ್ಮ ಬೆಳೆಸಿದ ಪ್ರಕೃತಿಗೆ | ಏನ ಕೊಟ್ಟೆವು ತಿರುಗಿ ನಾವು ತ್ಯಾಜ್ಯ ಮಲಿನತೆ ವಿಕೃತಿಯ || 1 || ಸತ್ಯ ಧರ್ಮ ನ್ಯಾಯ ನೀತಿ ತ್ಯಾಗ ನಿಷ್ಠೆಯ ಕಲಿಯದೆ | ಶೌರ್ಯ ಸಾಹಸ ಧ್ಯೇಯ ಮೆರೆಯದ ಬದುಕು ತರವೇ ಬಾಳದೇ || 2 || […]
ಒಳಗಿನ ಕಣ್ಣನು ತೆರೆದು ನೋಡಿದರೆ ತಿಳಿವುದು ಭಾರತ ಮಕ್ಕಳ ಹಿರಿಮೆ || ಪ || ಬುದ್ಧಿಯ ಚೋದಿಸಿ ಜಗವನೆಬ್ಬಿಸುವ ಮಿತ್ರನ ಶ್ರೇಷ್ಠತೆ ಸಾರಿದೆವು ಗಿಡ ಮರ ಮಣ್ಣು ಕಲ್ಲು ನೀರಿನಲ್ಲೂ ಭಗವಂತನ ನಾವ್ ತೋರಿದೆವು || 1 || ಜನಗಳು ಬೇರೆ ಮನವದು ಒಂದೇ ನುಡಿಗಳು ನೂರು ಭಾವನೆಯೊಂದೇ ನಡೆಗಳು ಬೇರೆ ನೀತಿಯದೊಂದೇ ವಿವಿಧತೆಯಲ್ಲಿನ ಏಕತೆಯ || 2 || ಇತರರು ಕಾಣದ ಊಹೆಗೂ ನಿಲುಕದ ಅತಿಶಯ ವಿಷಯವ ದರ್ಶಿಸುತ ಸುತರೆಂದೆಣಿಸುತ ಮತಿಯ ಪ್ರೇರಿಸುತ ಹಿತವನು ಕೋರುವ […]
ಯಾವ ತಾಯ ನೆನೆಯಬೇಕು ನಾವು ಅನುದಿನ ನೋವ ಮರೆಸಿ ನಲಿವು ನೀಡೋ ದಿವ್ಯ ಚೇತನ || ಪ || ಜನಮ ನೀಡಿ ತನ್ನ ಎದೆಯ ಅಮೃತವಿತ್ತಳು ನಡೆಯ ನುಡಿಯ ಕಲಿಸಿ ಜಗದಿ ಬಾಳಲಿಟ್ಟಳು ಮೊದಲ ಗುರುವು ತಾನೇ ಆಗಿ ಬೆಳಕು ತೋರುತ ಮನಸುತುಂಬಿ ಹರಸುತಿರುವ ಜನನಿ ಮಾನ್ಯಳು || 1 || ಕಸವ ತಿಂದು ರಸವ ಮಾಡಿ ನಮಗೆ ಉಣಿಸುವ ಹಸುವು ಕಾಮಧೇನು ಸದಾ ನಮ್ಮ ತಾಯಿಯು ಸಕಲ ಜೀವರಾಶಿಗಳಿಗೆ ಮೂಲಭೂತಳು ಪುಣ್ಯವಂತೆ ಜೀವಗಂಗೆ ಶ್ರೇಷ್ಠ ತಾಯಿಯು […]
