ಧರ್ಮದೇವತೆ ವಿಶ್ವವಂದಿತೆ

ಧರ್ಮದೇವತೆ ವಿಶ್ವವಂದಿತೆ ಮಾತೆ ಹೇ ಮಹಿಮಾನ್ವಿತೆ ಚರಣತಲದಲಿ ಜಲಧಿಸೇವಿತೆ ಓ ಹಿಮಾಲಯ ಶೋಭಿತೆ || ಪ || ಸಸ್ಯ ಶ್ಯಾಮಲ ಸುಜಲಕೋಮಲ ರೂಪು ತ್ಯಜಿಸುತೆ ಕೆರಳುತೆ ಏಳು ಭಾರತಿ ಸ್ವೀಕರಿಸಿದೋ ವೈರಿಪ್ರಾಣಗಳಾಹುತಿ ಪೂರ್ವ ಪಶ್ಚಿಮ ದಕ್ಷಿಣೋತ್ತರದತಿ ಪುನೀತ ರಜಾಂಕಿತೆ ದಿವಿಜ ಪೂಜಿತೆ ದುರುಳ ದಮನಕೆ ಏಳು ದುರ್ಗಾದೇವತೆ || 1 || ದಿಗ್ವಿಜಯಾನಂದ ಕಾರ್ಯಕೆ ಸ್ಥೈರ್ಯ ಸ್ಫೂರ್ತಿಯ ಕರುಣಿಸಿ ಧೈರ್ಯ ಸಾಹಸವೆರೆದು ಹೃದಯದಿ ದಿವ್ಯ ಭಾವವನರಳಿಸಿ ಸಂಸ್ಕೃತಿಯ ಸೌರಭದ ಮೃದುಸುಮಕಗ್ನಿಕಾಂತಿಯ ಲೇಪಿಸಿ ಏಳು ಓ ಸಿಡಿದೇಳು ನಮ್ಮೊಳು […]

Read More

ಈ ನಮ್ಮ ತಾಯಿನಾಡು

ಈ ನಮ್ಮ ತಾಯಿನಾಡು ನಿರುಪಮ ಲಾವಣ್ಯದ ಬೀಡು ಈ ವನದಲಿ ನಲಿದುಲಿವ ಕೋಗಿಲೆಗಳು ನಾವು || ಪ || ಪರ್ವತಗಳಲ್ಲೆ ಹಿರಿಯ ಆಗಸದ ನೆರೆಯ ಗೆಳೆಯ ರಕ್ಷೆಯವನೆ ನಮಗೆ, ಅವನೇ ಮಾರ್ಗದರ್ಶಿ ಗುರಿಗೆ || 1 || ಈ ತಾಯ ಮಡಿಲಿನಲ್ಲಿ-ಸಾವಿರ ನದಿಗಳೆ ಹರಿಯುವುವು ಈ ಸುಂದರ ನಂದನಕೆ ಆ ಸ್ವರ್ಗವೆ ಕರುಬುವುದು || 2 || ಈ ನೆಲವ ಧರ್ಮವೊಂದೂ ಕಲಿಸದು ದ್ವೇಷವನೆಂದೂ ಭಾರತೀಯರು ನಾವು-ನಮ್ಮೀ ದೇಶ ಭರತನಾಡು || 3 ||

Read More

ಅಹನಿ ನಮನ ಅಮರ ಜನನಿ

ಅಹನಿ ನಮನ ಅಮರ ಜನನಿ ಸಕಲಭುವನ ಮೋಹಿನಿ ಭವ್ಯಮೂರ್ತಿ ದಿವ್ಯಕೀರ್ತಿ ನಿನಗೆ ನಿತ್ಯ ಆರತಿ || ಪ || ವಿವಿಧ ವೇಷ ವಿವಿಧ ಭಾಷೆ ಭಂಗಿಗಿರುವ ರಕ್ಷೆಯು ಒಂದೆ ಸತ್ವ ಒಂದೆ ಭಾವ ತುಂಬಿದೊಂದೆ ತತ್ವವು || 1 || ವೇದವಾಣಿ ವೀರವಾಣಿ ಏನು ದಿವ್ಯ ವಾಙ್ಮಯ ಏಕರಾಗ ಏಕತಾಳ ಏಕತಾನ ತನ್ಮಯ || 2 || ಸತ್ಯಶಾಂತಿ ಸಹನೆ ಪ್ರೀತಿ ನಿನ್ನ ಅಮರ ನೀತಿಯು ಮೌನ ಧ್ಯಾನ ಭಕ್ತಿಗಾನ ಕಲಿಸಿ ಯಾವ ಭೀತಿಯು || 3 […]

