ಹೇ ಹಂಸವಾಹಿನಿ, ಜ್ಞಾನದಾಯಿನಿ

ಹೇ ಹಂಸವಾಹಿನಿ, ಜ್ಞಾನದಾಯಿನಿ |
ಅಮ್ಮಾ ದಾರಿತೋರು ಅಮ್ಮಾ ಕರುಣೆ ಬೀರು |
ವಸುಧೆಯ ಮುಕುಟದಿ ಮೆರೆಯಲು ಭಾರತ |
ಬಹುಬಲ ವಿಕ್ರಮ ನೀಡು || ಪ ||

ಶೀಲ ಶೌರ್ಯಗಳು ಹೃದಯದಿ ಚಿಮ್ಮಲಿ |
ಜೀವನ ತ್ಯಾಗ ತಪೋಮಯವಾಗಲಿ |
ಸಂಯಮ ಶಿಸ್ತು ಸ್ನೇಹಗಳುದಿಸಲಿ |
ಸ್ವಾಭಿಮಾನ ಬರಲಿ || 1 ||

ಆಗುವ ಲವಕುಶ ಧ್ರುವ ನಚಿಕೇತ |
ಜನತೆಯ ಸಂಕಟ ನೀಗುವ ಸತತ |
ಸಾವಿತ್ರೀ ಸತಿ ಜಾನಕಿ ದುರ್ಗೆ |
ಮನೆ ಮನೆಯಲಿ ಬರಲಿ || 2 ||

2 thoughts on “ಹೇ ಹಂಸವಾಹಿನಿ, ಜ್ಞಾನದಾಯಿನಿ

  1. Searching from too many years which I have learnt in primary school,
    At lost I got it by typing one stanza

    Thanks

Leave a Reply

Your email address will not be published. Required fields are marked *