ಈ ನಮ್ಮ ತಾಯಿನಾಡು

ಈ ನಮ್ಮ ತಾಯಿನಾಡು ನಿರುಪಮ ಲಾವಣ್ಯದ ಬೀಡು
ಈ ವನದಲಿ ನಲಿದುಲಿವ ಕೋಗಿಲೆಗಳು ನಾವು || ಪ ||

ಪರ್ವತಗಳಲ್ಲೆ ಹಿರಿಯ
ಆಗಸದ ನೆರೆಯ ಗೆಳೆಯ
ರಕ್ಷೆಯವನೆ ನಮಗೆ, ಅವನೇ
ಮಾರ್ಗದರ್ಶಿ ಗುರಿಗೆ || 1 ||

ಈ ತಾಯ ಮಡಿಲಿನಲ್ಲಿ-ಸಾವಿರ
ನದಿಗಳೆ ಹರಿಯುವುವು
ಈ ಸುಂದರ ನಂದನಕೆ
ಆ ಸ್ವರ್ಗವೆ ಕರುಬುವುದು || 2 ||

ಈ ನೆಲವ ಧರ್ಮವೊಂದೂ
ಕಲಿಸದು ದ್ವೇಷವನೆಂದೂ
ಭಾರತೀಯರು ನಾವು-ನಮ್ಮೀ
ದೇಶ ಭರತನಾಡು || 3 ||

Leave a Reply

Your email address will not be published. Required fields are marked *

*

code