Read More

ಪುಟ್ಟ ಶ್ಯಾಮ ಪುಟ್ಟ ಶ್ಯಾಮ

ಪುಟ್ಟ ಶ್ಯಾಮ ಪುಟ್ಟ ಶ್ಯಾಮ ಬೆಟ್ಟವನ್ನೇ ಎತ್ತಿದಂಥ ಪುಟ್ಟ ಶ್ಯಾಮ ಜಟ್ಟಿಗಿಂತ ಗಟ್ಟಿ ನಮ್ಮ ದಿಟ್ಟ ಶ್ಯಾಮ || ಪ || ಹುಟ್ಟಿ ಬಂದ ದೇವಕಿಯ ಗರ್ಭದಲ್ಲಿ ಗುಟ್ಟಿನಿಂದ ಸಾಗಿಬಂದ ಬುಟ್ಟಿಯಲ್ಲಿ ಕೆಟ್ಟ ಮಾವ ಕಂಸನ ಕಣ್ಣು ತಪ್ಪಿಸಿ ಬಿಟ್ಟ ಬೀಡು ಗೋಕುಲದ ತೊಟ್ಟಿಲಲ್ಲಿ || 1 || ಹಟ್ಟಿಯಿಂದ ಗೋವುಗಳ ಅಟ್ಟಿ ಬಿಡುವ ಕಟ್ಟ ಬಿಚ್ಚಿ ಕರುಗಳೊಟ್ಟಿಗಾಟವಾಡುವ ಸಿಟ್ಟಿನಿಂದ ಪೆಟ್ಟು ಕೊಡುವೆನೆಂದು ಬಂದರೆ ಕಿಟ್ಟ ತಾನು ಅಟ್ಟದಲ್ಲಿ ಅಡಗಿಕೊಳ್ಳುವ || 2 || ಬಿಚ್ಚಿಟ್ಟ ಬಟ್ಟೆಗಳ […]

Read More

ಹೇ ಹಂಸವಾಹಿನಿ, ಜ್ಞಾನದಾಯಿನಿ

ಹೇ ಹಂಸವಾಹಿನಿ, ಜ್ಞಾನದಾಯಿನಿ | ಅಮ್ಮಾ ದಾರಿತೋರು ಅಮ್ಮಾ ಕರುಣೆ ಬೀರು | ವಸುಧೆಯ ಮುಕುಟದಿ ಮೆರೆಯಲು ಭಾರತ | ಬಹುಬಲ ವಿಕ್ರಮ ನೀಡು || ಪ || ಶೀಲ ಶೌರ್ಯಗಳು ಹೃದಯದಿ ಚಿಮ್ಮಲಿ | ಜೀವನ ತ್ಯಾಗ ತಪೋಮಯವಾಗಲಿ | ಸಂಯಮ ಶಿಸ್ತು ಸ್ನೇಹಗಳುದಿಸಲಿ | ಸ್ವಾಭಿಮಾನ ಬರಲಿ || 1 || ಆಗುವ ಲವಕುಶ ಧ್ರುವ ನಚಿಕೇತ | ಜನತೆಯ ಸಂಕಟ ನೀಗುವ ಸತತ | ಸಾವಿತ್ರೀ ಸತಿ ಜಾನಕಿ ದುರ್ಗೆ | ಮನೆ […]

Read More

ಆವಿನದು ನೊರೆಹಾಲನೊಲ್ಲೆನು (ರಚನೆ – ಸಾಲಿ ರಾಮಚಂದ್ರರಾಯರು)