ಯುವಶಕ್ತಿಯು ಮೈಕೊಡುವುತ ಮೇಲೆದ್ದರೆ ಇನಿಸು | ನವರಾಷ್ಟ್ರದ ನಿರ್ಮಾಣದ ಕನಸಾಗದೆ ನನಸು || || ಪ || ಹದಿಹರೆಯದ ಭಾವನೆಗಳು ಕೋಮಲತೆಯ ಕಂತೆ ಬಿಸಿಲಾದರೂ ತಂಪಾದರೂ ಅರಳದ ಮೊಗ್ಗಂತೆ | ಸರಿದಾರಿಯ ಮೇಲ್ಪಂಕ್ತಿಯ ತೋರಿಸದಿಹ ಕೊರತೆ ಬರಿದಾಗಿಸಿ ಬಾಳುದ್ದಕೂ ಸೊರಗಿಸುವುದೇ ಚಿಂತೆ || || 1 || ಧನ್ಯತೆಯಲಿ ಬಾಳಿದ ಹಿರಿಜೀವದ ಸಂಯೋಗ ಶೂನ್ಯತೆಯನು ಕಳೆಯುತ ಗುರಿ ಮುಟ್ಟುವ ಸನ್ಮಾರ್ಗ ಸಾಧನೆಯನು ಗೈಯುತ ಮನ ತುಂಬಲಿ ಉತ್ಸಾಹ ಈ ಧರೆಯನು ಸಾರ್ಥಕದೆಡೆ ಒಯ್ಯಲಿ ಈ ದೇಹ || […]
ದೇಶದುನ್ನತಿ ಅಲ್ಲಿ ನೆಲೆಸುವ ಜನರ ಶ್ರದ್ಧೆಯ ಬಯಸಿದೆ ದೇಶಸೇವೆಯೆ ಈಶ ಸೇವೆಯು ಎನುವ ಮನಗಳ ಕರೆದಿದೆ || ಪ || ಹುಲ್ಲು ಬೇರದು ನೀರು ನಿಲುಕಿದ- ರಲ್ಲೆ ಭುವಿಯಲಿ ಬೆಳೆವುದು ಹಸಿರ ಸೂಸುತ ತನ್ನಲಡಗಿಹ ಕಸುವ ಕಾಣಿರೋ ಎನುವುದು || 1 || ಬದುಕು ಸಾಗಿಸಲೊಂದು ದಾರಿಯು ದೊರೆವುದತಿ ಅನಿವಾರ್ಯವು ಕೆದುಕೆ ಬೂದಿಯ ಬುದ್ಧಿ ಅಗ್ನಿಯು ಉರಿದು ಬೆಳಗಲಿ ಧ್ಯೇಯವು || 2 || ಯುಕ್ತರಲಿ ಉಂಟೆಂದು ಬುದ್ಧಿಯು ಬುದ್ಧಿಯಿಂದಲೆ ಭಾವನೆ ಸೂಕ್ತ ರೀತಿಯ ಬಾಳ ಹಾದಿಯು […]
ಭಗವೆಯು ಹಾರಾಡುತಿದೆ ಆಹಹ್ಹಹಾ ಜಗವೇ ತಲೆಬಾಗುತಿದೆ ಓಹೊಹ್ಹೊಹೋ ಎಂಥ ಸಡಗರ……. ಎಂಥ ಸಂಭ್ರಮ ಅಂತಿಮ ಜಯ ಸಾಧನೆಯ ಕ್ಷಣವು ಬಂದಿದೆ || ಪ || ಕಾಶ್ಮೀರ ನಮ್ಮದು ವರ ಹಿಮಾದ್ರಿ ನಮ್ಮದು ಶ್ರೀರಾಮಕೃಷ್ಣರ ಜನ್ಮಭೂಮಿ ನಮ್ಮದು ಶತ್ರುಗಳ ಹೊಂಚನು, ದ್ರೋಹಿಗಳ ಸಂಚನು ಮಿಂಚಿನಂತೆ ಎರಗಿ ವಿಫಲಗೊಳಿಸಬನ್ನಿರಿ || 1 || ಮೆಟ್ಟಿಬನ್ನಿ ಭೇದಭಾವ ಒಂದೇ ಎಲ್ಲರೂ ದೇವರ ಈ ನಾಡಿನಲ್ಲಿ ಸರಿಸಮಾನರು ಸಂಘಟನೆಯ ಶಕ್ತಿಯು, ಇರಲು ರಾಷ್ಟ್ರಭಕ್ತಿಯು ಸಕಲ ಸಂಕಷ್ಟನೀಗಿ ಬಂಧ ಮುಕ್ತಿಯು || 2 || […]