ಜಗದಗಲ ಪಸರಿಸಲಿ ಹಿಂದುತ್ವದಾ ಘೋಷ

ಜಗದಗಲ ಪಸರಿಸಲಿ ಹಿಂದುತ್ವದಾ ಘೋಷ
ತಾಯಿ ಭಾರತಿಗಿಂದು ವಿಜಯ ಸಂಘೋಷ
ಚಿಮ್ಮಲೀ ಸ್ಫೂರ್ತಿ ಉದ್ಘೋಷ || ಪ ||

ಸಾವಿಗಂಜದ ವೀರ ಸಂತತಿಯು ನಾವು
ತರುಣ ಪಡೆ ಮೇಳವಿಸೆ ತಾಯಿಗೇತರ ನೋವು
ನೊಂದವರ ಬಿಗಿದಪ್ಪಿ, ಬಿದ್ದವರ ಮೇಲೆತ್ತಿ
ಸಮರಸದಿ ವಿಜಯಶಿಖರಹತ್ತಿ || 1 ||

ಸ್ವಾರ್ಥ ಮೋಹವ ಮುರಿದು ರಾಷ್ಟ್ರ ಚಿಂತನೆಗೈದು
ಸ್ವಾಭಿಮಾನವ ಮೆರೆದು ದೀನಸೇವೆಯಗೈದು
ಜಾತಿ ಭೇದವನಳಿಸಿ ಒಂದೇ ಭಾವವ ಬೆರೆಸಿ
ನಾಡರಕ್ಷಿಪ ತ್ಯಾಗಭಾವಹರಿಸಿ || 2 ||

ಸಮರ ಕಾದಿದೆ ಇಂದು ಕಾಯ ಸವೆಸಲು ಬನ್ನಿ
ಸತತ ಆಕ್ರಮಣಗಳಿಗುತ್ತರಿಸಬನ್ನಿ
ಯುವಮನದಿ ಜಾಗೃತಿಯ ಘೋಷ ಮೊಳಗಿಸುತ
ಸಂಸ್ಕೃತಿಯ ನವಪ್ರಭೆಯ ಹೊಮ್ಮಿಸುತ್ತ || 3 ||

Leave a Reply

Your email address will not be published. Required fields are marked *

*

code