ಆವಿನದು ನೊರೆಹಾಲನೊಲ್ಲೆನು ದೇವಲೋಕದ ಸುಧೆಯನೊಲ್ಲೆನು ದೇವಿ ನಿನ್ನಯ ನಾಮದದ್ಭುತ ರುಚಿಯನರಿತಿಹೆನು | ಪಾವನಳೆ ನಿನ್ನಂಘ್ರಿಕಮಲದ ಸೇವೆಯದು ದೊರೆತಿಹುದು ತಾಯೇ ಶ್ರೀವರನ ಕೃಪೆಯಿಂದ ಮತ್ತಿನ್ನೇನು ಬೇಡೆನಗೆ || 1 || ಬರಲಿ ಸಿರಿವಂತಿಕೆಯ ಜನ್ಮವು ಬರಲಿ ಕಡುಬಡತನದಿ ಇಲ್ಲವೆ ಇರದು ಚಿಂತೆಯು ತಾಯೇ ನಿನ್ನುದರದಲಿ ಜನಿಸುವುದೇ | ಪರಮ ಭಾಗ್ಯವು ಎಂಬುದರಿಯನೆ ಮರೆಯದಲೆ ಪ್ರತಿ ಜನ್ಮದಲಿ ಶ್ರೀ – ಧರನು ದಯೆಯಿಂದೆನಗೆ ನೀಡಲಿ ನಿನ್ನ ಸೇವೆಯನು || 2 || ಇರಲೆನಗೆ ಕರಕನ್ನವುಣ್ಣಲು ಬರಿಯ ನೆಲವಿರಲೆನಗೆ ಮಲಗಲು ಹರಕು […]

Read More

ಎನಿತೆನಿತೋ ಪುಣ್ಯದಾ

ಎನಿತೆನಿತೋ ಪುಣ್ಯದಾ ಭಾಗ್ಯದಾ ಫಲವಾಗಿ ಭಾರತಿಯ ಬಸಿರಿನಾ ಶಿಶುವಾದೆನಾ ದೇವ ದುರ್ಲಭ ನಾಡು ಸಂಸ್ಕೃತಿಯ ನೆಲೆವೀಡು ಭರತ ದೇಶದ ಪುಣ್ಯ ಕಣವಾದೆ ನಾ || ಪ || ಇಲ್ಲಿ ಹರಿಯುವ ನೀರ ಕಣಕಣವೂ ಪಾವನವು ತಾಯಿ ಗಂಗೆಯ ಪುಣ್ಯ ತೀರ್ಥದಂತೆ ಇಲ್ಲಿರುವ ಗಿಡಬಳ್ಳಿ ವೃಕ್ಷಜನ್ಯಗಳೆಲ್ಲ ಒಂದೊಂದು ಔಷಧೀಯ ಲೋಕದಂತೆ || 1 || ಮಣ್ಣ ಒಳಗಿದೆ ಖನಿಜ, ಮೇಲೆ ಧಾನ್ಯದಾ ಕಣಜ ಭೂಮಾತೆ ಗೋಮಾತೆ ಸಾಕ್ಷಿಯಂತೆ ವಲಯ ಮಾರುತಗಾನ ಪುಣ್ಯ ಕ್ಷೇತ್ರದ ತಾಣ ಭಾರತವು ಸಕಲಗುಣ ನಾಕದಂತೆ […]

Read More

ಜಗದಗಲ ಪಸರಿಸಲಿ ಹಿಂದುತ್ವದಾ ಘೋಷ

ಜಗದಗಲ ಪಸರಿಸಲಿ ಹಿಂದುತ್ವದಾ ಘೋಷ ತಾಯಿ ಭಾರತಿಗಿಂದು ವಿಜಯ ಸಂಘೋಷ ಚಿಮ್ಮಲೀ ಸ್ಫೂರ್ತಿ ಉದ್ಘೋಷ || ಪ || ಸಾವಿಗಂಜದ ವೀರ ಸಂತತಿಯು ನಾವು ತರುಣ ಪಡೆ ಮೇಳವಿಸೆ ತಾಯಿಗೇತರ ನೋವು ನೊಂದವರ ಬಿಗಿದಪ್ಪಿ, ಬಿದ್ದವರ ಮೇಲೆತ್ತಿ ಸಮರಸದಿ ವಿಜಯಶಿಖರಹತ್ತಿ || 1 || ಸ್ವಾರ್ಥ ಮೋಹವ ಮುರಿದು ರಾಷ್ಟ್ರ ಚಿಂತನೆಗೈದು ಸ್ವಾಭಿಮಾನವ ಮೆರೆದು ದೀನಸೇವೆಯಗೈದು ಜಾತಿ ಭೇದವನಳಿಸಿ ಒಂದೇ ಭಾವವ ಬೆರೆಸಿ ನಾಡರಕ್ಷಿಪ ತ್ಯಾಗಭಾವಹರಿಸಿ || 2 || ಸಮರ ಕಾದಿದೆ ಇಂದು ಕಾಯ ಸವೆಸಲು […]

Read More

ಭಾವಮಂದಿರದಲ್ಲಿ ತಾಯ ಮೂರ್ತಿಯನಿರಿಸಿ

ಭಾವಮಂದಿರದಲ್ಲಿ ತಾಯ ಮೂರ್ತಿಯನಿರಿಸಿ ಧ್ಯೇಯ ಜಲದಭಿಷೇಕ ಎರೆಯ ಬನ್ನಿ ನೋವು ನಲಿವಲಿ ಬೆರೆತು ನಾಡ ವೈಭವ ಚರಿತೆ ಬರೆಯ ಬನ್ನಿ || ಪ || ಪಸರಿಸುತ ಜಗದಗಲ ಧರ್ಮಸೂತ್ರದ ಬೆಳಕ ಜ್ಞಾನ ವಿಜ್ಞಾನಗಳ ಧಾರೆಯೆರೆದು ಯೋಗದಮೃತ ಹರಿಸಿ ಆಧ್ಯಾತ್ಮ ಸುಧೆಯನುಣಿಸಿ ವಿಶ್ವವನೆ ಪೊರೆದಂತ ಹಿರಿಮೆ ನಮದು || 1 || ತರತಮವ ಬದಿಗಿಟ್ಟು ಜನಹಿತವ ಎದುರಿಟ್ಟು ಸಾಮರಸ್ಯದ ಸೂತ್ರ ಹೆಣೆದು ಹೆಣೆದು ಜಾಡ್ಯ ಬಡಿದೋಡಿಸುತ ಮೌಢ್ಯಗಳ ಮರ್ದಿಸುತ ಯುವ ಮನಕೆ ಜಾಗೃತಿಯ ಭಾವ ಬೆಸೆದು || 2 […]

Read More

ವಿಶ್ವಕೆ ಹೊಸತನ ನೀಡಿದ ಮಣ್ಣಲಿ

ವಿಶ್ವಕೆ ಹೊಸತನ ನೀಡಿದ ಮಣ್ಣಲಿ ಜನಿಸಿದ ನಾವೇ ಧನ್ಯ ಉಳಿಯಲಿ ಬೆಳೆಯಲಿ ಅನುದಿನ ನಲಿಯಲಿ ನವ ಉನ್ಮೇಷದ ತಾರುಣ್ಯ || ಪ || ಹದಿಹರೆಯದ ಬಿಸಿನೆತ್ತರ ಹರಿವಲಿ ಪುಟಿದೇಳಲಿ ಯುವ ಚೈತನ್ಯ ಮೈಮನಗಳ ಕೊಳೆ ಕೊಡವುತ ಕೊಡವುತ ಹೊರಹೊಮ್ಮಲಿ ಚಿರ ಜಾಗರಣ ಮುಗಿಲೆತ್ತರ ಬಾನೆತ್ತರ ಏರಲಿ ಭಾವೋನ್ಮೇಷದ ಸ್ಪುರಣಾ……|| 1 || ಉಕ್ಕುತ ಹರಿಯುವ ಜ್ಞಾನದ ತೊರೆಯಲಿ ಈಜಾಡುವ ಹುರುಪಿನಲಿ ರೋಷದಿ ಕ್ಲೇಶದಿ ಸಾಧನೆಯಿರದು ಧ್ಯೇಯದ ಕಡೆ ಗುರಿಯಿರಲಿ ಸೃಜನಾತ್ಮಕ ರಚನಾತ್ಮಕ ಕಾರ್ಯಕೆ ಮನದಲಿ ಶತ ಶ್ರಮವಿರಲಿ […]

Read More